ಪಾಸ್ತಾ ಸಾಮಾನ್ಯವಾಗಿ ಎಲ್ಲರೂ ತಿನ್ನುತ್ತಾರೆ. ಅದರಲ್ಲೂ ಮಕ್ಕಳಿಗೆ ಈ ರೀತಿಯ ತಿಂಡಿಗಳು ಅಥವಾ ಸ್ನಾಕ್ಸ್‌ಗಳು ಬಹುಬೇಗ ಇಷ್ಟವಾಗುತ್ತದೆ. ಪಾಸ್ತಾದಲ್ಲಿ ಅನೇಕ ಬಗೆಯ ಪಾಸ್ತಾಗಳಿವೆ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಪಾಸ್ತಾ ಇಷ್ಟವಾಗುತ್ತದೆ. ಇದನ್ನು ಬಹಳ ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ವೈಟ್ ಸಾಸ್ ಪಾಸ್ತಾ ಹೇಗೆ ಮಾಡುವುದು ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಿದ್ರೆ ಇದನ್ನು ಯಾವ ರೀತಿ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ. ಇದನ್ನೂ ಓದಿ: ಸಂಜೆ ಸ್ನಾಕ್ಸ್‌ಗೆ ಮಾಡಿ ಸುಲಭವಾದ ನಾಚೋಸ್
Advertisement
ಬೇಕಾಗುವ ಸಾಮಗ್ರಿಗಳು:
ನೀರು- ಅಗತ್ಯಕ್ಕೆ ತಕ್ಕಷ್ಟು
ಉಪ್ಪು- ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ- ಅಗತ್ಯಕ್ಕೆ ತಕ್ಕಷ್ಟು
ಪೆನ್ನೆ ಪಾಸ್ತಾ- 2 ಕಪ್
ಹೆಚ್ಚಿದ ಬೆಳ್ಳುಳ್ಳಿ – ಸ್ವಲ್ಪ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕ್ಯಾಪ್ಸಿಕಮ್ – 1
ಹೆಚ್ಚಿದ ಬೀನ್ಸ್ – 10
ಹೆಚ್ಚಿದ ಕ್ಯಾರೆಟ್ – 1
ಸ್ವೀಟ್ ಕಾರ್ನ್ – ಅರ್ಧ ಕಪ್
ಬೆಣ್ಣೆ- 2 ಚಮಚ
ಮೈದಾ ಹಿಟ್ಟು – 2 ಚಮಚ
ಹಾಲು – ಅರ್ಧ ಲೀಟರ್
ರೆಡ್‌ಚಿಲ್ಲಿ ಫ್ಲೇಕ್ಸ್ – 1 ಚಮಚ
ಒರೆಗಾನೋ – 1 ಚಮಚ
ಪೆಪ್ಪರ್ ಪೌಡರ್ – ಅರ್ಧ ಚಮಚ
ಚೀಸ್ – 2 ಸ್ಲೈಸ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಬಿಸಿಗಿಟ್ಟು ಅದಕ್ಕೆ 1 ಚಮಚ ಉಪ್ಪು ಮತ್ತು 1 ಚಮಚ ಎಣ್ಣೆಯನ್ನು ಸೇರಿಸಿಕೊಳ್ಳಿ.
* ನೀರು ಕುದಿದ ಮೇಲೆ ಅದಕ್ಕೆ 2 ಕಪ್ ಪಾಸ್ತಾ ಹಾಕಿಕೊಂಡು ಮೆತ್ತಗಾಗುವವರೆಗೆ ಬೇಯಿಸಿಕೊಳ್ಳಿ.
* ಪಾಸ್ತಾ ಚನ್ನಾಗಿ ಬೆಂದ ಬಳಿಕ ನೀರನ್ನು ಸೋಸಿಕೊಳ್ಳಿ. ಬಳಿಕ ಅದಕ್ಕೆ ತಣ್ಣೀರು ಹಾಕಿಕೊಂಡು ಇನ್ನೊಂದು ಬಾರಿ ಸೋಸಿ.
