– ಹೆಚ್ಚು ಬೆಲೆ ಏರಿಕೆ ಮಾಡಿದ ಧೀಮಂತ ಸಿಎಂ ಅಂದ್ರೆ ಓನ್ಲಿ ಒನ್ ಮುಡಾ ಸಿಎಂ ಅಂತ ಲೇವಡಿ
ಬೆಂಗಳೂರು: ಸಿಎಂ, ಡಿಸಿಎಂರಂತ ಪುಣ್ಯಾತ್ಮರು ಕಸದಿಂದ ರಸ ತೆಗೆದು ಲೂಟಿ ಮಾಡುತ್ತಿದ್ದಾರೆ. ಗಾರ್ಬೆಜ್ ಸೆಸ್(Garbage cess) ಮೂರು ಪಟ್ಟು ಮಾಡಿದ್ದಾರೆ. ಖಾಲಿ ಸೈಟಿನಲ್ಲಿ ಕಸ ಬೀಳುತ್ತೋ ಇಲ್ವೋ ಆದರೆ ಬಿಬಿಎಂಪಿ ಸೆಸ್ ಮಾತ್ರ ಬೀಳುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್(R Ashok) ಲೇವಡಿ ಮಾಡಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭ್ರಷ್ಟಾಚಾರ, ಬೆಲೆ ಏರಿಕೆ, ಲೂಟಿ ಮಾಡುವುದೇ ಕಾಂಗ್ರೆಸ್‌ನ(Congress) ಸ್ಟೈಲ್. ಇದು ಕಳೆದ 60 ವರ್ಷಗಳಿಂದ ಕಾಂಗ್ರೆಸ್‌ನ ಚಾಳಿಯಾಗಿದೆ. ಈಗಲೂ ಸರ್ಕಾರ ಅದೇ ಚಾಳಿಯನ್ನು ಮುಂದುವರೆಸಿದೆ ಕಿಡಿಕಾರಿದರು. ಇದನ್ನೂ ಓದಿ: ಮುಸ್ಲಿಂ ಕುಟುಂಬದ ಆಸ್ತಿ ವಿವಾದ – ವಿಚಾರಣೆ ವೇಳೆ ಏಕರೂಪ ನಾಗರೀಕ ಸಂಹಿತೆ ಅಗತ್ಯ ಎಂದ ಹೈಕೋರ್ಟ್
ಸರ್ಕಾರ ಪ್ರತೀ ತಿಂಗಳು ಒಂದೊಂದು ಬೆಲೆ ಏರಿಕೆ ಮಾಡುತ್ತಿದೆ. ಪ್ರತೀ ತಿಂಗಳು ಒಂದೊಂದು ಬೆಲೆ ಏರಿಕೆ ಮಾಡುವುದು ಈ ಸರ್ಕಾರದ ಕಾಮನ್ ಅಜೆಂಡಾ ಆಗಿದೆ. ಬೆಲೆ ಏರಿಕೆ, ರೈತರಿಗೆ ಅನ್ಯಾಯ, ಮುಸ್ಲಿಂ ಓಲೈಕೆ, ಭ್ರಷ್ಟಾಚಾರ, ದಲಿತರ ಹಣ ದುರ್ಬಳಕೆ ವಿರುದ್ಧ ನಾವು ಜನಾಂದೋಲನ ಮಾಡುತ್ತಿದ್ದೇವೆ. ನಾಳೆಯಿಂದ ನಾಲ್ಕು ಹಂತಗಳಲ್ಲಿ 16 ದಿನಗಳ ಕಾಲ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ಪ್ರತೀ ಜಿಲ್ಲೆಯಲ್ಲಿ 1 ಕಿಮೀ ಯಾತ್ರೆ ಇರಲಿದೆ. ನಾಳೆ ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ(Prahlad Joshi) ಅವರು ಹೋರಾಟಕ್ಕೆ ಚಾಲನೆ ನೀಡುತ್ತಾರೆ. ರಾಜ್ಯಾಧ್ಯಕ್ಷರು 99% ಎಲ್ಲಾ ಯಾತ್ರೆಗಳಲ್ಲೂ ಇರುತ್ತಾರೆ ಎಂದು ತಿಳಿಸಿದರು. ಇದನ್ನೂ ಓದಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಭಗವಾಧ್ವಜದ ಮೇಲೆ ಚುನಾವಣೆ ಎದುರಿಸ್ತೇನೆ, ಮುಸ್ಲಿಂ ಮತಗಳು ಬೇಕಿಲ್ಲ: ಯತ್ನಾಳ್ ಲೇವಡಿ
ಬೆಲೆ ಏರಿಕೆ ಮಾಡಿದ ಧೀಮಂತ ಸಿಎಂ
ಬೆಲೆಯೇರಿಕೆಯಿಂದ ಜನರ ಬದುಕು ದುಸ್ತರ ಆಗಿದೆ. ರೈತರ ಹೆಸರಿನಲ್ಲಿ ಮೂರು ಸಲ ಹಾಲಿನ ದರ ಏರಿಕೆ ಮಾಡಲಾಗಿದೆ. ಮೊಸರಿನ ಬೆಲೆ, ಹಾಲಿನ ಬೆಲೆ ಯಾರಿಗೆ ಕೊಡ್ತಾರೋ, ಲೂಟಿ ಹೊಡಿತಿದ್ದಾರೆ. ಹೆಚ್ಚು ಸಲ ಬೆಲೆ ಏರಿಕೆ ಮಾಡಿದ ಧೀಮಂತ ಸಿಎಂ ಇದ್ದರೆ, ಅದು ಓನ್ಲಿ ಒನ್ ಮುಡಾ ಸಿಎಂ ಎಂದು ವ್ಯಂಗ್ಯವಾಡಿದರು.
