ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ (Rahul Gandhi) ಜೈಲು ಶಿಕ್ಷೆಯಾಗಿ ಸಂಸದ ಸ್ಥಾನದಿಂದ ಅನರ್ಹವಾಗುತ್ತಿದ್ದಂತೆ (Disqualification) 2013ರಲ್ಲಿ ಯುಪಿಎ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ (Ordinance) ವಿಚಾರ ಈಗ ಚರ್ಚೆ ಆಗುತ್ತಿದೆ.
ಈ ಚರ್ಚೆಯಾಗಲು ಕಾರಣ 2013ರಲ್ಲಿ ನಡೆದ ಘಟನೆ. ಅಂದು ಸುಗ್ರೀವಾಜ್ಞೆಯನ್ನು ಹರಿದು ಎಸೆಯದೇ ಇದ್ದಿದ್ದರೆ ರಾಹುಲ್ ಗಾಂಧಿ ಅನರ್ಹರಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
Advertisement
2013ರಲ್ಲಿ ಏನಾಗಿತ್ತು?
ಯಾವುದೇ ಜನಪ್ರತಿನಿಧಿ 2 ವರ್ಷ ಜೈಲು ಶಿಕ್ಷೆಗೆ ಗುರಿಯಾದರೆ ಅವರು ತನಗೆ ಲಭ್ಯವಿರುವ ಎಲ್ಲಾ ಕಾನೂನಿನ ಅವಕಾಶ ಬಳಸಿಕೊಳ್ಳುವ ತನಕವೂ ಹುದ್ದೆಯಿಂದ ಅನರ್ಹವಾಗದಂತೆ ರಕ್ಷಣೆ ನೀಡುವ ಕಾಯ್ದೆಯನ್ನು 2013ರ ಜುಲೈ 10ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.
Advertisement
When Rahul Gandhi took (fake) moral high ground and tore the Ordinance that could have saved him today. He should take similar moral high ground now and say he accepts the disqualification as he had endorsed the 2013 judgement and it is equally applicable to him.
But he won’t… pic.twitter.com/XGK1BJorUV
— Amit Malviya (@amitmalviya) March 24, 2023
Advertisement
Advertisement
ಕಳಂಕಿತ ಸಂಸದರು ಮತ್ತು ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ಸಂಬಂಧವಾಗಿ ಸುಪ್ರೀಂ ಕೋರ್ಟ್ (Supreme Court) ಪ್ರಕಟಿಸಿದ ತೀರ್ಪು ರಾಜಕೀಯ ಪಕ್ಷಗಳಿಗೆ ಸಂಕಷ್ಟ ತಂದಿಟ್ಟಿತ್ತು. ಈ ತೀರ್ಪನ್ನು ಜಾರಿಗೊಳಿಸದೇ ಇರಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಯುಪಿಎ ಬೆಂಬಲಿತ ಪಕ್ಷಗಳಿಂದಲೇ ವಿಪರೀತ ಒತ್ತಡ ಬಂದಿತ್ತು.
ಈ ಒತ್ತಡಕ್ಕೆ ಮಣಿದ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಸರ್ಕಾರ (Manmohan Singh’s Government) ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಯಾವುದೇ ಜನಪ್ರತಿನಿಧಿಗೆ ಶಿಕ್ಷೆಯಾದರೆ ಅವರು ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು 90 ದಿನಗಳ ಅವಕಾಶ ಕಲ್ಪಿಸಿತ್ತು. ಇದನ್ನೂ ಓದಿ: ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ ಆರೋಪ – ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವಿಪಕ್ಷಗಳು
ಸುಗ್ರೀವಾಜ್ಞೆ ಹೊರಡಿಸುತ್ತಿದ್ದಂತೆ ಕಳಂಕಿತ ಸಂಸದರ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂಬ ಟೀಕೆ ವ್ಯಕ್ತವಾಯಿತು. ಸರ್ಕಾರದ ಆತುರದ ಕ್ರಮವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಶ್ನಿಸಿದರು. ದೇಶದೆಲ್ಲೆಡೆ ಭಾರೀ ಚರ್ಚೆ ಆಗುತ್ತಿದ್ದಂತೆ ರಾಹುಲ್ ಗಾಂಧಿ ಮಧ್ಯ ಪ್ರವೇಶ ಮಾಡಿದರು.