* ಈಗ ಪಾಸ್ತಾದ ಮೇಲೆ 1 ಚಮಚ ಎಣ್ಣೆ ಹಾಕಿ ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ನಂತರ ಸ್ಟವ್ ಮೇಲೆ ಒಂದು ಪ್ಯಾನ್ ಬಿಸಿಗಿಟ್ಟು ಅದಕ್ಕೆ ಸ್ವಲ್ಪ ಎಣ್ಣೆ, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಬೆಳ್ಳುಳ್ಳಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ.
* ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಹೆಚ್ಚಿದ ಕ್ಯಾಪ್ಸಿಕಮ್, ಬೀನ್ಸ್, ಕ್ಯಾರೆಟ್, ಸ್ವೀಟ್ ಕಾರ್ನ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚನ್ನಾಗಿ ಹುರಿಯಿರಿ. ತರಕಾರಿ ಅರ್ಧ ಬೆಂದ ಬಳಿಕ ಅದನ್ನು ತೆಗೆದು ಪಕ್ಕಕ್ಕೆ ಇಡಿ.
* ನಂತರ ಒಂದು ಪ್ಯಾನ್ ಬಿಸಿಗಿಟ್ಟು 2 ಚಮಚ ಬೆಣ್ಣೆ, 2 ಚಮಚ ಮೈದಾ ಹಿಟ್ಟು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
* ಬಳಿಕ ಇದಕ್ಕೆ ಒಂದು ಕಪ್ ಹಾಲನ್ನು ಹಾಕಿಕೊಂಡು ಕುದಿಸಿಕೊಳ್ಳಿ. ಮಿಶ್ರಣ ದಪ್ಪವಾದ ಬಳಿಕ ಮತ್ತೆ 1 ಕಪ್ ಹಾಲನ್ನು ಸೇರಿಸಿಕೊಂಡು ಮತ್ತೆ ತಿರುವಿಕೊಳ್ಳಿ. ಹೀಗೆ ಸ್ವಲ್ಪಸ್ವಲ್ಪವೇ ಹಾಲನ್ನು ಸೇರಿಸುತ್ತಾ ಪೂರ್ತಿ ಹಾಲನ್ನು ಹಾಕಿಕೊಳ್ಳಿ. ನಂತರ ಚನ್ನಾಗಿ ಕುದಿಸಿಕೊಳ್ಳಿ.
* ಹಾಲು ದಪ್ಪವಾದ ಬಳಿಕ ಅದಕ್ಕೆ ರೆಡ್ ಚಿಲ್ಲಿ ಫ್ಲೇಕ್ಸ್, ಒರೆಗಾನೋ, ಪೆಪ್ಪರ್ ಪೌಡರ್, ಸ್ವಲ್ಪ ಉಪ್ಪು ಹಾಕಿಕೊಂಡು ಚನ್ನಾಗಿ ತಿರುವಿಕೊಳ್ಳಿ.
* ನಂತರ ಈ ಮಿಶ್ರಣಕ್ಕೆ ಬೇಯಿಸಿದ ಪಾಸ್ತಾವನ್ನು ಹಾಕಿಕೊಂಡು ಚನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಬೇಯಿಸಿದ ತರಕಾರಿಗಳನ್ನೂ ಹಾಕಿಕೊಂಡು ಮತ್ತೊಮ್ಮೆ ತಿರುವಿಕೊಳ್ಳಿ.
* ಈಗ ಇದರ ಮೇಲೆ ಚೀಸ್ ಹಾಕಿಕೊಂಡು 5 ನಿಮಿಷ ಬೇಯಲು ಬಿಡಿ. ನಂತರ ಇನ್ನೊಂದು ಬಾರಿ ಮಿಶ್ರಣವನ್ನು ತಿರುವಿಕೊಂಡು ಸರ್ವಿಂಗ್ ಪ್ಲೇಟ್‌ಗೆ ಹಾಕಿ ಬಿಸಿಬಿಸಿ ತಿನ್ನಲು ಕೊಡಿ. ಇದನ್ನೂ ಓದಿ: 30 ನಿಮಿಷ ಸಾಕು – ಫ್ರೆಂಚ್ ಬ್ರೆಡ್ ಪಿಜ್ಜಾ ಸುಲಭವಾಗಿ ಮಾಡಿ
Advertisement
Web Stories