ಬೆಂಗಳೂರು: ಸ್ವಾತಂತ್ರ್ಯ ಬಂದ ಬಳಿಕ ಉತ್ತರ ಕರ್ನಾಟಕಕ್ಕೆ ನೀಡಿರೋ ಅನುದಾನಗಳ ಬಗ್ಗೆ ಚರ್ಚೆಗೆ ಸಿದ್ಧ ಅಂತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಎಚ್‍ಡಿಕೆ, ನಾನು ಯಾವುದೋ ಒಂದು ಜಾತಿಗೆ ಸಿಎಂ ಅಲ್ಲ. ಆರು ಕೋಟಿ ಕನ್ನಡಿಗರಿಗೆ ಸಿಎಂ. ಈ ಹಿಂದೆ ಹಾಸನಕ್ಕೆ ಎಷ್ಟು ಅನುದಾನ ಕೊಟ್ಟಿದ್ದಾರೆ ಅಂತಾನೂ ಚರ್ಚೆ ನಡೆಯಲಿ. ಈ ಚರ್ಚೆ ಎರಡು ವಾರ ಬೇಕಾದರೂ ನಡೆಯಲಿ ಎಂದ ಅವರು, ವಿಭೂತಿ ಹಾಕಿಕೊಂಡು ಬಂದವ್ರಿಗೆ ಸಹಾಯ ಮಾಡಿದ್ದೇನೆ ಅಂತ ವಿಪಕ್ಷಕ್ಕೆ ತಿರುಗೇಟು ನೀಡಿದ್ರು.
Advertisement
Advertisement
ನಾನು ವಚನಭ್ರಷ್ಟ ಅಲ್ಲ. 12 ವರ್ಷಗಳ ಹಿಂದೆ ನಾವು 38 ಮಂದಿ ಶಾಸಕರಿದ್ವಿ. ಆಗ ಯಾಕೆ 80 ಶಾಸಕರಿದ್ದ ನೀವೇ ಯಾಕೆ ನನಗೆ ಅಧಿಕಾರ ಕೊಟ್ರಿ? ಇದು 37 ಶಾಸಕರ ಸರ್ಕಾರವಲ್ಲ. 114 ಮಂದಿ ಶಾಸಕರ ಸರ್ಕಾರ. 104 ಶಾಸಕರಿದ್ದ ನಿಮಗೆ ರಾಜ್ಯಪಾಲರು ಆಹ್ವಾನ ಕೊಟ್ಟಿದ್ರು. ಆದ್ರೆ ಬಹುಮತ ಸಾಬೀತುಪಡಿಸ್ಲಿಲ್ಲ ಅಂತ ತಿರುಗೇಟು ನೀಡಿದ್ದಾರೆ.
Advertisement
ನಮ್ಮ ಸಕಾರ ರಚನೆಯಾಗಿ ಕೆಲವೇ ತಿಂಗಳಾಗಿದೆ. ಮೈತ್ರಿ ಸರ್ಕಾರ ರೈತರ ಪರವಾಗಿದೆ. ಯಾರೂ ಕೂಡ ಆತ್ಮಹತ್ಯೆಗೆ ಮುಂದಾಗಬಾರದು. ಸಮ್ಮಿಶ್ರ ಸರ್ಕಾರ 5 ವರ್ಷ ಅಧಿಕಾರ ಪೂರೈಸುತ್ತೆ. ಈ ಬಗ್ಗೆ ಯಾರಿಗೂ ಭಯ, ಆತಂಕ ಬೇಡ ಅಂದ್ರು.
Advertisement
ರೈತರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ರಾಜ್ಯದಲ್ಲಿ ಇಸ್ರೇಲ್ ಮಾದರಿಯ ಕೃಷಿ ಪದ್ಧತಿ ಅಳವಡಿಕೆಗೆ ಸರ್ಕಾರ ಮುಂದಾಗಿದೆ ಅಂತ ಅವರು ಹೇಳಿದ್ರು.