ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಮೇ 22ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಪ್ರಸ್ತುತ ಜಪಾನ್ ನ ಡಾ. ಹಿರೊಕಿ ನಕಟನಿ ಅವರು ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಸ್ಥಾನವನ್ನು ಡಾ. ಹರ್ಷವರ್ಧನ್ ವಹಿಸಿಕೊಳ್ಳಿದ್ದು, 34 ಮಂದಿ ಸದಸ್ಯರನ್ನು ಈ ಕಾರ್ಯಕಾರಿ ಮಂಡಳಿ ಹೊಂದಿದೆ. ಭಾರತದ ಪ್ರತಿನಿಧಿಯನ್ನು ಕಾರ್ಯಕಾರಿ ಮಂಡಳಿಯ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬ ಪ್ರಸ್ತಾವನೆಗೆ 194 ದೇಶಗಳು ಮಂಗಳವಾರದ ಸಭೆಯಲ್ಲಿ ಸಹಿ ಮಾಡಿದೆ.
Advertisement
Advertisement
ಇದು ಪೂರ್ಣ ಪ್ರಮಾಣದ ಹುದ್ದೆಯಲ್ಲ, ಅಧ್ಯಕ್ಷರಾದವರು ಕಾರ್ಯಕಾರಿ ಮಂಡಳಿಯ ಸಭೆಗಳಲ್ಲಿ ಭಾಗವಹಿಸಬೇಕಾಗುತ್ತದೆ. ಮೇ 22ರಿಂದ 3 ವರ್ಷಗಳವರೆಗೆ ಭಾರತದ ಪ್ರತಿನಿಧಿಯನ್ನು ನಾಮಾಂಕಿತ ಮಾಡುವುದಕ್ಕೆ ಕಳೆದ ವರ್ಷ ವಿಶ್ವ ಆರೋಗ್ಯ ಸಂಸ್ಥೆಯ ದಕ್ಷಿಣ-ಪೂರ್ವ ಏಷ್ಯಾ ಗ್ರೂಪ್ ಅವಿರೋಧವಾಗಿ ತೀರ್ಮಾನಿಸಿತ್ತು.
Advertisement
Advertisement
ಸ್ಥಳೀಯ ಗುಂಪಿನಲ್ಲಿ ರೊಟೇಶನ್ ಮಾದರಿಯಲ್ಲಿ ಒಂದು ವರ್ಷದವರೆಗೆ ಅಧ್ಯಕ್ಷರನ್ನು ನಾಮಾಂಕಿತ ಮಾಡಲಾಗುತ್ತದೆ. ಇನ್ನು ಉಳಿದ ಎರಡು ವರ್ಷ ಬೇರೆ ರಾಷ್ಟ್ರಗಳಿಗೆ ಅವಕಾಶ ನೀಡಲಾಗುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.