ಬೆಂಗಳೂರು: ನಗರಕ್ಕೆ ಕೂಗಳತೆ ದೂರದಲ್ಲಿರುವ ಬನ್ನೇರುಘಟ್ಟ ಬಯೋಲಾಜಿಕಲ್ ಪಾರ್ಕ್ ಕಾಡು ಪ್ರಾಣಿಗಳ ಪ್ರವಾಸಿ ತಾಣವಾಗಿದ್ದು, ರಾಷ್ಟ್ರದಲ್ಲಿಯೆ ಪ್ರಖ್ಯಾತಿ ಗಳಿಸಿದೆ. ಆದರೆ ಕಳೆದ ಎರಡು ವರ್ಷಗಳಿಂದ ಇಲ್ಲಿನ ಅಧಿಕಾರಿಗಳ ಬೇಜವಬ್ದಾರಿ ತನದಿಂದಾಗಿ ಕಾಡುಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿದ್ದು, ಇದೀಗ ಸಿಬ್ಬಂದಿಗಳು ಕಾಡು ಪ್ರಾಣಿಗಳ ದಾಳಿಗೆ ಬಲಿಯಾಗುವಂತಾಗಿದೆ.
ಬೆಂಗಳೂರಿನ ರಾಷ್ಟ್ರೀಯ ಉದ್ಯಾನವನ ಬನ್ನೇರುಘಟ್ಟದಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. 7 ದಿನಗಳ ಹಿಂದಷ್ಟೇ ಅಸಿಸ್ಟೆಂಟ್ ಅನಿಮಲ್ ವಾಚರ್ ಆಗಿ ಕೆಲಸಕ್ಕೆ ಸೇರಿಕೊಂಡ 35 ವರ್ಷದ ಆಂಜನೇಯ ಹುಲಿಗಳ ದಾಳಿಗೆ ಬಲಿಯಾಗಿದ್ದಾರೆ.
Advertisement
ನಿನ್ನೆ ಸಂಜೆ 5:30ರ ಸುಮಾರಿನಲ್ಲಿ ಎಂದಿನಂತೆ ಹುಲಿಗಳಿಗೆ ಆಹಾರ ನೀಡಿದ ನಂತರ ಹುಲಿಗಳನ್ನ ಕೇಜ್‍ನಲ್ಲಿ ಬಿಡಲು ಆಂಜನೇಯ ಹೋಗಿದ್ರು. ಈ ವೇಳೆ, 1 ವರ್ಷ ವಯಸ್ಸಿನ 2 ಹುಲಿ ಮರಿಗಳು ಆಂಜನೇಯ ಮೇಲೆ ದಾಳಿ ಮಾಡಿವೆ. ಇದರಿಂದ ಗಾಬರಿಗೊಂಡ ಆಂಜನೇಯ ಕೆಳಬಿದ್ದಿದ್ದಾರೆ. ಹುಲಿ ಮರಿಗಳ ದಾಳಿ ಬೆನ್ನಲ್ಲೇ ದೊಡ್ಡ ಹುಲಿಗಳು ದಾಳಿ ಮಾಡಿವೆ.
Advertisement
Advertisement
ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಆಂಜನೇಯ ಮೃತಪಟ್ಟಿದ್ದಾರೆ. ಇನ್ನು ಪಾರ್ಕ್ ನಲ್ಲಿ ಪ್ರಾಣಿಗಳಿಗೆ ಆಹಾರ ನೀಡುವ ಸಂದರ್ಭದಲ್ಲಿ ನುರಿತ ಅನಿಮಲ್ ಕೀಪರ್ ಇರಬೇಕಿತ್ತು. ಆದರೆ ಆತ ಇರದೇ ಇದ್ದದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
Advertisement
ಘಟನೆ ನಡೆದ ನಂತರ ಯಾವುದೇ ಮಾಧ್ಯಮದವರು ಒಳ ಹೋಗದಂತೆ ಬನ್ನೇರುಘಟ್ಟ ಪಾರ್ಕ್ ಡಿಎಫ್‍ಓ ಕುಶಾಲಪ್ಪ ಉದ್ಯಾನವನದ ಮುಖ್ಯ ಗೇಟ್‍ಗೆ ಬೀಗ ಹಾಕಿದ್ದಾರೆ. ಇದುವರೆಗೂ ಹುಲಿದಾಳಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಯನ್ನು ಪಾರ್ಕ್ ಅಧಿಕಾರಿಗಳು ನೀಡಿಲ್ಲ. ಇನ್ನು ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಕೊಟ್ಟ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶವವನ್ನು ವಿಕ್ಟೊರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ಬೆಂಗಾಲ್ ಟೈಗರ್‍ಗಳು ಕೃಷ್ಣಾ ಎಂಬ ಪ್ರಾಣಿಪಾಲಕನ ಮೇಲೆ ಎರಗಿದ್ದವು. ಅದೃಷ್ಟವಶಾತ್ ಕೃಷ್ಣಾ ತೀವ್ರ ಗಾಯಗೊಂಡರೂ ಬದುಕುಳಿದು ಚೇತರಿಸಿಕೊಂಡಿದ್ದರು. ಇನ್ನು, 2 ತಿಂಗಳ ಹಿಂದೆ ಇದೆ ಬಿಳಿಹುಲಿಯೊಂದು ಬೆಂಗಾಲ್ ಟೈಗರ್ ಕೇಜ್ ಗೆ ಹೋಗಿ ದಾಳಿಗೀಡಾಗಿ ಸಾವನ್ನಪ್ಪಿತ್ತು.
https://www.youtube.com/watch?v=8sATYADYfzc
https://www.youtube.com/watch?v=gkyumRjXHk0