ಇಂದು ನಡೆದ ಲೋಕಸಭಾ ಚುನಾವಣೆಯ (Election) ಮತದಾನದಲ್ಲಿ ಸಕ್ರಿಯರಾಗಿ ಭಾಗಿಯಾಗಿದ್ದಾರೆ ನಟ ರಕ್ಷಿತ್ ಶೆಟ್ಟಿ (Rakshit Shetty), ಉಡುಪಿಗೆ ತೆರಳಿ ವೋಟು ಮಾಡಿರುವ ಅವರು, ಮಾಧ್ಯಮಗಳ ಜೊತೆ ಅಚ್ಚರಿ ಪಡುವಂತಹ ಹೇಳಿಕೆ ನೀಡಿದ್ದಾರೆ. ನಾನು ಮತ (Voting) ಹಾಕಿದವರು ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಅದರಲ್ಲಿ ಅನುಮಾನವೇ ಬೇಡ ಎಂದಿದ್ದಾರೆ.
ವೋಟು ಹಾಕಿದವರು ಗೆಲ್ಲುತ್ತಾರೆ ಎಂದು ಹೇಳಿ ಅಚ್ಚರಿ ಮೂಡಿಸುವುದರ ಜೊತೆಗೆ, ನಾನು ಯಾರಿಗೆ ಮತ ಹಾಕಿದ್ದೇನೆ ಎಂದು ಮುಂದಿನ ವರ್ಷ ಹೇಳುತ್ತೇನೆ. ಮತ ಹಾಕದೆ ಯಾರನ್ನು ದೂರಲು ನಮಗೆ ಹಕ್ಕು ಇಲ್ಲ. ಕಡ್ಡಾಯ ಮತದಾನ ನಿಯಮ ಜಾರಿಗೆ ತರುವಂತೆ ಪೇಜಾವರ ಶ್ರೀಗಳು ಹೇಳಿದ್ದರು. ಅದು ಬಹಳ ಒಳ್ಳೆಯ ಯೋಚನೆ ಎಂದಿದ್ದಾರೆ.
ಮುಂದುವರೆದು ಮಾತನಾಡಿದ ರಕ್ಷಿತ್, ಹಂಡ್ರೆಡ್ ಪರ್ಸೆಂಟ್ ವೋಟು ಅಂದ್ರೆ ಜಾರಿಗೆ ತರುವುದು ಸ್ವಲ್ಪ ಕಷ್ಟ ಇದೆ. ಎಲ್ಲಾ ಜನರನ್ನು ಮತಗಟ್ಟೆಗೆ ತರುವುದು ಟಫ್ ಟಾಸ್ಕ್. ಮುಂದೆ ಐದು- ಹತ್ತು ವರ್ಷದಲ್ಲಿ ಅದನ್ನ ಜಾರಿಗೆ ತರಬಹುದು. ಅಂತರ್ಜಾಲದ ಮೂಲಕ ಮತ ಹಾಕುವ ವ್ಯವಸ್ಥೆ ಬಂದರೆ ಇದು ಸಾಧ್ಯವಾಗುತ್ತದೆ. ಸದ್ಯಕ್ಕೆ 100% ಮತದಾನ ಮಾಡಿಸುವುದು ಕಷ್ಟ ಸಾಧ್ಯ. ನಾನು ವೋಟು ಮಾಡುವುದಕ್ಕೋಸ್ಕರ ಊರಿಗೆ ಬಂದಿದ್ದೇನೆ ಎಂದಿದ್ದಾರೆ.