-2002 ರ ಫೆ.24 ರಂದು ರಾಜ್‌ಕೋಟ್‌ನಿಂದ ಗೆದ್ದು ಮೋದಿ ಅಸೆಂಬ್ಲಿಗೆ ಎಂಟ್ರಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಾಜಕೀಯ ಅಖಾಡದಲ್ಲಿ ಮೊದಲ ಬಾರಿಗೆ ಗೆಲುವು ದಾಖಲಿಸಿ ವಿಧಾನಸಭೆಗೆ ಎಂಟ್ರಿ ಕೊಟ್ಟು ಇಲ್ಲಿಗೆ 22 ವರ್ಷಗಳು ತುಂಬಿವೆ. ಮೋದಿ ಅವರ ರಾಜಕೀಯ ಜೀವನದ ಮೈಲುಗಲ್ಲುಗಳ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Advertisement
2002 ರಲ್ಲಿ ಇದೇ ದಿನ (ಫೆ.24) ಪ್ರಧಾನಿ ಮೋದಿ ಅವರು ಮೊದಲ ಬಾರಿಗೆ ಗುಜರಾತ್ ವಿಧಾನಸಭೆಯ ಸದಸ್ಯರಾದರು. ರಾಜ್‌ಕೋಟ್‌ನಿಂದ ತಮ್ಮ ಮೊದಲ ಚುನಾವಣೆಯಲ್ಲಿ ಗೆದ್ದು ಬೀಗಿದ್ದರು. ಅವರು ಇದಕ್ಕೂ ಮುನ್ನ ಅಕ್ಟೋಬರ್‌ನಲ್ಲಿ (2001) ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಹುದ್ದೆಯಲ್ಲಿ ಮುಂದುವರಿಯಲು ಆರು ತಿಂಗಳೊಳಗೆ ಶಾಸಕಾಂಗ ಸಭೆಯ ಸದಸ್ಯರಾಗಬೇಕಾಗಿತ್ತು. ಈ ರಾಜ್‌ಕೋಟ್ ಉಪಚುನಾವಣೆ ಅವರಿಗೆ ಅವಕಾಶ ನೀಡಿತ್ತು. ಇದನ್ನೂ ಓದಿ: ಪ್ರಧಾನಿಯಿಂದ ಭಾನುವಾರ ದೇಶದ ಅತಿ ಉದ್ದದ ತೂಗುಸೇತುವೆ ʻಸುದರ್ಶನ ಸೇತುʼ ಲೋಕಾರ್ಪಣೆ
Advertisement
Rajkot will always have a very special place in my heart. It was the people of this city who put their faith in me, giving me my first ever electoral win. Since then, I have always worked to do justice to the aspirations of the Janta Janardan. It’s also a happy coincidence that I… https://t.co/mhVeNPyDTe
— Narendra Modi (@narendramodi) February 24, 2024
Advertisement
ಮೋದಿ ರಾಜಕೀಯ ಜೀವನದ ವೀಡಿಯೋವನ್ನು ‘ಮೋದಿ ಆರ್ಕೈವ್’ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಅದು ಆರ್ಕೈವಲ್ ಫೋಟೋಗಳು, ವೀಡಿಯೋಗಳು ಮತ್ತು ವೃತ್ತಪತ್ರಿಕೆ ತುಣುಕುಗಳ ಮೂಲಕ ಪ್ರಧಾನಿಯವರ ರಾಜಕೀಯ ಜೀವನ ಪ್ರಯಾಣವನ್ನು ವಿವರಿಸುತ್ತದೆ. ರಾಜ್‌ಕೋಟ್‌ನಲ್ಲಿ ಅವರು ನಾಮಪತ್ರ ಸಲ್ಲಿಸುವ, ಪ್ರಚಾರ ಮಾಡುವ ಮತ್ತು ಭಾಷಣ ಮಾಡುವ ಕ್ಲಿಪ್‌ಗಳು ಮತ್ತು ಚಿತ್ರಗಳ ಚಿತ್ರಣವು ವೀಡಿಯೋದಲ್ಲಿದೆ.
Advertisement
ಇದನ್ನು ಪಿಎಂ ಮೋದಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಆ ಕ್ಷಣಗಳ ನೆನಪಿಸಿಕೊಂಡು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ. ‘ರಾಜ್‌ಕೋಟ್ ಯಾವಾಗಲೂ ನನ್ನ ಹೃದಯದಲ್ಲಿ ಬಹಳ ವಿಶೇಷವಾದ ಸ್ಥಾನವನ್ನು ಹೊಂದಿರುತ್ತದೆ. ಈ ನಗರದ ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ನನ್ನ ಮೊದಲ ಚುನಾವಣಾ ಗೆಲುವನ್ನು ನನಗೆ ನೀಡಿದರು. ಅಂದಿನಿಂದ ನಾನು ಯಾವಾಗಲೂ ಕೆಲಸ ಮಾಡಿದ್ದೇನೆ. ಜನತಾ ಜನಾರ್ದನ್ ಅವರ ಆಶಯಗಳಿಗೆ ನ್ಯಾಯ ಒದಗಿಸಬೇಕು ಎಂದು ಮೋದಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೊಂದು ಮುಸ್ಲಿಮರಿಗೊಂದು ಕಾನೂನು ಮಾಡಲು ಸಾಧ್ಯವಿಲ್ಲ: ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಇದೇ ಹೊತ್ತಿನಲ್ಲಿ ಪ್ರಧಾನಿ ಮೋದಿ ಗುಜರಾತ್‌ನಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಇದು ಕಾಕತಾಳಿಯ ಎಂದು ಕೂಡ ಮೋದಿ ಹೇಳಿಕೊಂಡಿದ್ದಾರೆ.