9 yrs ago, had Rahul Gandhi not torn the ordinance passed by the UPA govt, which repealed the historic decision of the Supreme Court, saving the convicted MPs from disqualification, today he wouldn't have been disqualified. What an irony! pic.twitter.com/NcwxfyMVP9
— Priti Gandhi – प्रीति गांधी (@MrsGandhi) March 24, 2023
ಸುಗ್ರೀವಾಜ್ಞೆ ಸಂಬಂಧ ರಾಷ್ಟ್ರಪತಿ ಬಳಿಗೆ ಹೋಗಿದ್ದ ವೇಳೆ ದಿಢೀರನೆ ಪತ್ರಿಕಾಗೋಷ್ಠಿ ಕರೆದ ರಾಹುಲ್ ಗಾಂಧಿ, ಈ ಸುಗ್ರೀವಾಜ್ಞೆ ಅಸಂಬದ್ಧ ಎಂದು ಹೇಳಿ ಅದರ ಪ್ರತಿಗಳನ್ನು ಎಲ್ಲಾ ನಾಯಕರ ಎದುರೇ ಹರಿದು ಹಾಕಿದ್ದರು. ಇದು ಶುದ್ಧ ಅವಿವೇಕದ ಕೆಲಸ. ಸುಗ್ರೀವಾಜ್ಞೆ ಹರಿದು ಬಿಸಾಡಲು ಯೋಗ್ಯ ಎಂದು ಕಿಡಿಕಾರಿದ್ದರು.
ರಾಹುಲ್ ಹರಿದು ಎಸೆದ ಪರಿಣಾಮ ಸುಗ್ರೀವಾಜ್ಞೆ ಜಾರಿಗೆ ಬಂದಿರಲಿಲ್ಲ. ಆದರೆ ಪತ್ರಿಕಾಗೋಷ್ಠಿಯಲ್ಲಿ ಹರಿದು ಹಾಕಿ ತಮ್ಮದೇ ಸರ್ಕಾರಕ್ಕೆ ಮುಜುಗರ ತಂದ ವರ್ತನೆಗೆ ಕಾಂಗ್ರೆಸ್ ನಾಯಕರು ಮತ್ತು ಯುಪಿಎ ಬೆಂಬಲಿತ ಪಕ್ಷಗಳಿಂದಲೇ ಭಾರೀ ಟೀಕೆ ವ್ಯಕ್ತವಾಗಿತ್ತು.
ಜನಪ್ರತಿನಿಧಿಗಳ ಕಾಯ್ದೆ ಏನು ಹೇಳುತ್ತದೆ?
ಜನಪ್ರತಿನಿಧಿಗಳ ಕಾಯ್ದೆಯಂತೆ ಶಾಸಕರು/ ಸಂಸದರು ಎರಡು ನಿದರ್ಶನಗಳಲ್ಲಿ ತಮ್ಮ ಸ್ಥಾನದಿಂದ ಅನರ್ಹರಾಗಬಹುದು. ಮೊದಲು ಸೆಕ್ಷನ್ 153A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಅಪರಾಧ ಮತ್ತು ಪೂರ್ವಾಗ್ರಹ ಪೀಡಿತ ಕೃತ್ಯಗಳನ್ನು ಮಾಡುವುದು) ಅಥವಾ ಸೆಕ್ಷನ್ 171E (ಲಂಚ ತೆಗೆದುಕೊಳ್ಳುವುದು)ನಂತಹ ಪ್ರಕರಣ ಅಥವಾ ಸೆಕ್ಷನ್ 171F (ಚುನಾವಣೆಯಲ್ಲಿ ಅನಗತ್ಯ ಪ್ರಭಾವದ) ಅಪರಾಧ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾದರೆ ತಮ್ಮ ಸ್ಥಾನವನ್ನು ಸಂಸದರು ಕಳೆದುಕೊಳ್ಳಲಿದ್ದಾರೆ.
ಶಾಸಕರು ಅಥವಾ ಸಂಸದರು ಯಾವುದೇ ಇತರ ಅಪರಾಧ ಪ್ರಕರಣಗಳಲ್ಲಿ ಎರಡು ವರ್ಷ ಅಥವಾ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಗೆ ಒಳಗಾಗಿದ್ದಾರೆ ಅವರನ್ನು ಶಾಸಕ/ ಸಂಸದ ಸ್ಥಾನದಿಂದ ಅನರ್ಹಗೊಳಿಸಬಹುದು. ರಾಹುಲ್ ಗಾಂಧಿಗೆ ಎರಡು ವರ್ಷ ಜೈಲು ಶಿಕ್ಷೆಯಾದ ಕಾರಣ ಈಗ ಈ ಕಾಯ್ದೆಯ ಅಡಿ ಲೋಕಸಭಾ ಸಚಿವಾಲಯ ಅನರ್ಹ ಮಾಡಿದೆ.