ವಾಷಿಂಗ್ಟನ್: ಭಾರತದ (India) ಮೇಲೆ ತಾನು ಹೇಗೆ ಸುಂಕ ವಿಧಿಸಿದ್ದೇನೋ ಅದೇ ರೀತಿ ನೀವು ಸುಂಕ ವಿಧಿಸಬೇಕೆಂದು ಯುರೋಪಿಯನ್ ಒಕ್ಕೂಟಗಳಿಗೆ (European Union) ಟ್ರಂಪ್ ಸರ್ಕಾರ ಒತ್ತಾಯಿಸುತ್ತಿದೆ ಎಂದು ವರದಿಯಾಗಿದೆ.
ಆರಂಭದಲ್ಲಿ ಭಾರತದಿಂದ ಆಮದಾಗುವ ವಸ್ತುಗಳಿಗೆ 25% ತೆರಿಗೆ ವಿಧಿಸಿದ ಅಮೆರಿಕ ಈಗ ರಷ್ಯಾದಿಂದ (Russia) ಕಚ್ಚಾ ತೈಲವನ್ನು (Crude Oil) ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ತೆರಿಗೆ ವಿಧಿಸಿದೆ. ಹೀಗಾಗಿ ಭಾರತದಿಂದ ಆಮದಾಗುವ ಕೆಲ ವಸ್ತುಗಳಿಗೆ 50% ಸುಂಕ ಹೇರಿದೆ. ಇದನ್ನೂ ಓದಿ:ಆಮದು ಸುಂಕ ಕಾನೂನುಬಾಹಿರ:ಟ್ರಂಪ್‌ಗೆ ಯುಎಸ್‌ಕೋರ್ಟ್‌ನಿಂದಲೇ ಛೀಮಾರಿ
ತಾನು ಹೇರಿದ ಸುಂಕಾಸ್ತ್ರ ಅಷ್ಟೊಂದು ಪರಿಣಾಮ ಬೀರದ ಕಾರಣ ಅಮೆರಿಕ ಈಗ ಯುರೋಪ್ ದೇಶಗಳನ್ನು ಒತ್ತಾಯಿಸುತ್ತಿದೆ. ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸದೇ ಇದ್ದರೆ ಯುರೋಪ್ ಭಾರತದ ಮೇಲೆ ದ್ವಿತೀಯ ಸುಂಕಗಳನ್ನು ವಿಧಿಸಬೇಕೆಂದು ಶ್ವೇತ ಭವನ (White House) ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ:PublicTV Explainer:ಟ್ರಂಪ್ ಟ್ಯಾರಿಫ್ ವಾರ್ – ಭಾರತದ ಯಾವ ವಲಯಗಳ ಮೇಲೆ ಪ್ರಭಾವ ಹೆಚ್ಚು?
ರಷ್ಯಾ ಕಚ್ಚಾ ತೈಲವನ್ನು ಖರೀದಿಸುವುದನ್ನು ಮುಂದುವರಿಸುತ್ತಿರುವುದರಿಂದ ರಷ್ಯಾ ಉಕ್ರೇನ್‌ನಲ್ಲಿ ಯುದ್ಧಕ್ಕೆ ಭಾರತ ಸಹಕಾರ ನೀಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಚೀನಾದ ಟಿಯಾಂಜಿನ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾತುಕತೆ ನಡೆಸಲಿರುವ ಬೆನ್ನಲ್ಲೇ ಅಮೆರಿಕದ ಒತ್ತಡ ಹೆಚ್ಚಾಗುತ್ತಿದೆ.