ವೆಲ್ಲಿಂಗ್ಟನ್: ಟಿ20 ಸ್ಪೆಷಲಿಸ್ಟ್ ಆಗಿರುವ ಟೀಂ ಇಂಡಿಯಾ (Team India) ಆಟಗಾರ ಸೂರ್ಯಕುಮಾರ್ ಯಾದವ್ (Suryakumar Yadav) ಅವರನ್ನ ಅಭಿಮಾನಿಗಳು ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ಮನ್ ಎಬಿ ಡಿ ವಿಲಿಯರ್ಸ್‌ಗೆ (Ab de Villiers) ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಶುರು ಮಾಡಿದ್ದಾರೆ.
Who is best batsman between them .
1 .like ♥️- Surya Kumar yadav
2. Retweet ????- Ab de Villiers#SuryakumarYadav #NZvsIND pic.twitter.com/KFyl8zxvo5
— Harsh Gupta (@harshgupta__1) November 20, 2022
Advertisement
ಪ್ರತಿ ಇನ್ನಿಂಗ್ಸ್‌ನಲ್ಲೂ ಒಂದಿಲ್ಲೊಂದು ದಾಖಲೆ ಬರೆಯುತ್ತಿರುವ ಸೂರ್ಯಕುಮಾರ್ ಯಾದವ್ ಈ ವರ್ಷದಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪ್ ಬ್ಯಾಟ್ಸ್‌ಮನ್ ಸಹ ಆಗಿದ್ದಾರೆ. ಭಾರತದ ಮಿಸ್ಟರ್ 360 ಎಂದೇ ಕರೆಯುವ ಸೂರ್ಯಕುಮಾರ್ ಯಾದವ್‌ನನ್ನು ಅಭಿಮಾನಿಗಳು ಎಬಿಡಿಗೆ (Ab de Villiers) ಹೋಲಿಸಿ ಟ್ವಿಟ್ಟರ್‌ನಲ್ಲಿ ಟ್ರೆಂಡ್ ಶುರು ಮಾಡಿದ್ದಾರೆ. ಅಲ್ಲದೇ ಇಬ್ಬರಲ್ಲಿ ಯಾರು ಬೆಸ್ಟ್? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಅಭಿಮಾನಿಗಳು ಸೂರ್ಯ ಟಿ20 (T20) ಸ್ಪೆಷಲಿಸ್ಟ್ ಆದ್ರೆ, ಎಬಿಡಿ ಎಲ್ಲ ಆವೃತ್ತಿಗಳಲ್ಲೂ ಬೆಸ್ಟ್ ಬ್ಯಾಟ್ಸ್‌ಮನ್ ಅವರ ಆಟ ಅವರವರಿಗೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 11 ಬೌಂಡರಿ, 7 ಸಿಕ್ಸ್ – ಶತಕ ಸಿಡಿಸಿದ ದಾಖಲೆ ವೀರ ಸೂರ್ಯ
Advertisement
Advertisement
ಕೀವಿಸ್ (New Zealand) ವಿರುದ್ಧ ದ್ವಿಪಕ್ಷೀಯ ಸರಣಿಯ ಮೊದಲ ಪಂದ್ಯದಲ್ಲಿ ಅಬ್ಬರಿಸಿದ ಸೂರ್ಯ ಕೇವಲ 49 ಎಸೆತಗಳಲ್ಲಿ ಸ್ಫೋಟಕ ಶತಕ ಸಿಡಿಸಿ, 51 ಎಸೆತಗಳಲ್ಲಿ ಅಜೇಯ 111 ರನ್ ಚಚ್ಚಿ ಮಿಂಚಿದ್ದಾರೆ. ಈ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಂತರ ಸ್ಪೋಟಕ ಶತಕ ಸಿಡಿಸಿದ 2ನೇ ಆಟಗಾರರಾಗಿದ್ದರು. ಇದು ಟಿ20 ನಲ್ಲಿ ಸೂರ್ಯಕುಮಾರ್ ಸಿಡಿಸಿದ 2ನೇ ಶತಕವಾಗಿದೆ. ಇದನ್ನೂ ಓದಿ: ಶತಕ ಸಿಡಿಸಿ ಮೆರೆದ ಸೂರ್ಯ – ಕೀವಿಸ್ ಕಿವಿ ಹಿಂಡಿದ ಭಾರತ
Advertisement
ಸೂರ್ಯ ಈಗ ಸಿಕ್ಸರ್ ವೀರ:
ಸ್ಫೋಟಕ ಶತಕ ಸಿಡಿಸಿದ ಸೂರ್ಯಕುಮಾರ್ ಯಾದವ್ ಈ ವರ್ಷದ ಆವೃತ್ತಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಟಾಪರ್ ಆಗಿದ್ದಾರೆ. ಈ ಆವೃತ್ತಿಯಲ್ಲಿ ಒಟ್ಟು 60 ಸಿಕ್ಸರ್ ಸಿಡಿಸಿದ ಸೂರ್ಯ ಮೊದಲ ಸ್ಥಾನದಲ್ಲಿದ್ದರೆ 43 ಸಿಕ್ಸರ್ ಸಿಡಿಸಿದ ಎಂ.ಡಿ ವಸೀಮ್ 2ನೇ ಸ್ಥಾನದಲ್ಲಿ ಹಾಗೂ 39 ಸಿಕ್ಸರ್ ಸಿಡಿಸಿದ ವೆಸ್ಟ್ ಇಂಡೀಸ್‌ನ ರೋವ್ಮನ್ ಪೋವೆಲ್ ನಂತರದ ಸ್ಥಾನದಲ್ಲಿದ್ದಾರೆ.
ಭಾನುವಾರ ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿತು. ಬೃಹತ್ ಮೊತ್ತದ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 18.5 ಓವರ್‌ಗಳಲ್ಲೇ ತನ್ನೆಲ್ಲಾ ವಿಕೆಟ್‌ಗಳನ್ನು ಕೆಳದುಕೊಂಡು 65 ರನ್‌ಗಳ ಅಂತರದಲ್ಲಿ ಹೀನಾಯ ಸೋಲನುಭವಿಸಿತು.