ಬೆಂಗಳೂರು: ಆರೋಪ ಬಂದ ಮೇಲೆ ರಾಜೀನಾಮೆ ಕೋಡಬೇಕಿತ್ತು. ಆದ್ರೆ ಕುರ್ಚಿಗೆ ಅಂಟಿಕೊಡು ಸಿಎಂ (Chief Minister) ಕೂತ್ಕೊಂಡು ರಾಜ್ಯಪಾಲರ ಮೇಲೆ ಗೂಬೆ ಕೂರಿಸೋದನ್ನ ಬಿಡಬೇಕು ಅಂತಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ (Sunil Kumar) ಕಿಡಿ ಕಾರಿದ್ದಾರೆ.
Advertisement
ಬಿಜೆಪಿ ಕಚೇರಿಯಲ್ಲಿ (BJP Office) ಮಾತನಾಡಿದ ಅವರು, ಮೊದಲು ರಾಜೀನಾಮೆ ಕೊಟ್ಟು ತನಿಖೆ ಎದರಿಸಲಿ, ನಂತರ ಅದರಲ್ಲಿ ತಪ್ಪಿಲ್ಲ ಅಂದರೆ ಮತ್ತೆ ಸಿಎಂ ಆಗಲಿ. ಇನ್ನೂ ನಾವು ಯಾವುದೇ ಅಪರೇಷನ್ ಕಮಲಕ್ಕೆ ಕೈ ಹಾಕಿಲ್ಲ ಕೈ ಹಾಕೋದು ಇಲ್ಲ. ಅವರರವರ ಒಳಗಿನ ಮತ್ತೆ ಭ್ರಷ್ಟಾಚಾರ ಮುಚ್ಚಿ ಕೊಳ್ಳಲು ಈ ಹೇಳಿಕೆ ಕೊಡ್ತಿದ್ದಾರೆ. ಸರ್ಕಾರ ಅಸ್ಥಿರಗೊಳಿಸುವ ಅಂತಹ ಪ್ರಯತ್ನ ಬಿಜೆಪಿ ಮಾಡಲ್ಲ ಅಂತ ಹೇಳಿದರು. ಇದನ್ನೂ ಓದಿ: ಟೀಚರ್ ಹೊಡೆದ್ರು ಅಂತಾ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ – ಶಾಲಾ ಬಿಲ್ಡಿಂಗ್‌ನ 3ನೇ ಫ್ಲೋರ್‌ನಿಂದ ಏಕಾಏಕಿ ಜಿಗಿದ ವಿದ್ಯಾರ್ಥಿನಿ!
Advertisement
Advertisement
ಕಾಂಗ್ರೆಸ್ ಸರ್ಕಾರದಲ್ಲಿ (Karnataka Government) ಅಸ್ಥಿರತೆ ಕಾಣ್ತಿದೆ. ಸ್ವತಃ ಸಿಎಂ ತಮ್ಮ ಕುರ್ಚಿ ಉಳಿಸಿಕೊಳ್ಳಲು ಜನ ಕಲ್ಯಾಣದ ಯೋಜನೆಗಳ ಕೈ ಬಿಟ್ಟಿದ್ದಾರೆ. ಯಾವುದೇ ಜಿಲ್ಲೆಗಳಲ್ಲೂ ಸಚಿವರು ಪ್ರವಾಸ ಸಭೆಗಳನ್ನು ನಡೆಸ್ತಿಲ್ಲ. ಜನರ ಬವಣೆಗಳನ್ನು ಕೇಳದಿರುವ ಪರಿಸ್ಥಿತಿ ಇದೆ. ಆಡಳಿತ ಪಕ್ಷದ ಸದಸ್ಯರೇ ಬೇರೆ ಬೇರೆ ಪ್ರತಿಭಟನೆ ಮಾಡ್ತಿದ್ದಾರೆ. ಜನರ ಬಗ್ಗೆ ಯೋಚನೆ ಮಾಡದಿರುವುದು ಅತ್ಯಂತ ಶೋಚನೀಯ ಸ್ಥಿತಿ ಅಂತಾ ಟೀಕಿಸಿದರು. ಆದ್ರೆ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕಮಾಂಡ್‌ಗೆ ವರದಿ ಕೊಡಲು ಸಿಎಂ ದೆಹಲಿಗೆ ತೆರಳಿದ್ದಾರೆ.
