ಭುವನೇಶ್ವರ: ಸ್ನೇಹಿತರೊಂದಿಗೆ ಪಿಕ್ನಿಕ್ ತೆರಳಿದ್ದ ವಿದ್ಯಾರ್ಥಿಯೊಬ್ಬನು ಸೆಲ್ಫಿ ಕ್ಲಿಕ್ಕಿಸುವ ವೇಳೆ ಕಾಲುಜಾರಿ ನೀರುಗೆ ಬಿದ್ದು ಸಾವನ್ನಪ್ಪಿರುವ ಘಟನೆ ಒಡಿಶಾದ ಭೀಮಕುಂದಾ ಜಲಪಾತದಲ್ಲಿ ನಡೆದಿದೆ.
ರೋಹನ್ ಮಿಶ್ರಾ ಮೃತ ವಿದ್ಯಾರ್ಥಿ. ಮಧುಪಟ್ನಾ ಸಾಯಿ ಶಿಕ್ಷಾ ಕೇಂದ್ರದಲ್ಲಿ ರೋಹನ್ ವ್ಯಾಸಂಗ ಮಾಡುತ್ತಿದ್ದನು. ಗೆಳಯರೊಂದಿಗೆ ಪಿಕ್ನಿಕ್‍ಗೆಂದು ರೋಹನ್ ಭೀಮಕುಂದಾ ಜಲಪಾತಕ್ಕೆ ತೆರೆಳಿದ್ದನು. ಈವೇಳೆ ಜಲಪಾತದ ಬಳಿ ರೋಹನ್ ಎಲ್ಲರೊಟ್ಟಿಗೆ ಸೆಲ್ಫಿ ತೆಗೆದುಕೊಳ್ಳುವ ವೇಳೆ ಆಕಸ್ಮಿಕವಾಗಿ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. ನೋಡನೋಡುತ್ತಲೇ ಗೆಳೆಯರ ಎದುರಲ್ಲಿಯೇ ಆತ ನೀರುಪಾಲಾಗಿದ್ದಾನೆ.
Advertisement
Advertisement
ಈ ದೃಶ್ಯವು ಸ್ಥಳೀಯರೊಬ್ಬರ ಮೊಬೈಲ್‍ನಲ್ಲಿ ಸೆರೆಯಾಗಿದೆ. ವಿದ್ಯಾರ್ಥಿ ನೀರಿಗೆ ಬಿದ್ದ ತಕ್ಷಣ ಆತನನ್ನು ರಕ್ಷಿಸಲು ಸ್ಥಳದಲ್ಲಿದ್ದವರು ಮುಂದಾಗಿದ್ದಾರೆ. ಆದರೆ ನೀರು ವೇಗವಾಗಿ ಹರಿಯುತ್ತಿದ್ದ ಕಾರಣಕ್ಕೆ ರೋಹನ್‍ನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
Advertisement
ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಎಐಐಎಂಎಸ್) ಸಂಶೋಧಕರ ಪ್ರಕಾರ, ಕಳೆದ 6 ವರ್ಷದಲ್ಲಿ ಭಾರತದಲ್ಲಿ ಸುಮಾರು 250 ಕ್ಕೂ ಹೆಚ್ಚು ಮಂದಿ ಸೆಲ್ಫಿ ತೆಗೆದುಕೊಳ್ಳವ ವೇಳೆ ಮೃತಪಟ್ಟಿದ್ದಾರೆ. ಅದರಲ್ಲೂ ಬಹುತೇಕ ಪ್ರಕರಣದಲ್ಲಿ ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
Odisha: A student from Cuttack District died today after slipping into a water body at Bhima Kunda, a picnic spot in Mayurbhanj district, reportedly while taking a selfie with his friends. Case registered. pic.twitter.com/csDTqg5xsd
— ANI (@ANI) December 30, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv