ಸದ್ಯದಲ್ಲೇ ಹಸೆಮಣೆ ಏರಲು ರೆಡಿ ಆಗುತ್ತಿರುವ ಪ್ರಥಮ್, ಮದುವೆಗೂ ಮುನ್ನ ಹನಿಮೂನ್ (Honeymoon) ಬಗ್ಗೆ ಮಾತನಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಸಿಂಪಲ್ ಆಗಿ ಮದುವೆ ಆಗುವುದಾಗಿ ಹೇಳಿದ್ದಾರೆ. ವಿದೇಶಕ್ಕೆ ಹನಿಮೂನ್ ಗೆ ಹೋಗುವುದಕ್ಕೆ ವ್ಯಂಗ್ಯ ಮಾಡಿರುವ ಅವರು ‘ಹನಿಮೂನ್ ಗಾಗಿ ವಿದೇಶಕ್ಕೆ ಹೋಗ್ಬೇಕಾ? ಎಲ್ಲಿಗೆ ಹೋದ್ರೂ ಆಗೋದು ಅದೇನೆ. ಅದಕ್ಕಾಗಿ ಬೇರೆ ದೇಶಕ್ಕೆ ಏಕೆ ಹೋಗ್ಬೇಕು. ಇಲ್ಲೇ ಹನಿಮೂನ್ ಮಾಡ್ಕೋಬೋದು ಅಲ್ಲವಾ’ ಎಂದು ಪ್ರಶ್ನೆ ಮಾಡಿದ್ದಾರೆ.
ಹನಿಮೂನ್, ಮಕ್ಕಳು, ಮದುವೆ ಬಗ್ಗೆ ಅವರು ಆಡಿದ ಮಾತುಗಳು ಸಖತ್ ಟ್ರೋಲ್ ಆಗುತ್ತವೆ. ಮಗುವಾದ ಮೇಲೂ ತಾವು ಆ ವಿಷಯವನ್ನು ಹಂಚಿಕೊಳ್ಳುವುದಿಲ್ಲ. ಹನಿಮೂನ್ ಗೆ ಹೋದ ಫೋಟೋಗಳನ್ನು ಶೇರ್ ಮಾಡುವುದಿಲ್ಲ ಎಂದಿರುವ ಅವರು, ಎಲ್ಲರಿಗೂ ಮಕ್ಕಳು ಆಗುತ್ತವೆ. ಅದರಲ್ಲೇನು ವಿಶೇಷ. ನನಗೇನೂ ಹುಲಿ-ಸಿಂಹ ಹುಟ್ಟುತ್ತಾ ಎಂದು ಅವರು ತಮಾಷೆಯಾಗಿಯೇ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಮೊನ್ನೆಯಷ್ಟೇ ಪ್ರಥಮ್ (Olle Huduga Pratham) ಸದ್ದಿಲ್ಲದೇ ಎಂಗೇಜ್ (Engage) ಆಗಿದ್ದಾರೆ. ಸದ್ಯದಲ್ಲೇ ಹಸೆಮಣೆ ಏರೋದಕ್ಕೆ ರೆಡಿಯಾಗಿದ್ದಾರೆ. ಯಾವುದೇ ಆಡಂಬರ ಇಲ್ಲದೇ ಮದುವೆ ಆಗುವುದಾಗಿ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಮದುವೆಯ ಮೆನು ಹೇಗಿರತ್ತೆ ಅಂತಾ ಪ್ರಥಮ್ ಬಾಯ್ಬಿಟ್ಟಿದ್ದಾರೆ. ಹಾಗೆಯೇ ಮದುವೆಗೆ ಯಾರೆಲ್ಲಾ ಸೆಲೆಬ್ರಿಟಿ ಭಾಗಿಯಾಗುತ್ತಾರೆ ಎಂಬುದಕ್ಕೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ:ರಜನಿಯ 171ನೇ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್
ಯಾವುದೇ ಆಡಂಬರ, ವೈಭವ ಇರುವುದಿಲ್ಲ. ನೀವೆಲ್ಲರೂ ಹೇಗೆ ಬದುಕುತ್ತಿದ್ದೀರೋ ನಾವು ಕೂಡ ಹಾಗೇ. ನನ್ನ ಕೈಹಿಡಿಯುವವರು ಮಾಧ್ಯಮ, ಸೋಷಿಯಲ್ ಮೀಡಿಯಾ, ಪಬ್ಲಿಸಿಟಿಯಿಂದ ತುಂಬಾ ದೂರ. ಸಿದ್ಧರಾಮಯ್ಯ, ರವಿಚಂದ್ರನ್ ಅವ್ರ ಹೆಂಡ್ತಿ ಥರ ಅಂದುಕೊಳ್ಳಿ. ಮದುವೆ ಅವ್ರು ಹೇಗೇ ಮಾಡುತ್ತಾರೋ ಅವರಿಷ್ಟ. ನನಗೆ ದೇವಸ್ಥಾನದಲ್ಲಿ ಆಗುವ ಆಸೆ, ಅವ್ರಿಷ್ಟದಂತೆ ಅವ್ರು ಮಾಡ್ಲಿ ಬಿಡಿ. ನನ್ನ ಕಡೆಯಿಂದ ಒಂದು 200-300 ಜನರಿಗೆ ಒಂದು ಸಿಂಪಲ್ ಬೀಗರ ಊಟ. ಬಹುಶಃ ನಮ್ಮ ಕುಟುಂಬದ ಕೊನೆಯ ನಾನ್ ವೆಜ್ ಊಟ ಇದಾಗಿರಬಹುದು. ಇದಿಷ್ಟೇ ನನ್ನ ಮದುವೆಯ ಮೆನು ನೀವು ಹರಸಿ ಎಂದು ಪ್ರಥಮ್ ಮನವಿ ಮಾಡಿದ್ದಾರೆ.
