ಬೆಂಗಳೂರು: ಹಿಂದೂ ಸಂಘಟನೆ ಆಯೋಜನೆಯಲ್ಲಿ ಪಾಕ್ ಪರ ಘೋಷಣೆ ಕೂಗಿ ಭಿತ್ತಪತ್ರ ಪದರ್ಶಿಸಿದ ಯುವತಿ ಆರ್ದ್ರಾ ನಾರಾಯಣನ್ ಳನ್ನು ಪೊಲೀಸರು ಬಂಧಿಸಿದ್ದಾರೆ. ಯುವತಿಯನ್ನು ರಹಸ್ಯ ಸ್ಥಳದಲ್ಲಿರಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈಗಾಗಲೇ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರ್ದ್ರಾ ವಿರುದ್ಧ ಹಿಂದೂ ಸಂಘಟನೆಗಳು ದೂರು ದಾಖಲಿಸಿವೆ.
Advertisement
ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆದ ಸಿಎಎ ವಿರುದ್ಧ ಪ್ರತಿಭಟನೆಯಲ್ಲಿ ಅಮೂಲ್ಯಾ ಲಿಯೋನ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಳು. ಈ ಹಿನ್ನೆಲೆಯಲ್ಲಿ ಅಮೂಲ್ಯ ಹೇಳಿಕೆ ಖಂಡಿಸಿ ಹಿಂದೂ ಸಂಘಟನೆಗಳು ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸುತ್ತಿದ್ದವು. ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಮುಕ್ತಿ ಮುಸ್ಲಿಂ, ಮುಕ್ತಿ ಕಾಶ್ಮೀರ್, ಮುಕ್ತಿ ದಲಿತ್ ಕಾರ್ಡ್ ಭಿತ್ತಿಪತ್ರ ಹಿಡಿದು ಬಂದ ಆರ್ದ್ರಾ ಪಾಕ್ ಪರ ಘೋಷಣೆ ಕೂಗಲಾರಂಭಿಸಿದ್ದಾಳೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಆರ್ದ್ರಾಳನ್ನು ವಶಕ್ಕೆ ಪಡೆದು ಬಂಧಿಸಿದ್ದಾರೆ.
Advertisement
Advertisement
ಯಾರು ಈ ಆರ್ದ್ರಾ ನಾರಾಯಣನ್?: ಬೆಂಗಳೂರಿನ ಮಲ್ಲೇಶ್ವರಂ ನಿವಾಸಿಯಾಗಿರುವ ನಾರಾಯಣನ್ ಪುತ್ರಿ ಆರ್ದ್ರಾ. ಬೆಂಗಳೂರಿನಲ್ಲಿಯೇ ಮನೆ ಹೊಂದಿದ್ದರೂ ಆರ್ದ್ರಾ ಪಿಜಿಯಲ್ಲಿ ವಾಸವಾಗಿದ್ದಳು. ಆರ್ದ್ರಾ ಪೋಷಕರು ಖಾಸಗಿ ಕಂಪನಿಯ ಉದ್ಯೋಗಿಗಳು ಎಂದು ತಿಳಿದು ಬಂದಿದೆ. ಟ್ರಾನ್ಸಜೆಂಡರ್ ಆಗಿರುವ ಆರ್ದ್ರಾ, ಲೈಂಗಿಕ ಅಲ್ಪಸಂಖ್ಯಾತರ ಹೋರಾಟದಲ್ಲಿ ಗುರುತಿಸಿಕೊಂಡಿದ್ದಾಳೆ. ಡಿಸೈನರ್ ಆಗಿ ಕೆಲಸ ಮಾಡಿಕೊಂಡಿರುವ ಆರ್ದ್ರಾ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಳು. ಆರ್ದ್ರಾ ಮತ್ತು ಅಮೂಲ್ಯ ಇಬ್ಬರು ಒಂದೇ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ದೆಹಲಿಯ ಇಂದಿರಾಗಾಂಧಿ ಮುಕ್ತ ವಿವಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ.
Advertisement
ಪಾಕ್ ಪರ ಘೋಷಣೆ ಕೂಗುತ್ತಿದ್ದಂತೆ ಪ್ರತಿಭಟನಾ ಸ್ಥಳದಲ್ಲಿದ್ದ ಪೊಲೀಸರು ಆರ್ದ್ರಾಳನ್ನು ಬಂಧಿಸಿದ್ದಾರೆ. ಪೊಲೀಸ್ ವಿಚಾರಣೆ ವೇಳೆ ನನ್ನ ಲೈಫ್ ನನ್ನ ಚಾಯ್ಸ್. ಮಾತನಾಡಲು ನನಗೆ ಸ್ವಾತಂತ್ರವಿದೆ. ನನ್ನ ಸ್ವತಂತ್ರಕ್ಕೆ ಅಡ್ಡಿ ಆಗೋಕೆ ನೀವ್ಯಾರು?. ಗುರುವಾರ ಬಂಧಿತಳಾಗಿರುವ ಅಮೂಲ್ಯ ನನ್ನ ಫೇಸ್‍ಬುಕ್ ಫ್ರೆಂಡ್. ನಾನು ಆಕೆಯಿಂದ ಪ್ರೇರಿಪಿತಳಾಗಿಲ್ಲ. ನನ್ನ ಸಿದ್ಧಾಂತವನ್ನು ನಾನು ಹೇಳಿದ್ದೇನೆ ಎಂದು ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾಳೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.