ನೆಲಮಂಗಲ: ಬೆಂಗಳೂರು ನೆಲಮಂಗಲ ಮಾರ್ಗದ ಎಲಿವೇಟೆಡ್ ಫ್ಲೈಓವರ್ ದುರಸ್ತಿ ಕಾರ್ಯ ಪ್ರಾರಂಭ ಮಾಡಿ 37 ದಿನ ಕಳೆದರೂ, ಇನ್ನೂ ಸಂಚಾರಕ್ಕೆ ಅನುವು ಮಾಡಿಕೊಟ್ಟಿಲ್ಲ. ಈಗಾಗಲೇ ಫ್ಲೈ ಓವರ್ ಪರಿಶೀಲನೆಗೆ ದೆಹಲಿ ಇಂಜಿನಿಯರ್ಸ್‍ಗಳು ಭೇಟಿ ನೀಡಿದ್ದು, ಅವರು ಒಪ್ಪಿಗೆ ನೀಡಿದರೆ ಮಾತ್ರ ಸಂಚಾರಕ್ಕೆ ಅನುಮತಿ ಸಿಗಲಿದೆ.
ಪಿಲ್ಲರ್ 102 ಮತ್ತು 103ರಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಬಗೆಹರಿಸಿದರೂ ಕೂಡ ಸಂಚಾರಕ್ಕೆ ಅನುಮತಿ ನೀಡಲು ಬುಧವಾರದಿಂದ ದೆಹಲಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಜ್ಞ ಇಂಜಿನಿಯರ್‍ಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
Advertisement
Advertisement
ಇಂಜಿನಿಯರ್‌ಗಳು ತಾಂತ್ರಿಕ ದೋಷ ಇದ್ದ ಪಿಲ್ಲರ್‌ಗಳಿಗೆ ಸಪೋರ್ಟ್ ಲಿಂಕ್ ಅಳವಡಿಸಿ ಪರಿಶೀಲನೆ ನಡೆಸಿದ್ದು, ದೆಹಲಿ ತಜ್ಞರು ಸಂಚಾರಕ್ಕೆ ಒಪ್ಪಿಗೆ ನೀಡಿದರಷ್ಟೇ ಅವಕಾಶ. ಇಲ್ಲದಿದ್ದರೆ ಎರಡರಿಂದ ಮೂರು ಪಿಲ್ಲರ್ ಬದಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ನಕಲಿ ಸಮಾಜವಾದ: ಅಖಿಲೇಶ್ ಯಾದವ್ ಪಕ್ಷದ ವಿರುದ್ಧ ಮೋದಿ ವಾಗ್ದಾಳಿ
Advertisement
Advertisement
ಫ್ಲೈಓವರ್ ಮುಚ್ಚಿ ತಿಂಗಳುಗಳು ಕಳೆದಿದೆ. ವಾಹನ ಸವಾರರಂತೂ ಪ್ರತಿನಿತ್ಯ ಟ್ರಾಫಿಕ್ ಕಿರಿಕಿರಿ ಜೊತೆಗೆ ಟೋಲ್ ಹಣ ಕಟ್ಟಿ ಹೈರಾಣಾಗಿದ್ದಾರೆ. ಇನ್ನೂ ದುರಸ್ತಿಯಲ್ಲಿದ್ದರೂ ಸಹ ಅರ್ಧ ರಸ್ತೆಗೆ ಪೂರ್ತಿ ಟೋಲ್ ಹಣ ಕಟ್ಟಿ ಸಂಚಾರ ಮಾಡುವ ಪರಿಸ್ಥಿತಿ ಇದ್ದು, ಆದಷ್ಟು ಬೇಗ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ವಾಹನ ಸವಾರರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಂಪುಟ ವಿಸ್ತರಣೆಗೆ ಸಿಗುತ್ತಾ ವರಿಷ್ಠರ ಗ್ರೀನ್ ಸಿಗ್ನಲ್- ಯಾರೆಲ್ಲ ಸಚಿವಾಕಾಂಕ್ಷಿಗಳು?