ಲಕ್ನೋ: 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್, ಎಸ್‍ಪಿ (ಸಮಾಜಾವಾದಿ ಪಕ್ಷ) ಮತ್ತು ಬಿಎಸ್‍ಪಿ (ಬಹುಜನ ಸಮಾಜಾವಾದಿ ಪಕ್ಷ) ಮೂವರು ಒಂದಾದರೂ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸ್ಥಾನಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೀರತ್‍ನ ಸುಭಾರತಿ ವಿಶ್ವವಿದ್ಯಾಲಯದಲ್ಲಿ ನಡೆದ ಸ್ಥಳೀಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ, ಚುನಾವಣೆಯಲ್ಲಿನ ವಿರೋಧ ಪಕ್ಷಗಳು ಏನೇ ಕಸರತ್ತು ಮಾಡಿದ್ರೂ ಗೆಲುವು ನಮ್ಮದೇ ಆಗಲಿದೆ. ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿ ಅವರ ಜನಪರ ಯೋಜನೆಗಳು ಎಲ್ಲ ವರ್ಗದವರಿಗೂ ತಲುಪಿದ್ದು, ಹಾಗಾಗಿ ನಾವೇ ಬಹುಮತ ಪಡೆಯಲಿದ್ದೇವೆ. ವಿರೋಧ ಪಕ್ಷಗಳು ರಚಿಸಿರುವ ಮಹಾಘಟ ಬಂಧನ್ ಬಗ್ಗೆ ಯಾರು ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರು.
Advertisement
Advertisement
ಉತ್ತರ ಪ್ರದೇಶದಲ್ಲಿ ಎಸ್‍ಪಿ, ಬಿಎಸ್‍ಪಿ ಒಂದಾಗಿದೆ ಏನು ಮಾಡೋದು ಎಂದು ಕೆಲವು ಕಾರ್ಯಕರ್ತರು ನನ್ನನ್ನು ಪ್ರಶ್ನಿಸುತ್ತಾರೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಇಬ್ಬರು ಯುವಕರು ಕೈ ಕೈ ಹಿಡಿದುಕೊಂಡು ಚುನಾವಣೆ ಎದುರಿಸಿದರು. ಪರಿಣಾಮ ಬಿಜೆಪಿ 300 ಅಧಿಕ ಕ್ಷೇತ್ರಗಳನ್ನು ಗೆಲುವನ್ನು ಸಾಧಿಸಿದ್ದೇವೆ. ಈ ಬಾರಿ ಕಾಂಗ್ರೆಸ್, ಎಸ್‍ಪಿ, ಬಿಎಸ್‍ಪಿ ಮೂವರು ಒಂದಾದ್ರೂ ಚುನಾವಣೆ 74ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.
Advertisement
ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಅಮಿತ್ ಶಾ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ಸಂಬಂಧ ಸ್ಥಳೀಯ, ಜಿಲ್ಲಾ ಮಟ್ಟದ ಕಾರ್ಯಕರ್ತರೊಂದಿಗೆ ನಿರಂತರವಾಗಿ ಸಭೆಗಳನ್ನು ನಡೆಸುತ್ತಿದ್ದಾರೆ. ಭಾನುವಾರ ನಡೆದ ಸಭೆಯಲ್ಲಿಯೂ ಚುನಾವಣೆ ಪ್ರಚಾರ, ಮೋದಿ ಮತ್ತು ಯೋಗಿ ಸರ್ಕಾರದ ಯೋಜನಗೆಗಳ ಕೊನೆಯ ವರ್ಗದ ಜನರಿಗೆ ತಿಳಿ ಹೇಳುವುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಅಮಿತ್ ಶಾ ಚರ್ಚೆ ನಡೆಸಿದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews
उत्तर प्रदेश के सांसदों व विधायकों के साथ सामूहिक बैठक कर विभिन्न विषयों पर चर्चा की। साथ ही उन्हें मोदी सरकार और प्रदेश सरकार की ऐतिहासिक पहलों व जनकल्याण की योजनाओं का लाभ प्रदेश के गावों,गरीबों व समाज के हर वर्ग तक पहुंचे यह सुनिश्चित करने का आवाहन किया। pic.twitter.com/YdqdBXQvur
— Amit Shah (@AmitShah) August 12, 2018
मेरठ में प्रदेश कार्यसमिति बैठक के समापन सत्र को संबोधित किया। उत्तर प्रदेश में भाजपा बूथ स्तर तक इतनी मजबूत है कि यहां अवसरवादी महागठबंधन भी भाजपा की विजय को नहीं रोक सकता। हमारी केंद्र और प्रदेश सरकार ने अनेकों जनकल्याणकारी कार्य किये हैं जिससे 2014 से बड़ी विजय निश्चित है। pic.twitter.com/D4DK843SVN
— Amit Shah (@AmitShah) August 12, 2018
आज @BJP4UP की प्रदेश कार्यसमिति बैठक के समापन सत्र को संबोधित करने मेरठ पहुंचा। गाज़ियाबाद, मुरादनगर, मोदीनगर व मेरठ की जनता व कार्यकर्ताओं के असीम स्नेह के लिए हृदय से अभिनदंन। pic.twitter.com/ku5KnrrURd
— Amit Shah (@AmitShah) August 12, 2018