Advertisement
ಸಿಎಂ ರಾಜ್ಯದ ಜನರ ಪ್ರಶ್ನೆಗಳಿಗೆ ಉತ್ತರ ಕೊಡಬೇಕು. ಮೈಸೂರಿನಲ್ಲಿರುವ ಜಮೀನನ್ನು ಹೇಗೇ ಅಕ್ರಮವಾಗಿ ತಮ್ಮ ಬಾಮೈದನಿಗೆ ರಿಜಿಸ್ಟರ್ ಮಾಡಿಸಿಕೊಂಡ್ರು? ದಾಖಲೆಗಳ ನಾಶ ಪಡಿಸಲು ವೈಟ್ನರ್ ಹಚ್ಚಿದ್ದು ಯಾರು? ಇಷ್ಟು ದೊಡ್ಡ ಪ್ರಮಾಣದ ಹಗರಣ ಆಗ್ತಿದ್ರು ಸಿಎಂ ಯಾಕೇ ಕೈ ಕಟ್ಟಿಕೊಂಡು ಕುಳಿತುಕೊಂಡಿದ್ಸಾರೆ?ವಾಲ್ಮೀಕಿ ಹಗರಣದಲ್ಲಿ ತನಿಖೆ ಮಾಡ್ತಾ ಮಾಡ್ತಾ ಚಾರ್ಜ್ ಶೀಟ್ ನಲ್ಲಿ ಯಾಕೇ ಸಚಿವರು, ಶಾಸಕರ ಹೆಸರನ್ನು ಕೈ ಬಿಟ್ರಿ? ನಾವು ದಲಿತರ ಪರ ಎಂದು ಏಕೆ ಹೇಳ್ತಿದ್ದೀರಿ? ಇದಕ್ಕೆಲ್ಲಾ ಸ್ವತಃ ತಾವೇ ಉತ್ತರವನ್ನು ಕೊಡಬೇಕು ಅಂತಾ ಆಗ್ರಹಿಸಿದ್ರು. ಇದನ್ನೂ ಓದಿ: ಸರ್ಕಾರದ ಎಲ್ಲಾ ಇಲಾಖೆಗಳ ನಾಮಫಲಕವನ್ನ ಕಡ್ಡಾಯವಾಗಿ ಕನ್ನಡದಲ್ಲೇ ಪ್ರದರ್ಶಿಸಬೇಕು – CS ಆದೇಶ
ಸರ್ಕಾರವನ್ನು ಬೀಳಿಸ್ತೀವಿ ಅಂತಾ ನಾವು ಯಾರು ಹೇಳಿಲ್ಲ. ಸರ್ಕಾರ ಉರುಳಿಸಲು ನಿಮ್ಮ ಪಾರ್ಟಿಯಿಂದಲೇ ನಡೆದಿದ್ಯಾ? ಸಿದ್ದರಾಮಯ್ಯ ಇಳಿದ್ರೆ ಕಾಂಗ್ರೆಸ್‌ನಲ್ಲಿ ಮತ್ತೊಬ್ಬ ಸಿಎಂ ಆಗುವ ಅರ್ಹತೆ ಇಲ್ಲವಾ? ನಿಮ್ಮ ಮಾತು ನೋಡಿದ್ರೆ ರಾಜ್ಯದ ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಬಿಟ್ಟರೆ, ಮತ್ತೊಬ್ಬ ಪರ್ಯಾಯ ಸಿಎಂ ಆಗುವ ಅರ್ಹತೆ ಇಲ್ಲ ಅಂತಾ ವಾಗ್ದಾಳಿ ನಡೆಸಿದ್ರು. ಬಿಲ್‌ಗಳನ್ನ ವಾಪಸ್ ಕಳುಹಿಸಿದ್ದಾರೆಂದು ಗವರ್ನರ್ ಬಗ್ಗೆ ಮಂತ್ರಿಗಳು ಎಲ್ಲೆ ಮೀರಿ ಮಾತಾಡ್ತಿದ್ದಾರೆ. ಹಿಂದೆಯೂ ಗವರ್ನರ್‌ಗಳು ವಿಧೇಯಕ ವಾಪಸ್ಸು ಕಳುಹಿಸಿರುವ ಉದಾಹರಣೆಗಳಿವೆ. ಯಾವ ವಿಧೇಯಕ ಜನಪರವಾಗಿ ಇರುತ್ತೋ ಅದನ್ನು ಗವರ್ನರ್ ಅಂಗೀಕಾರ ಮಾಡಿ ಕಳುಹಿಸ್ತಾರೆ. ಯಾವುದಾದರೂ ಅನುಮಾನ ಇದ್ದರೇ ಏಕ ಪಕ್ಷೀಯವಾಗಿ ಇರಬಹುದು ಅಂತಾ ವಾಪಸ್ಸು ಕಳುಹಿಸ್ತಾರೆ. ಇದೇನೂ ಮೊದಲ ಬಾರಿಯಾಗಿ ಅಲ್ಲ. ಗವರ್ನರ್ ಸಂವಿಧಾನ ಬದ್ಧವಾಗಿ ನಡೆಯುತ್ತಿದ್ದಾರೆ. ಇದನ್ನು ವಿರೋಧಿಸಿ ಕಾಂಗ್ರೆಸ್ ಮಾತಾಡ್ತಿರೋದು ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ ಅಂತಾ ಕಿಡಿಕಾರಿದ್ರು. ಇದನ್ನೂ ಓದಿ: ಬಿಜೆಪಿ ಏನೇ ಆರೋಪ ಮಾಡಲಿ ತಲೆ ಕೆಡಿಸಿಕೊಳ್ಳಬೇಡಿ: ಸಿಎಂಗೆ ಹೈಕಮಾಂಡ್ ಅಭಯ