ಕಮಲ್ ಹಾಸನ್ ನಾಯಕರಾಗಿ ನಟಿಸಿರುವ, ಆರ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ ‘ಇಂಡಿಯನ್ 2’ ಚಿತ್ರ ಜುಲೈ 12 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಕರ್ನಾಟಕದಲ್ಲಿ ಈ ಚಿತ್ರ ಪ್ರತಿಷ್ಠಿತ ROMEO PICTURES ಮೂಲಕ ಬಿಡುಗಡೆಯಾಗಲಿದೆ. ಹೆಸರಾಂತ ಸಂಸ್ಥೆಯು ಇಂಡಿಯನ್ 2 ಚಿತ್ರದ ಕರ್ನಾಟಕದ ವಿತರಣೆಯ ಹಕ್ಕನ್ನು ಪಡೆದುಕೊಂಡಿದ್ದಾರೆ.
ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿರುವ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಚಿತ್ರವನ್ನು ಕರ್ನಾಟಕದಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡುವುದಾಗಿ ರೋಮಿಯೋ ಪಿಕ್ಚರ್‍ನ ರಾಹುಲ್ ತಿಳಿಸಿದ್ದಾರೆ. ಪ್ರಖ್ಯಾತ ವಿತರಣಾ ಸಂಸ್ಥೆಯಾದ ಇದು ಅಜಿತ್ ಕುಮಾರ್ ಅವರ ‘ನೆರ್ಕೊಂಡ ಪಾರವೈ’, ‘ಥುನಿವು’, ಉದಯನಿಧಿ ಸ್ಟಾಲಿನ್ ಅವರ “ನೆಂಜುಕು ನೀಧಿ” ಮುಂತಾದ ಜನಪ್ರಿಯ ಚಿತ್ರಗಳನ್ನು ವಿತರಣೆ ಮಾಡಿದೆ.
ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಹಾಗೂ ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ಈ ಚಿತ್ರವನ್ನು ನಿರ್ಮಿಸಿದೆ. ಕಮಲ್ ಹಾಸನ್, ಸಿದ್ಧಾರ್ಥ್, ಕಾಜಲ್ ಅಗರವಾಲ್, ರಕುಲ್ ಪ್ರೀತ್ ಸಿಂಗ್ , ಕಾಳಿದಾಸ್ ಜಯರಾಮ್, ಪ್ರಿಯಾ ಭವಾನಿ ಶಂಕರ್, ಗುಲ್ಷನ್ ಗ್ರೊವರ್, ವಿವೇಕ್, ಸಮುದ್ರಕನಿ, ನೆಡುಮುಡಿ ವೇಣು, ಬಾಬಿ ಸಿಂಹ, ದೀಪಾ ಶಂಕರ್ ಮುಂತಾದವರು “ಇಂಡಿಯನ್ 2” ಚಿತ್ರದ ತಾರಾಬಳಗದಲ್ಲಿದ್ದಾರೆ.