ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಇಂದು ಚಂಡೀಗಢದಲ್ಲಿ ಡಾ. ಗುರುಪ್ರೀತ್ ಕೌರ್ ಅವರನ್ನು ವಿವಾಹವಾಗಲಿದ್ದಾರೆ. ಈ ನಡುವೆ ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರು ಯಾವಾಗ ಮದುವೆಯಾಗುತ್ತಾರೆ ಎಂಬ ಚರ್ಚೆ ಭಾರೀ ಜೋರಾಗಿದೆ.
Advertisement
ಈ ಕುರಿತಂತೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ ರಾಘವ್ ಚಡ್ಡಾ ಅವರು, ಭಾರತದ ಸಂಪ್ರದಾಯದ ಪ್ರಕಾರ ಕುಟುಂಬದಲ್ಲಿ ಮೊದಲು ಹಿರಿಯರು ಮದುವೆಯಾಗುತ್ತಾರೆ. ಕಿರಿಯರು ಹಿರಿಯರನ್ನು ಅನುಸರಿಸುತ್ತಾರೆ ಎಂದು ಹೇಳುವ ಮೂಲಕ ಭಗವಂತ್ ಮಾನ್ ಅವರನ್ನು “ಹಿರಿಯ ಸಹೋದರ” ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಾಳೆ ಪಂಜಾಬ್ ಸಿಎಂ 2ನೇ ಮದುವೆ – ಮತ್ತೆ ಹಸೆಮಣೆ ಏರಲಿದ್ದಾರೆ ಭಗವಂತ್ ಮಾನ್
Advertisement
Advertisement
ಮದುವೆಯಾಗುವುದಕ್ಕೆ ಈಗಾಗಲೇ ಆಫರ್‌ಗಳು ಬರುತ್ತಿದೆ. ಸಾಕಷ್ಟು ಮಂದಿ ಮದುವೆ ಯಾವಾಗ ಎಂದು ಕೇಳುತ್ತಿದ್ದಾರೆ. ಮದುವೆಯಾಗಲು ನಿರ್ಧರಿಸಿದ ಬಳಿಕ ಖಂಡಿತವಾಗಿಯೂ ನನ್ನ ಮದುವೆ ಯಾವಾಗ ಎಂಬುವುದನ್ನು ತಿಳಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಕಾಳಿ ವಿವಾದ ಆಯ್ತು, ಇದೀಗ ಶಿವ, ಪಾರ್ವತಿ ಪಾತ್ರಧಾರಿಗಳ ಚಿತ್ರ ಹಂಚಿಕೊಂಡ ಲೀನಾ
Advertisement
ಭಗವಂತ್ ಮಾನ್ ಅವರ ಮದುವೆ ಕಾರ್ಯಕ್ರಮದ ನಿರ್ವಹಣೆಯನ್ನು ರಾಘವ್ ಚಡ್ಡಾ ಅವರು ವಹಿಸಿದ್ದು, ಈ ಕುರಿತಂತೆ ಮಾತನಾಡಿದ ಅವರು, ಇದೊಂದು ಖಾಸಗಿ ಸಮಾರಂಭವಾಗಿದ್ದು, ಬೆರಳೆಣಿಕೆಯಷ್ಟು ಪಕ್ಷದ ಸದಸ್ಯರು ಮತ್ತು ಎರಡೂ ಕುಟುಂಬಸ್ಥರ ಆಪ್ತ ವರ್ಗದವರು ಮಾತ್ರ ಭಾಗವಹಿಸಲಿದ್ದಾರೆ. ಅಲ್ಲದೇ ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.