ವಾಷಿಂಗ್ಟನ್: ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಇರಾನ್‌ನ (Iran) ನೂತನ ಸುಪ್ರೀಂ ಲೀಡರ್ ಮೊಜ್ತಾಬಾ ಖಮೇನಿ (Mojtaba Khamenei) ಎಲ್ಲಿದ್ದಾರೆ? ಬದುಕಿದ್ದಾರಾ? ಎಂದು ಅಮೆರಿಕ (America) ಪ್ರಶ್ನಿಸಿದೆ.
ಮೊಜ್ತಾಬಾ ಖಮೇನಿ ಅನುಪಸ್ಥಿತಿಯಲ್ಲಿ ಇರಾನ್ ಆಡಳಿತ ನಡೆಯುತ್ತಿದೆ. ದಿನಾಂಕ ಇಲ್ಲದ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಈಗಾಗಲೇ ಇರಾನ್‌ನ ಐವರು ಉನ್ನತ ನಾಯಕರು ಹತ್ಯೆ ಆಗಿದ್ದಾರೆ. ಇಷ್ಟಾದರೂ ಸಾರ್ವಜನಿಕವಾಗಿ ಕಾಣಿಸಿಲ್ಲ ಎಂದು ಅಮೆರಿಕ ಗುಪ್ತಚರ ಪಡೆಗಳು ಮಾಹಿತಿ ನೀಡಿವೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಸಂಪೂರ್ಣ ಓಪನ್ ಮಾಡಿ – ಇರಾನ್‌ಗೆ 48 ಗಂಟೆಗಳ ಗಡುವು ನೀಡಿದ ಟ್ರಂಪ್
ಮೊಜ್ತಾಬಾ ಖಮೇನಿ ಅನುಪಸ್ಥಿತಿಯ ಬಗ್ಗೆ ಅಮೇರಿಕ ಪ್ರಶ್ನೆಗೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘಿ ಅಚ್ಚರಿ ಹೇಳಿಕೆ ನೀಡಿದ್ದಾರೆ. ಒಬ್ಬ ವ್ಯಕ್ತಿಯ ಉಪಸ್ಥಿತಿ ಅಥವಾ ಅನುಪಸ್ಥಿತಿ ಇರಾನ್ ರಾಜಕೀಯ,ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.
ಮೊಜ್ತಾಬಾ ಖಮೇನಿ ಇದ್ದಾರಾ? ಇಲ್ವ ಎಂಬುದು ನಿಗೂಢವಾಗಿಯೇ ಉಳಿದಿದೆ. ಆಯಾತುಲ್ಲಾ ಖಮೇನಿ ಹತ್ಯೆಯಾದ ದಿನ ಮೊಜ್ತಾಬಾ ಖಮೇನಿಯವರಿಗೂ ಗಾಯ ಆಗಿದೆ ಎನ್ನಲಾಗಿತ್ತು. ಈಗ ಸಾರ್ವಜನಿಕವಾಗಿ ಕಾಣಿಸದೇ ಇರುವುದು ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಇಸ್ರೇಲ್‌ನ ನ್ಯೂಕ್ಲಿಯರ್ ಸೌಲಭ್ಯವಿರುವ ಪಟ್ಟಣಗಳ ಮೇಲೆ ಇರಾನ್ ಕ್ಷಿಪಣಿ ಸುರಿಮಳೆ – 100ಕ್ಕೂ ಹೆಚ್ಚು ಮಂದಿಗೆ ಗಾಯ

