ನವದೆಹಲಿ: ಭಾರತದ ಮತ್ತೊಂದು ಲಸಿಕೆ ಕೊವೊವ್ಯಾಕ್ಸ್ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ.
ನೋವಾವ್ಯಾಕ್ಸ್ ಮೂಲಕ ನೀಡಲಾದ ಪರವಾನಗಿ ಅಡಿಯಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಂಸ್ಥೆ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇದನ್ನೂ ಓದಿ: ದಕ್ಷಿಣ ಕನ್ನಡದ ಐವರು ವಿದ್ಯಾರ್ಥಿಗಳಿಗೆ ಓಮಿಕ್ರಾನ್
Advertisement
Advertisement
ಕಡಿಮೆ ಆದಾಯದ ದೇಶಗಳಲ್ಲಿ ಲಸಿಕೆ ವಿತರಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೊವೊವ್ಯಾಕ್ಸ್‌ಗೆ ಡಬ್ಲ್ಯೂಎಚ್‌ಒ ಅನುಮೋದನೆ ನೀಡಿದೆ. ತುರ್ತು ಬಳಕೆಗೆ ಅನುಮೋದನೆ ಪಡೆದ 9ನೇ ಲಸಿಕೆ ಇದಾಗಿದೆ.
Advertisement
ಕೊವೊವ್ಯಾಕ್ಸ್ ಅನ್ನು ಗುಣಮಟ್ಟ, ಸುರಕ್ಷತೆ, ಪರಿಣಾಮಕಾರಿ, ಔಷಧ ನಿಯಂತ್ರಣ ಮಹಾ ನಿರ್ದೇಶನಾಲಯ (ಡಿಸಿಜಿಐ) ನಡೆಸಿದ ತಪಾಸಣೆ ಆಧಾರದ ಮೇಲೆ ಬಳಕೆಗೆ ಪರಿಗಣಿಸಲಾಗಿದೆ. ಇದನ್ನೂ ಓದಿ: ಅಮಿತ್ ಶಾ ಹೆಸರಿನಲ್ಲಿ ನಕಲಿ ಲಸಿಕಾ ಪ್ರಮಾಣಪತ್ರ
Advertisement
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಎರಡನೇ ಲಸಿಕೆ ಕೊವೊವ್ಯಾಕ್ಸ್ ಆಗಿದೆ. ಅಮೆರಿಕದ ಆಸ್ಟ್ರಾಜೆನೆಕಾ ಸಂಸ್ಥೆ ಸಹಯೋಗದಿಂದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ಈ ಹಿಂದೆ ಕೊವಿಶೀಲ್ಡ್ ಲಸಿಕೆ ತಯಾರಿಸಿದೆ.