ಪ್ರಥಮ್, ಮಂಡ್ಯ ಮೂಲದ ಭಾನುಶ್ರೀ (Bhanushree) ವರಿಸಲಿದ್ದು, ಟ್ರೆಡಿಷನಲ್ ಫ್ಯಾಮಿಲಿಯ ಸಿಂಪಲ್ ಹುಡುಗಿಯನ್ನ ಪ್ರಥಮ್ ಮದುವೆಯಾಗುತ್ತಿದ್ದಾರೆ. ಕರ್ನಾಟಕದ ಆಳಿಯ ಇನ್ಮುಂದೆ ಮಂಡ್ಯದ ಆಳಿಯ. ಮಂಡ್ಯ ಮೂಲದ ಭಾನುಶ್ರೀ ಜೊತೆ ಪ್ರಥಮ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆ ಮಂಡ್ಯ ಪಕ್ಕದ ಹಳ್ಳಿಯಲ್ಲಿ ಎರಡೂ ಫ್ಯಾಮಿಲಿಯ ಹಿರಿಯರ ಸಮ್ಮುಖದಲ್ಲಿ ಸಿಂಪಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಭಾನುಶ್ರೀ ಡಿಗ್ರಿ ಮುಗಿಸಿ ಡಬಲ್ ಡಿಗ್ರಿ ಮಾಡೋಕೆ ತಯಾರಿ ನಡೆಸುತ್ತಿದ್ದಾರೆ. ಪ್ರಥಮ್ ಹಳ್ಳಿ ಹುಡುಗಿಯನ್ನು ಮದುವೆ ಆಗ್ತೀನಿ ಅಂತ ಹೇಳುತ್ತಿದ್ದರು. ಆದರಂತೆಯೇ ಬಡ ಕುಟುಂಬದ ಹುಡುಗಿಯನ್ನು ಒಳ್ಳೆಯ ಹುಡುಗ ಪ್ರಥಮ್ ಮದುವೆ ಆಗುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನಟ ಹಂಚಿಕೊಂಡಿದ್ದಾರೆ.
ಸಿನಿಮಾ ಮಂದಿಯಲ್ಲಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರಿಗೆ ಹೇಳಿದ್ದೇನೆ. ನನ್ನಾಕೆಗೆ ಧ್ರುವ ಸರ್ಜಾ ಅಂದ್ರೆ ಬಲು ಇಷ್ಟ. ಶಿವಣ್ಣ (Shivarajkumar) ಅಂದ್ರೂ ತುಂಬಾ ಗೌರವ ಇದೆ. ಅವರು ನಮ್ಮ ಮದುವೆಗೆ ಬರಬೇಕು ಅನ್ನೋದು ನನ್ನಾಕೆಯ ಆಸೆ ಆಗಿದೆ. ಅವರನ್ನ ಇನ್ವೈಟ್ ಮಾಡೋ ಪ್ಲಾನ್ ಇದೆ. ನಟ ಯಶ್(Yash), ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಮದುವೆಗೆ ಆಮಂತ್ರಣ ನೀಡುತ್ತೇನೆ ಎಂದು ಮಾತನಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಆಗುತ್ತಿದೆ. ಡೇಟ್ ಇನ್ನೂ ಫಿಕ್ಸ್ ಆಗಿಲ್ಲ. ಆದ್ಮೇಲೆ ಸರಳವಾಗಿಯೇ ನಮ್ಮ ವಿವಾಹ ನೆರವೇರುತ್ತದೆ ಎಂದು ಪ್ರಥಮ್ ತಿಳಿಸಿದ್ದಾರೆ.