ಮುಸ್ಲಿಮರ(Muslims) ಓಲೈಕೆಗಾಗಿ ಮೀಸಲಾತಿ ಕೊಟ್ಟಿದ್ದಾರೆ. ಇನ್ಮೇಲೆ ಮೀಸಲಾತಿ ಅಡಿಯೂ ಟೆಂಡರ್ ತೆಗೆದುಕೊಳ್ಳುತ್ತಾರೆ. ಜನರಲ್ ಕೆಟಗರಿಯಲ್ಲೂ ಟೆಂಡರ್ ತೆಗೆದುಕೊಳ್ಳುತ್ತಾರೆ. ಮಂಗಳೂರಿನಲ್ಲಿ 50% ಗುತ್ತಿಗೆ ಮುಸ್ಲಿಮರೇ ತೆಗೆದುಕೊಳ್ಳುತ್ತಿದ್ದಾರೆ. ಧರ್ಮಧರ್ಮಗಳ ನಡುವೆ ಬೆಂಕಿ ಹಚ್ಚಲು ಮೀಸಲಾತಿ ಕೊಡಲಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹಿಂದೆ ಡೀಸೆಲ್ ದರ ಏರಿಕೆ ಆದಾಗ ಯಾಕೆ ಲಾರಿ ಮಾಲೀಕರು ಮುಷ್ಕರ ಮಾಡಲಿಲ್ಲ? – ಡಿಕೆಶಿ
ಜನಾಕ್ರೋಶ ಯಾತ್ರೆಯಲ್ಲಿ ಜೆಡಿಎಸ್(JDS) ಗೈರು ವಿಚಾರವಾಗಿ ಪ್ರತಿಕ್ರಿಯಿಸಿ, ಹೋರಾಟಗಳು ಇದುವರೆಗೂ ಏನೇನು ನಡೆದಿವೆಯೋ ಜೆಡಿಎಸ್ ಅವರದ್ದೇ ಆದ ಹೋರಾಟ ಮಾಡುತ್ತಿದ್ದಾರೆ. ನಾವು ನಮ್ಮ ಹೋರಾಟ ಮಾಡುತ್ತಿದ್ದೇವೆ. ಕೆಲವು ಹೋರಾಟ ಒಟ್ಟಿಗೇ ಮಾಡಿದ್ದೇವೆ. ಸಮನ್ವಯ ಸಮಿತಿ ರಚನೆ ಮಾಡಬೇಕು ಎಂದು ಇದೆ. ಇದರ ಬಗ್ಗೆ ಕುಮಾರಸ್ವಾಮಿ ಜೊತೆಗೆ ಮಾತನಾಡುತ್ತೇನೆ ಎಂದರು. ಇದನ್ನೂ ಓದಿ: ನಾಳೆಯಿಂದ ಬಿಜೆಪಿಯಿಂದ ಜನಾಕ್ರೋಶ ಯಾತ್ರೆ – ಮೈಸೂರಿನಲ್ಲಿ ಜೋಶಿ ಚಾಲನೆ; ಸರ್ಕಾರದ ವೈಫಲ್ಯ ವಿರುದ್ಧ ಕಹಳೆ
ವಿನಯ್ ಸೋಮಯ್ಯ(Vinay Somaiah) ಆತ್ಮಹತ್ಯೆ ಕುರಿತು ಮಾತನಾಡಿದ ಅವರು, ವಿನಯ್ ಸೋಮಯ್ಯ ಕುಟುಂಬಕ್ಕೆ ನ್ಯಾಯ ಸಿಗಬೇಕು. ಈ ಹೋರಾಟ ಇಲ್ಲಿಗೇ ನಿಲ್ಲಿಸಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಈಶ್ವರಪ್ಪ ವಿಚಾರದಲ್ಲಿ ಕಾಂಗ್ರೆಸ್‌ನವರು ಹೆಣದ ಮೇಲೆ ರಾಜಕೀಯ ಮಾಡಿರಲಿಲ್ವಾ. ಬಿಜೆಪಿ ರಾಜಕೀಯ ಮಾಡುತ್ತಿದೆ ಎನ್ನುತ್ತಾರೆ. ಈಗ ಡೆತ್‌ನೋಟ್ ಇದ್ದು ಪರಿಶೀಲನೆ ಮಾಡಬೇಕು ಎನ್ನುತ್ತಾರೆ. ನಾವು ಆ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದ ಅವರು ಬಳಿಕ ಜನಾಕ್ರೋಶ ಯಾತ್ರೆಯ ಪೋಸ್ಟರ್ ಲೋಗೋ ಬಿಡುಗಡೆ ಮಾಡಿದರು.