ರಾಮನಗರ: ಕೋಲಾರದ ಶಿವಾರಪಟ್ಟಣ ಎಂಬ ಹಳ್ಳಿಯಲ್ಲಿ ಕಳೆದ 35 – 40 ವರ್ಷಗಳಿಂದ ದೇವರ ಪ್ರತಿಮೆ ಮಾಡಿಕೊಂಡು ಬಂದಿರುವುದು ಮುಸ್ಲಿಂ ಕುಟುಂಬದವರೇ. ಇಂದಿಗೂ ಅವರು ಶಿಲ್ಪಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು ಯಾವಾಗ ಬಹಿಷ್ಕರಿಸುತ್ತೀರಿ? ಎಂಬುದನ್ನು ಬಿಜೆಪಿಯವರು ಹೇಳಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿ ಟೀಕಿಸಿದ್ದಾರೆ.
ಅವರಿಂದು ಮಾಧ್ಯಮಗಳೊಂದಿಗೆ ಮಾತನಾಡಿ, ಮುಂದೊಂದು ದಿನ ಆರ್‌ಎಸ್‌ಎಸ್ ಒಪ್ಪಿಕೊಳ್ಳುತ್ತೀರಾ ಎನ್ನುವ ಸಭಾಪತಿಗಳು ಇದನ್ನೇಕೆ ನೋಡುತ್ತಿಲ್ಲ. ಇದೆಲ್ಲವೂ ಸುಧಾರಣೆ ಆಗೋದು ಯಾವಾಗ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಇಸ್ಪೀಟ್ ಆಡೋರಿಗೆ ಪೊಲೀಸರು ತೊಂದರೆ ಕೊಡದಂತೆ ಆದೇಶಿಸಿ: ಹೆಚ್‌ಡಿಕೆ ಮನವಿ
ನಾನು ಜಾತಿ ಕೇಳುವುದಿಲ್ಲ: ಈಚೆಗಷ್ಟೇ ನಾನು `ದೇವಸ್ಥಾನಗಳಲ್ಲಿ ದಲಿತರಿಗೆ ಪೂಜೆ ಮಾಡುವುದಕ್ಕೆ ಬಿಡುತ್ತಾರೆಯೇ? ಎಂದು ಪ್ರಶ್ನಿಸಿದ್ದೆ. ಇದಕ್ಕೆ ಈ ವಿವಾದವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಮನೆಯೊಳಗೂ ದಲಿತರನ್ನೂ ಹೀಗೇ ಸೇರಿಸುತ್ತಾರೆಯೇ ಎಂದು ಸ್ವಾಮೀಜಿಯೊಬ್ಬರು ಪ್ರಶ್ನಿಸಿದ್ದರು. ಆ ಸ್ವಾಮೀಜಿ ಅವರು ಬೇಕಿದ್ದರೆ ಬಂದು ನನ್ನ ಮನೆಯ ವಾತಾವರಣ ನೋಡಲಿ, ಅವರಿಗೂ ಉಳಿದುಕೊಳ್ಳಲು ಆಶ್ರಮದ ಪದ್ಧತಿಯಂತೆಯೇ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: 40% ಕಮಿಷನ್ – ಈಶ್ವರಪ್ಪ ವಿರುದ್ಧ ಮೋದಿಗೆ ಪತ್ರ ಬರೆದ ಗುತ್ತಿಗೆದಾರ
ದಲಿತರೂ ಸೇರಿದಂತೆ ಎಲ್ಲ ವರ್ಗದ ಜನರು ನಮ್ಮ ತೋಟದ ಕೆಲಸಕ್ಕೆ ಬೆಳಿಗ್ಗೆ 5:30 ರಿಂದಲೇ ಬರುತ್ತಾರೆ. ಪ್ರತಿದಿನ ನಾನು ಅವರ ಕಷ್ಟಗಳನ್ನು ವಿಚಾರಿಸುತ್ತೇನೆಯೇ ಹೊರತು ಯಾವ ಜಾತಿ? ಎಂದು ಕೇಳುವುದಿಲ್ಲ ಇಂದಿಗೂ ಅವರಿಗೆ ನನ್ನ ಮನೆಯಲ್ಲಿ ಮುಕ್ತವಾಗಿ ಓಡಾಡಿಕೊಂಡು ಕೆಲಸ ಮಾಡುವ ವಾತಾವರಣ ಕಲ್ಪಿಸಿಕೊಟ್ಟಿದ್ದೇನೆ. ಮನೆಯಲ್ಲಿ ದಲಿತರೂ ನನ್ನ ಜೊತೆ ಕುಳಿತು ಊಟ ಮಾಡುತ್ತಾರೆ. ನಾನು ಯಾವುದೇ ವರ್ಗವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿಲ್ಲ. ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟ, ಅದನ್ನು ಹಾಳುಮಾಡಬೇಡಿ ಎಂದು ಮನವಿ ಮಾಡಿದ್ದಾರೆ.