ಮಂಗಳೂರು: ಬೆಂಗಳೂರಿನ ಶಾಂತಿ ನಗರದ ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆಗೊಳಾಗಿರುವ ವಿದ್ವತ್ ಬಿಜೆಪಿ ಕಾರ್ಯಕರ್ತ ಎಂಬುದಾಗಿ ಚರ್ಚೆ ನಡೆಯಲೆಂದೇ ತಪ್ಪಾಗಿ ಹೇಳಿಕೆ ನೀಡಿದ್ದೇನೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.
ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ದೀಪಕ್ ರಾವ್ ಮನೆಗೆ ಭೇಟಿ ನೀಡಿ ಬಳಿಕ ಅಮಿತ್ ಶಾ ಸುರತ್ಕಲ್ ನಲ್ಲಿ ಪ್ರತಿಕಾಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು, ನಾನು ವಿದ್ವತ್ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೆ ನೀಡಿದ್ದರಿಂದ ಚರ್ಚೆ ಆರಂಭವಾಗಿದೆ. ಆದರೆ ನನ್ನ ಹೇಳಿಕೆಯಿಂದ ಕನಿಷ್ಠ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ಗೊತ್ತಾಗಿದೆ. ನನ್ನ ಹೇಳಿಕೆ ಚರ್ಚೆಯಾಗುತ್ತಿರುವುದಕ್ಕೆ ಮಾಧ್ಯಮಗಳಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದರು.
Advertisement
Advertisement
ನಾನು ಭಾಜಪದ ಅಧ್ಯಕ್ಷ ನೆಲೆಯಲ್ಲಿ ದೀಪಕ್ ರಾವ್ ಮನೆಗೆ ಭೇಟಿ ನೀಡಿದ್ದೇನೆ. ದೀಪಕ್ ಮನೆಯವರಿಗೆ ಸಾಂತ್ವಾನ ಹೇಳುವುದು ನನ್ನ ಕರ್ತವ್ಯ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಆಗಿದೆ. ಇಲ್ಲಿಯವರೆಗೆ ಮುಖ್ಯಮಂತ್ರಿ ಎಷ್ಟು ಮನೆಗೆ ಭೇಟಿ ನೀಡಿದ್ದಾರೆ. ದೀಪಕ್ ರಾವ್ ಮನೆಗೆ ಮಾತ್ರ ಭೇಟಿ ನೀಡಿದ್ದಾರೆ. ಬಶೀರ್ ಮನೆಗೆ ಭೇಟಿ ನೀಡಬೇಕಾದ್ದರಿಂದ ದೀಪಕ್ ಮನೆಗೆ ಹೋಗಿದ್ದರು. ಬೇರೆ ಹಿಂದೂ ಕಾರ್ಯಕರ್ತರ ಮನೆಗೆ ಏಕೆ ಭೇಟಿ ನೀಡಿಲ್ಲ ಎಂದು ಬಶೀರ್ ಮನೆಗೆ ಭೇಟಿ ನೀಡದ ಕುರಿತ ಪ್ರಶ್ನೆಗೆ ಉತ್ತರಿಸಿದರು. ಇದನ್ನೂ ಓದಿ: 68 ವರ್ಷ ಮುಚ್ಚಿದ್ದ ದೇಶದ ಭವಿಷ್ಯದ ಬಾಗಿಲನ್ನು 2014ರಲ್ಲಿ ತೆರೆದೆವು- ಕಾಂಗ್ರೆಸ್ಸಿಗೆ ಶಾ ಪಂಚ್
Advertisement
ಇದಕ್ಕೂ ಮುನ್ನ ದೀಪಕ್ ರಾವ್ ಭಾವಚಿತ್ರಕ್ಕೆ ಅಮಿತ್ ಶಾ ಕೈ ಮುಗಿದು ನಮಸ್ಕರಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ದೀಪಕ್ ರಾವ್ ಕುಟುಂಕ್ಕೆ ಸಾಂತ್ವನ ಹೇಳಿದರು. ಅಮಿತ್ ಶಾ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯವಾರಿ ಉಸ್ತುವಾರಿ ಮುರಳೀಧರ್ ರಾವ್ ಸಾಥ್ ನೀಡಿದರು. ಇದನ್ನೂ ಓದಿ: ಸ್ವಲ್ಪ ಮಿಸ್ ಆಗಿದ್ರೆ ರೌಡಿ ನಲಪಾಡ್ ಸೌದಿಗೆ ಪರಾರಿ!
Advertisement
ರಾಜ್ಯದಲ್ಲಿ ಸತ್ತವರು, ಏಟು ತಿಂದವರೆಲ್ಲರೂ ತಮ್ಮ ಕಾರ್ಯಕರ್ತರೆಂದು ಹೇಳಿಕೊಳ್ಳುತ್ತಿರುವ ಬಿಜೆಪಿ, ಜೀವಂತರಾಗಿರುವವರಿಗೆ ಮಾತ್ರವಲ್ಲ, ಸತ್ತವರಿಗೂ ಪಕ್ಷ ಸದಸ್ಯತ್ವ ನೀಡುತ್ತಿದ್ದಾರೆಯೇ? #AmitShah
— Siddaramaiah (@siddaramaiah) February 20, 2018
ರಾಜ್ಯದಲ್ಲಿ ಸತ್ತವರು, ಏಟು ತಿಂದವರೆಲ್ಲರೂ ತಮ್ಮ ಕಾರ್ಯಕರ್ತರೆಂದು ಹೇಳಿಕೊಳ್ಳುತ್ತಿರುವ ಬಿಜೆಪಿ, ಜೀವಂತರಾಗಿರುವವರಿಗೆ ಮಾತ್ರವಲ್ಲ, ಸತ್ತವರಿಗೂ ಪಕ್ಷ ಸದಸ್ಯತ್ವ ನೀಡುತ್ತಿದ್ದಾರೆಯೇ? #AmitShah
— Siddaramaiah (@siddaramaiah) February 20, 2018
https://www.youtube.com/watch?v=cc0Gkb0XdLw
Only the youth of this country can build a New India, so i urge the students to contribute their best in this mission and not to rest till it is achieved. pic.twitter.com/L7ZkXH5xtg
— Amit Shah (@AmitShah) February 20, 2018
Had a great interaction with students of Vivekananda Institute, Puttur and shared my views on “Youth role in building New India”. pic.twitter.com/itFa9IOQZc
— Amit Shah (@AmitShah) February 20, 2018
Addressed the Nava Shakthi Samavesh in Sullia, Dakshina Kannada, Karnataka. pic.twitter.com/IWPToLWOeU
— Amit Shah (@AmitShah) February 20, 2018