ಬೆಂಗಳೂರು: ಕರ್ನಾಟಕ ರಾಜ್ಯದ ಹಿತಕ್ಕಾಗಿ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಕ್ಷಮಿಸಿದ್ದೇನೆ ಎಂದು ಮಾಜಿ ಸಿಎಂ ಸಿಎಂ ಬಿ.ಎಸ್.ಯಡಿಯೂರಪ್ಪ ಸಂದರ್ಶನದಲ್ಲಿ ಹೇಳಿದ್ದನ್ನು ಸಿಎ ಸಿದ್ದರಾಮಯ್ಯ ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂಗ್ಲಿಷ್ ಪತ್ರಿಕೆಗೆ ನೀಡಿದ್ದ ಸಂದರ್ಶದನಲ್ಲಿ ಯಡಿಯೂರಪ್ಪ, ನಾನು ಸಿಎಂ ಆಗಿದ್ದಾಗ ರೆಡ್ಡಿ ಸಂಕಷ್ಟದಲ್ಲಿದ್ದರು. ಈಗ ರಾಜ್ಯದ ಹಿತಕ್ಕಾಗಿ ಎಲ್ಲವನ್ನು ಮರೆತು ಕ್ಷಮಿಸಿದ್ದೇವೆ. ರೆಡ್ಡಿ ಒಬ್ಬರೇ ಅಲ್ಲ, ಬಹಳ ಜನರು ಸಂಕಷ್ಟದಲ್ಲಿದ್ದರು. ಎಲ್ಲರನ್ನು ಕ್ಷಮಿಸಿದ್ದೇವೆ. ಇನ್ನೂ ಸಂಸದ ಶ್ರೀ ರಾಮುಲು ಒಬ್ಬ ಎಸ್‍ಟಿ ಸಮುದಾಯದ ಪ್ರಬಲ ನಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀರಾಮುಲುರನ್ನು ಡಿಸಿಎಂ ಮಾಡೋ ಸುದ್ದಿ ಕೇವಲ ಊಹಾಪೋಹ ಎಂದು ತಿಳಿಸಿದ್ದರು.
Advertisement
ಬಿಎಸ್‍ವೈ ನೀಡಿದ ಸಂದರ್ಶನವನ್ನೇ ಟಾರ್ಗೆಟ್ ಮಾಡಿಕೊಂಡ ಸಿಎಂ ಸಿದ್ದರಾಮಯ್ಯ, ಯಾವ ಕಾರಣಕ್ಕೆ ರೆಡ್ಡಿಯನ್ನ ಕ್ಷಮಿಸಿದ್ದೀರಿ? ಕನ್ನಡಿಗರ ಸಂಪತ್ತನ್ನು ಲೂಟಿ ಹೊಡೆದವರನ್ನ ಕ್ಷಮಿಸಿದ್ದೀರಾ? ಪ್ರಧಾನಿ ನರೇಂದ್ರ ಮೋದಿ ಕೂಡ ಸಿಬಿಐಗೆ ನಿರ್ದೇಶನ ನೀಡಿ ರೆಡ್ಡಿಯನ್ನ ಕ್ಷಮಿಸಿದ್ದಾರಾ ಎಂದು ಪ್ರಶ್ನೆಯನ್ನು ಟ್ವಿಟ್ಟರ್ ನಲ್ಲಿ ಕೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.
Advertisement
Very interesting! @BSYBJP has pardoned Reddy in interest of state
1 Which interest of Karnataka is served by pardoning someone who looted thousands of crores of Kannadigas’ wealth?
2 Is it upto you to pardon him?
3 Did you ask PM Modi to direct CBI to formalise the ‘pardon’? pic.twitter.com/50D759dNRr
— Siddaramaiah (@siddaramaiah) April 27, 2018
Advertisement