– ಯಾವುದೇ ಫ್ಲೆಕ್ಸ್‌ಗಳನ್ನ ಹಾಕಿ ನಗರದ ಸೌಂದರ್ಯ ಹಾಳುಮಾಡಬೇಡಿ
– ಎಲ್ಲರಿಗೂ ಮೋದಿ ಕಾಣುವುದಿಲ್ಲ
ಮೈಸೂರು: ನೋಂದಣಿ ಮಾಡಿಕೊಂಡವರಿಗೆ ಮಾತ್ರ ಯೋಗ ಮಾಡಲು ಅವಕಾಶ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಯೋಗದಿನ 21ಕ್ಕೆ ಮೈಸೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಅದ್ದೂರಿ ವೇದಿಕೆ ಸಿದ್ಧವಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೋದಿ ಅವರು ಯೋಗ ಮಾಡುವ ವೇದಿಕೆ. ರಾಜಕೀಯ ವೇದಿಕೆಯಲ್ಲ. ಮೋದಿ ಅವರ ಜೊತೆ ನನ್ನನ್ನು ಸೇರಿದಂತೆ ಸ್ಥಳೀಯ ಯಾವ ಶಾಸಕರಿಗೂ ಮೋದಿ ಅವರ ವೇದಿಕೆಯಲ್ಲಿ ಸ್ಥಾನ ಇರುವುದಿಲ್ಲ ಎಂದು ತಿಳಿಸಿದರು.
Advertisement
Advertisement
ಮೋದಿ ಅವರ ಜೊತೆ ಸಿಎಂ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ಕಲ್ಪಿಸಲಾಗಿದೆ. ನಾವೆಲ್ಲಾ ರಾಜಕಾರಣಿಗಳು ವೇದಿಕೆಯ ಕೆಳಭಾಗದ ಒಂದು ಬದಿಯಲ್ಲಿರುತ್ತೇವೆ. ಇದರಲ್ಲಿ ಯಾವ ಬದಲಾವಣೆಗಳು ಇಲ್ಲ. ನನ್ನ ಮತ್ತು ರಾಮದಾಸ್ ನಡುವೆ ಈ ವಿಚಾರದಲ್ಲಿ ಕ್ರೆಡಿಟ್ ವಾರ್ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬ್ರಿಟಿಷರಿಗೆ ಕಾಂಗ್ರೆಸ್ ಧ್ವನಿಯನ್ನು ಹತ್ತಿಕ್ಕಲಾಗಲಿಲ್ಲ, ಇನ್ನೂ ಈ ಆಡಳಿತ ಪಕ್ಷದಿಂದ ಏನು ಸಾಧ್ಯ: ಸುರ್ಜೆವಾಲಾ
Advertisement
ಮೋದಿ ಅವರ ವೇದಿಕೆ ಮುಂಭಾಗ 7 ಸಾವಿರ ಜನಕ್ಕೆ ಅವಕಾಶ ಇರುತ್ತದೆ. ಒಟ್ಟಾರೆ ಅರಮನೆಯ ಎಲ್ಲ ಭಾಗವೂ ಸೇರಿ 15 ಸಾವಿರ ಜನಕ್ಕೆ ಅವಕಾಶವಾಗಬಹುದು. ಆದರೆ ಎಲ್ಲರಿಗೂ ಮೋದಿ ಅವರು ಕಾಣುವುದಿಲ್ಲ. ಈಗಾಗಲೇ ನೋಂದಣಿ ಆರಂಭವಾಗಿದೆ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಯೋಗ ಮಾಡಲು ಅವಕಾಶ ಎಂದು ಮಾಹಿತಿ ಕೊಟ್ಟರು.
Advertisement
ಮೈಸೂರಿನ ಅರಮನೆ ಆವರಣದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ-2022ರ ಅಂಗವಾಗಿ ಏರ್ಪಡಿಸಲಾಗಿದ್ದ ಯೋಗ ಪ್ರಾಯೋಗಿಕ ಅಭ್ಯಾಸ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಭಾಗವಹಿಸಲಾಯಿತು.
ಪರಮಪೂಜ್ಯ ಸುತ್ತೂರು ಶ್ರೀಗಳು,
ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು,ಶಾಸಕರಾದ ಸನ್ಮಾನ್ಯ ಶ್ರೀ ರಾಮದಾಸ್ ರವರು ಉಪಸ್ಥಿತರಿದ್ದರು pic.twitter.com/Sszbwii4wA
— Pratap Simha (@mepratap) June 12, 2022
ಮೋದಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನ ಯಾರು ಹಾಕಬೇಡಿ. ಸರ್ಕಾರವೇ ಮೋದಿ ಅವರ ಸ್ವಾಗತದ ಬ್ಯಾನರ್ ಗಳನ್ನು ಹಾಕುತ್ತದೆ. ನಮ್ಮ ಪಕ್ಷದವರೇ ಇರಲಿ, ಸಂಘ ಸಂಸ್ಥೆಗಳು ಯಾವುದೇ ಫ್ಲೆಕ್ಸ್‌ಗಳನ್ನ ಹಾಕಿ ನಗರದ ಸೌಂದರ್ಯ ಹಾಳುಮಾಡಬೇಡಿ ಎಂದು ಮನವಿ ಮಾಡಿದರು.
ಮೈಸೂರು ಅಭಿವೃದ್ಧಿ ವಿಚಾರದಲ್ಲಿ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಆಹ್ವಾನ ವಿಚಾರವಾಗಿ ಮಾತನಾಡಿದ ಅವರು, ನಾಳೆ ಇದರ ಬಗ್ಗೆ ಸವಿಸ್ತಾರವಾಗಿ ಮಾಧ್ಯಮಗಳ ಜೊತೆ ಮಾತನಾಡುತ್ತೇನೆ. ಇಂದು ಚುನಾವಣೆ ನಡೆಯುತ್ತಿದೆ. ಹೀಗಾಗಿ ಈ ವಿಚಾರದಲ್ಲಿ ಮಾತನಾಡುವುದಿಲ್ಲ. ಆದ್ರೆ ಒಂದು ಮಾತು ಸತ್ಯ. ಯಾರೇ ಚರ್ಚೆಗೆ ಬರಲಿ ಅವರನ್ನು ಸೋಲಿಸುವುದು ಈ ಪ್ರತಾಪ್ ಸಿಂಹ ಮಾತ್ರ ಎಂದು ಸವಾಲು ಹಾಕಿದರು. ಇದನ್ನೂ ಓದಿ: UP ಸಿಎಂ ಅಲಹಾಬಾದ್ ಹೈಕೋರ್ಟ್‍ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ: ಓವೈಸಿ ಕಿಡಿ
ಯಾರು ಚರ್ಚೆಗೆ ಬರಬೇಕು, ಏನು ಚರ್ಚೆಯಾಗಬೇಕೆ ಎಂಬುದನ್ನ ನಾಳೆ ಮಾಧ್ಯಮಗಳ ಮುಂದೆ ಹೇಳುತ್ತೇನೆ ಎಂದು ತಿಳಿಸಿದರು.