ರಾಯ್ಪುರ: ರಸ್ತೆ ಕಾಮಗಾರಿ ವೇಳೆ ಸುಮಾರು 12 ನೇ ಶತಮಾನದ ಚಿನ್ನದ ನಾಣ್ಯಗಳು ಛತ್ತೀಸ್‍ಗಡ ರಾಜ್ಯದ ಕೊಂಡಗಾನ್ ಜಿಲ್ಲೆಯಲ್ಲಿ ದೊರೆತಿದೆ.
ಕೊಂಡಗಾನ್ ಜಿಲ್ಲೆಯ ಕೊರ್ಕೋಟಿ ಮತ್ತು ಬೆದ್ಮಾ ಗ್ರಾಮಗಳ ನಡುವೆ ರಸ್ತೆ ಕಾಮಗಾರಿ ಪ್ರಯುಕ್ತ ನೆಲ ಅಗೆಯುವ ವೇಳೆ ಮಡಿಕೆಯೊಂದು ಸಿಕ್ಕಿದೆ. ಈ ಮಡಿಕೆಯನ್ನು ತೆರೆದು ನೋಡಿದಾಗ ಮಡಿಕೆಯಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಕೂಡಲೇ ಕಾರ್ಮಿಕರು ಕೊರ್ಕೋಟಿ ಗ್ರಾಮದ ಸರ್ ಪಂಚ್‍ಗೆ ವಿಷಯ ತಿಳಿಸಿದ್ದಾರೆ.
Advertisement
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸರ್ ಪಂಚ್ ನೆಹರುಲಾಲ್ ಬರ್ಗೆಲ್ ರವರು ಮಡಿಕೆಯನ್ನು ವಶಕ್ಕೆ ಪಡೆದು ಜಿಲ್ಲಾಧಿಕಾರಿಗೆ ವಿಷಯ ಮುಟ್ಟಿಸಿದ್ದಾರೆ.
Advertisement
Kondagaon: Labourer found a pot filled with gems at a road construction site. District Collector Neelkanth Tekam says, 'Prima facie, these are gold & silver. We will make arrangements for its preservation. Archaeological dept will be able to give more information'. #Chhattisgarh pic.twitter.com/pUU3yKiuPE
— ANI (@ANI) July 13, 2018
Advertisement
ಈ ಕುರಿತು ಪ್ರತಿಕ್ರಿಯಿಸಿದ ಕೊಂಡಗಾನ್ ಜಿಲ್ಲಾಧಿಕಾರಿಯಾದ ನೀಲಕಂಠ ಟೇಕಂ, ಕೊಂಡಾಗೋನ್ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ 12 ನೇ ಶತಮಾನದ ಚಿನ್ನದ ನಾಣ್ಯಗಳು ದೊರೆತಿದೆ. ಕೊರ್ಕೋಟಿ ಹಾಗೂ ಬೇದ್ಮಾ ಹಳ್ಳಿಗಳ ನಡುವೆ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿತ್ತು. ಈ ವೇಳೆ ಮಹಿಳಾ ಕಾರ್ಮಿಕರಿಗೆ ಒಂದು ಮಡಿಕೆ ಸಿಕ್ಕಿದ್ದು ಅದರಲ್ಲಿ 57 ಚಿನ್ನದ ನಾಣ್ಯಗಳು ಸೇರಿದಂತೆ ಬೆಳ್ಳಿ ನಾಣ್ಯಗಳು, ಚಿನ್ನದ ಕಿವಿಯೋಲೆಯೂ ಸಿಕ್ಕಿದೆ ಎಂದು ತಿಳಿಸಿದ್ದಾರೆ.
Advertisement
ಈ ನಾಣ್ಯಗಳನ್ನು 12 ಅಥವಾ 13ನೇ ಶತಮನಕ್ಕೆ ಸೇರಿವೆ ಎಂಬುದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ನಾಣ್ಯಗಳ ಮೇಲೆ ಯಾದವ ರಾಜವಂಶ ವಿದರ್ಭವನ್ನು ಆಳುತ್ತಿದ್ದಾಗ ಜಾರಿಯಲ್ಲಿದ್ದ ಲಿಪಿಯು ಕಂಡುಬಂದಿದ್ದು, ಇದು ಯಾದವ ರಾಜವಂಶದ ಕಾಲದ್ದು ಎಂದು ನೀಲಕಂಠರವರು ಹೇಳಿದ್ದಾರೆ.