ವೀಡಿಯೋ-ಚಾಟಿ ಏಟು ತಿಂದ ಛತ್ತೀಸ್‍ಗಢ ಸಿಎಂ

Public TV
2 Min Read
chhattisgarh cm

ರಾಯ್ಪುರ್: ಛತ್ತೀಸ್‍ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಗೋವರ್ಧನ ಪೂಜೆಯ ಭಾಗವಾಗಿ ಚಾಟಿ ಏಟನ್ನು ಸ್ವೀಕರಿಸಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗಿದೆ.

ಛತ್ತೀಸ್‍ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ದುರ್ಗ್‍ನಲ್ಲಿ ಗೋವರ್ಧನ ಪೂಜೆಯ ಆಚರಣೆಯ ಅಂಗವಾಗಿ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ. ದುರ್ಗ್ ಜಿಲ್ಲೆಯ ಜಾಂಜ್ ಗರಿ ಗ್ರಾಮದಲ್ಲಿ ಗೋವರ್ಧನ ಪೂಜೆಯಲ್ಲಿ ಪಾಲ್ಗೊಂಡು ಪ್ರತಿ ವರ್ಷದಂತೆ ಈ ಬಾರಿಯೂ ಹುಲ್ಲಿನಿಂದ ಮಾಡಿದ ಚಾಟಿ ಏಟು ತಿನ್ನುವ ಸಂಪ್ರದಾಯವನ್ನು ಪಾಲಿಸಿದ್ದಾರೆ. ರಾಜ್ಯದ ಒಳಿತಿಗಾಗಿ ಪ್ರಾರ್ಥಿಸಿದ್ದು, ನಮ್ಮ ನೆಲದ ಅಸ್ಮಿತೆಯನ್ನು ಕಾಪಾಡುವುದು ಮತ್ತು ಅದನ್ನು ಉತ್ತೇಜಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಿಎಂ ಬಘೇಲ್ ಹೇಳಿದ್ದಾರೆ. ಇದನ್ನೂ ಓದಿ:  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಿಂದ ಬೊಕ್ಕಸಕ್ಕೆ 2,100 ಕೋಟಿ ಆದಾಯ ನಷ್ಟ: ಸಿಎಂ

chhattisgarh cm 1

ವೀಡಿಯೋದಲ್ಲಿ ಏನಿದೆ?: ದೇವಸ್ಥಾನದ ಸಿಬ್ಬಂದಿಯೋರ್ವ ಸಿಎಂ ಅವರಿಗೆ ಚಾಟಿಯಿಂದ ಕೈಗೆ ಹೊಡೆಯುತ್ತಿರುವುದನ್ನು ನೋಡಹುದು. ಈ ವೇಳೆ ಡೋಲು ಇತರೇ ಸಾಂಪ್ರದಾಯಿಕ ವಾದ್ಯಗಳನ್ನು ಬಾರಿಸಲಾಗುತ್ತಿತ್ತು. ಈ ವೀಡಿಯೋವನ್ನು ಛತ್ತೀಸ್‍ಗಢದ ದುರ್ಗ್ ಜಿಲ್ಲೆಯ ದೇವಾಲಯವೊಂದರಲ್ಲಿ ಚಿತ್ರೀಕರಿಸಲಾಗಿದೆ. ಬರೋಬ್ಬರಿ 8 ಬಾರಿ ಸಿಎಂ ಚಾಟಿ ಎಟು ಕೊಟ್ಟ ವ್ಯಕ್ತಿ. ಬಳಿಕ ಸಿಎಂ ಅವರನ್ನು ಅಪ್ಪಿಕೊಂಡು ಧನ್ಯವಾದ ತಿಳಿಸಿದ್ದಾರೆ ಈ ವೀಡಿಯೋವನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಹಂಚಿಕೊಂಡಿದ್ದು, ದೆವರಿಗೆ ಹರಕೆ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ

ದೀಪಾವಳಿಯ ಮರುದಿನ ಪ್ರತಿವರ್ಷ ಗೋವರ್ಧನ ಪೂಜೆಯನ್ನು ನಡೆಸಲಾಗುತ್ತದೆ. ಈ ವರ್ಷ ಹಬ್ಬವನ್ನು ಇಂದು ಆಚರಸಲಾಗಿದೆ. ಶ್ರೀಕೃಷ್ಣ ಇದೇ ದಿನದಂದು ಗೋವರ್ಧನ ಪರ್ವತವನ್ನು ಕಿರುಬೆರಳಿನಲ್ಲಿ ಎತ್ತಿ ಜನರನ್ನು ರಕ್ಷಣೆ ಮಾಡಿ ಇಂಧ್ರದೇವನ ಅಹಂಕರವನ್ನು ಅಡಗಿಸಿದ್ದ ಎಂಬ ಧಾರ್ಮಿಕ ನಂಬಿಕೆ ಸ್ಥಳೀಯರಲ್ಲಿದೆ. ಈ ದಿನದಂದು ದೇವಾಲಯದಲ್ಲಿ ಚಾಟಿ ಏಟು ಸ್ವೀಕರಿಸಿದರೇ ಕಷ್ಟಗಳು ದೂರವಾಗಿ ಜೀವನದಲ್ಲಿ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಸ್ಥಳೀಯರಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *