ಗಾಂಧಿನಗರ: ಕೋವಿಡ್-19 ಸೋಂಕಿಗೆ ತುತ್ತಾಗಿ ತೀವ್ರ ಸಮಸ್ಯೆ ಎದುರಿಸಿದವರು ಹೃದಯಾಘಾತದಿಂದ (Heart Attack) ಪಾರಾಗಲು ಕನಿಷ್ಠ ಒಂದರಿಂದ ಎರಡು ವರ್ಷಗಳ ಕಾಲ ಕಠಿಣ ವ್ಯಾಯಾಮ ಹಾಗೂ ಅತಿಯಾದ ಶ್ರಮದ ಕೆಲಸಗಳಲ್ಲಿ ತೊಡಗದಂತೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ (Mansukh Mandaviya) ಸಲಹೆ ನೀಡಿದ್ದಾರೆ.
ನವರಾತ್ರಿ ಹಬ್ಬದ ಆಚರಣೆ ವೇಳೆ ಗರ್ಬಾ ನೃತ್ಯದಲ್ಲಿ ತೊಡಗಿದ್ದಾಗ 10 ಮಂದಿ ಮೃತಪಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತೀವ್ರವಾಗಿ ಕಾಡಿದ್ದ ಕೋವಿಡ್-19ನ (COVID-19) ಪ್ರಭಾವ ಕಡಿಮೆಯಾಗಿ ಇನ್ನೂ ಸಾಕಷ್ಟು ನಮಯ ಕಳೆದಿಲ್ಲ. ಹೀಗಿರುವಾಗ ನಾವು ನಮ್ಮ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಸರ್ಕಾರ ಚೇಂಜ್ ಮಾಡುವ ಶಕ್ತಿ ನಮ್ಮ ಸಮಾಜದ ಲೀಡರ್‌ಗಳಿಗಿದೆ- ಖರ್ಗೆ ಆಪ್ತ ಶಾಸಕನಿಂದ ಹೊಸ ಬಾಂಬ್
Advertisement
Advertisement
ಐಸಿಎಂಆರ್ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಕೋವಿಡ್ ಸಂತ್ರಸ್ತರು ಹೃದಯಾಘಾತವನ್ನು ತಪ್ಪಿಸಲು ಕನಿಷ್ಠ ಒಂದು ವರ್ಷ ಅಥವಾ ಎರಡು ವರ್ಷಗಳ ಕಾಲ ಅತಿಯಾದ ಆಯಾಸವಾಗುವಂತಹ ಕೆಲಸ, ಓಟ ಹಾಗೂ ಕಠಿಣ ವ್ಯಾಯಾಮದಲ್ಲಿ ತೊಡಗದಂತೆ ಉಲ್ಲೇಖಿಸಿದೆ. ಈ ಕಾರಣದಿಂದಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಕೋವಿಡ್ ಸಮಸ್ಯೆಯಿಂದ ಬಳಲಿ ಗುಣಮುಖರಾದವರು ಈ ಬಗ್ಗೆ ಮತ್ತಷ್ಟು ಜಾಗ್ರತೆ ವಹಿಸಬೇಕು. ಹೃದಯಾಘಾತದಿಂದ ತಪ್ಪಿಸಿಕೊಳ್ಳಲು ಇದು ಸರಿಯಾದ ಮಾರ್ಗ ಎಂದು ಅವರು ಹೇಳಿದ್ದಾರೆ.
Advertisement
Advertisement
ಇತ್ತೀಚೆಗೆ ಗುಜರಾತಿನ ಗಾರ್ಬಾ ನೃತ್ಯದಲ್ಲಿ ತೊಡಗಿದ್ದ ಹತ್ತಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಹಗರಣ- ಮನೀಶ್ ಸಿಸೋಡಿಯಾ ಜಾಮೀನು ನಿರಾಕರಿಸಿದ ಸುಪ್ರೀಂ
Web Stories