-ಒಂದು ಕಿ.ಮೀ. ದಾಟೋದಕ್ಕೆ ಗಂಟೆಗಟ್ಟಲೇ ಕಾಯಲೇಬೇಕು
ಬೆಂಗಳೂರು: ನಮ್ಮ ಸಿಲಿಕಾನ್ ಸಿಟಿಯಲ್ಲಿ ಒಂದು ರಸ್ತೆ ದಾಟಬೇಕಾದ್ರೆ ಯುದ್ಧ ಗೆದ್ದಂತೆ ಆಗತ್ತದೆ. ಸಿಗ್ನಲ್ ಒಂದು ಕಡೆಯಾದ್ರೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರು ಮತ್ತೊಂದು ಕಡೆ ಇರುತ್ತಾರೆ. ಐಟಿ-ಬಿಟಿ ಇರೋ ಕಡೆ ಹೋದ್ರೆ ಕಥೆ ಕೇಳೋದೇ ಬೇಡ. ಹದ್ದಿನ ಕಣ್ಣಿಟ್ಟುಕೊಂಡೇ ರಸ್ತೆ ದಾಟಬೇಕು.
ಇದೆಲ್ಲದರ ನಡುವೆ ಬಿಬಿಎಂಪಿ ಬೆಂಗಳೂರಿನ ರಸ್ತೆಗಳನ್ನ ಹೈಟೆಕ್ ಮಾಡೋಕೆ ಹೊರಟಿರೋದು ಗೊತ್ತೆ ಇದೆ. ಕಳೆದ ಎರಡು ತಿಂಗಳಿಂದ ಹೆಬ್ಬಾಳದಿಂದ ಬಾಣಸವಾಡಿವರೆಗೆ ವೈಟ್ ಟ್ಯಾಪಿಂಗ್ ಕಾಮಗಾರಿ ಪ್ರಗತಿಯಲ್ಲಿದೆ. ನಾಗವಾರದಲ್ಲಿರೋ ಮಾನ್ಯತಾ ಟೆಕ್ ಪಾರ್ಕ್‍ಗೆ ಪ್ರತಿನಿತ್ಯ ಲಕ್ಷಕ್ಕೂ ಹೆಚ್ಚು ವಾಹನಗಳು ಬರುತ್ತವೆ. ಆದ್ರೆ ಇಲ್ಲಿ ಇದೀಗ ವೈಟ್ ಟಾಪಿಂಗ್ ಮಾಡುತ್ತಿರೋದ್ರಿಂದ ದಾಟೋದಕ್ಕೇ ಸರ್ಕಸ್ಸೇ ಮಾಡಬೇಕಾಗಿದೆ.
Advertisement
Advertisement
ಹೀಗಾಗಿ ಇದೀಗ ಇಲ್ಲಿ ವೈಟ್ ಟಾಪಿಂಗ್ ಬೇಕಿತ್ತಾ ಅಂತಾ ವಾಹನ ಸವಾರರು ಪ್ರಶ್ನಿಸುತ್ತಿದ್ದಾರೆ. ಕಾಮಗಾರಿ ಆರಂಭವಾಗುವ ಮೊದಲೇ ಬೇರೆ ಮಾರ್ಗವನ್ನ ಮಾಡಿದ್ರೆ ಚೆನ್ನಾಗಿ ಇರುತ್ತಿತ್ತು. ಪ್ರತ್ಯೇಕ ಲೈನ್ ಮಾಡಿ ಟ್ರಾಫಿಕ್ ಕಂಟ್ರೋಲ್ ಮಾಡುವ ಹಲವು ಅವಕಾಶಗಳಿತ್ತು. ಒಂದು ವೇಳೆ ಅರ್ಜೆಂಟ್ ಅಂತಾ ಏನಾದರೂ ಬಂದ್ರೇ ಅಷ್ಟೇ ಮುಗೀತು ನಮ್ಮ ಕತೆ ಅಂತ ವಾಹನ ಸವಾರರು ಅಸಮಾಧಾನ ಹೊರ ಹಾಕುತ್ತಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews