ಭೀಮ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ದುನಿಯಾ ವಿಜಯ್ (Duniy Vijay), ಫೈಟರ್ ಸಿನಿಮಾದ ಕಾರ್ಯಕ್ರಮದಲ್ಲಿ ಆತಂಕದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ತಮ್ಮನ್ನು ಅವಮಾನಿಸಿದ ವಿಚಾರದ ಜೊತೆಗೆ ತಮ್ಮನ್ನು ನಾಶ ಮಾಡುವುದಕ್ಕೆ ಪ್ರಯತ್ನಿಸಿದರು ಎನ್ನುವ ಸಂಗತಿಯನ್ನೂ ಅವರು ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮನ್ನು ಬೆಳೆಸಿದವರಿಗೆ ಕೃತಜ್ಞತೆಯನ್ನೂ ತಿಳಿಸಿದ್ದಾರೆ.
ಟೈಗರ್ ಪ್ರಭಾಕರ್ ಪುತ್ರ ವಿನೋದ್ ಪ್ರಭಾಕರ್ ನಟನೆಯ ಸಿನಿಮಾ ಫೈಟರ್ (Fighter). ಈ ಸಿನಿಮಾದ ಕಾರ್ಯಕ್ರಮಕ್ಕೆ ವಿಜಯ್ ಅತಿಥಿಯಾಗಿ ಆಗಮಿಸಿದ್ದರು. ಟೈಗರ್ ಪ್ರಭಾಕರ್ ಅವರನ್ನು, ಅವರ ಸಾಹಸ ದೃಶ್ಯಗಳನ್ನು ಇಷ್ಟ ಪಡುತ್ತಿದ್ದ ವಿಜಯ್, ಈ ಸಂದರ್ಭದಲ್ಲಿ ಪ್ರಭಾಕರ್ ಅವರನ್ನು ನೆನಪಿಸಿಕೊಂಡರು. ಪ್ರಭಾಕರ್ ಅವರು ಎದುರಿಗೆ ಬಂದರೆ ಹುಲಿ ಬಂದ ಹಾಗೆ ಇರುತ್ತಿತ್ತು ಎಂದಿದ್ದಾರೆ. ಇದನ್ನೂ ಓದಿ:ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್, ಅವಿವಾ ದಂಪತಿ
ನಂತರ ಸಿನಿಮಾಗೆ ಪ್ರವೇಶ ಮಾಡಿದಾಗ ನಾನು ಫೈಟರ್. ಆ ಕಾರಣಕ್ಕಾಗಿ ಅವಮಾನಕ್ಕೆ ಒಳಗಾದೆ. ಫೈಟರ್ ಆಗಿ ಅದೇನ್ ಮಾಡ್ತಾನೋ ನೋಡೋಣ ಅಂದರು. ಫೈಟರ್ ಒಬ್ಬನು ನಟನಾದ ಅಷ್ಟೇ ಅಂದು ನೋವು ಕೊಟ್ಟರು. ನಟನಾಗಿ ಬೆಳೆದಾಗ ನನ್ನನ್ನು ನಾಶ ಮಾಡಲು ಪ್ರಯತ್ನ ಪಟ್ಟರು. ಕೆಲವರು ಕೈ ಹಿಡಿದು ಬೆಳೆಸಿದರು ಎಂದು ಭಾವುಕರಾಗಿ ಮಾತನಾಡಿದರು ವಿಜಯ್.
ತಮ್ಮನ್ನು ಯಾರು ನಾಶ ಮಾಡಲು ಪ್ರಯತ್ನಿಸಿದರು, ತಮ್ಮನ್ನು ಹಿಯಾಳಿಸಿದವರು ಯಾರು ಎನ್ನುವ ಮಾಹಿತಿಯನ್ನು ಅವರು ಬಿಟ್ಟುಕೊಡಲಿಲ್ಲ. ಆದರೆ ,ತಮಗಾದ ಸಂಕಟವನ್ನು ಎಲ್ಲರೊಂದಿಗೂ ಹಂಚಿಕೊಂಡರು ವಿಜಯ್.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]