ಆದಾಯ ತೆರಿಗೆ ಇಲಾಖೆ ಡಿ.ಕೆ. ಶಿವಕುಮಾರ್ ((DK Shivakumar)) ವಿರುದ್ಧ ದಾಖಲಿಸಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ತಿಹಾರ್ ಜೈಲಿಗೆ (Tihar Jail) ಹೋಗಬೇಕಾಗಿತ್ತು. ಈ ಸಂದರ್ಭವನ್ನು ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮದಲ್ಲಿ ಹಂಚಿಕೊಂಡಿರುವ ಡಿಕೆಶಿ ಪುತ್ರಿ ಐಶ್ವರ್ಯಾ (Aishwarya), ಅಪ್ಪನನ್ನು ನೋಡುವುದಕ್ಕಾಗಿ ನಾನು ವೇಷ ಬದಲಿಸಿಕೊಂಡು ಹೋಗಬೇಕಾಯಿತು ಎಂದು ನೆನಪಿಸಿಕೊಂಡಿದ್ದಾರೆ.
- Advertisement -
ಅಪ್ಪನ ವಿರುದ್ಧ ಪ್ರಕರಣ ದಾಖಲಾಗಿದೆ ಮುಂದೆ ಏನೆಲ್ಲ ಆಗಬಹುದು ಎಂದು ಅಪ್ಪ ನಮಗೆ ಹೇಳಿದ್ದರು. ನಮ್ಮನ್ನು ಮಾನಸಿಕವಾಗಿ ಸಿದ್ಧ ಮಾಡಿದ್ದರು. ಅವರು ಜೈಲು ಪಾಲು ಆಗಬೇಕಾಯಿತು. ಈ ಸಂದರ್ಭದಲ್ಲಿ ಅಪ್ಪನನ್ನು ನೋಡಲು ಹಾತ್ವೊರೆಯುತ್ತಿದ್ದೆ. ಅದಕ್ಕೆ ಚಿಕ್ಕಪ್ಪ ಅವಕಾಶ ಕೊಡಲಿಲ್ಲ. ನಿಮ್ಮನ್ನು ನೋಡಿದರೆ, ಅವರು ಮಾನಸಿಕವಾಗಿ ಕುಗ್ಗಿ ಹೋಗಬಹುದು ಹಾಗಾಗಿ ಬೇಡ ಅಂದರು. ಆದರೆ, ನಾನು ನೋಡಲೇಬೇಕು ಎಂದು ಹಠ ಹಿಡಿದೆ. ಅವರಿಗೆ ಗೊತ್ತಾಗದಂತೆ ಚಿಕ್ಕಮ್ಮನ ಜೊತೆ ವೇಷ ಬದಲಿಸಿಕೊಂಡು ಅಪ್ಪನನ್ನು ನೋಡುವುದಕ್ಕೆ ಹೋದೆ. ಹೇರ್ ಸ್ಟೈಲ್ ಚೇಂಜ್ ಮಾಡಿಕೊಂಡಿದ್ದೆ. ನನ್ನನ್ನು ನೋಡಿದ ಪೊಲೀಸರು ನೀನು ಡಿಕೆಶಿ ಅವರ ಮಗಳು ಅಲ್ಲ. ನಾವು ಅವರನ್ನು ನೋಡಿದ್ದೇವೆ ಎಂದು ನಿರಾಕರಿಸಿದರು. ಕೊನೆಗೆ ಅವರು ನಿಮ್ಮನ್ನು ಗುರುತಿಸಿದರೆ ಅವಕಾಶ ಕೊಡುತ್ತೇವೆ ಎಂದರು. ಹೀಗೆ ಅಪ್ಪನನ್ನು ನಾನು ನೋಡಬೇಕಾಯಿತು ಎಂದಿದ್ದಾರೆ ಐಶ್ವರ್ಯಾ.
- Advertisement -
- Advertisement -
ವೀಕೆಂಡ್ ಶೋ ನಲ್ಲಿ ಡಿ.ಕೆ. ಶಿವಕುಮಾರ್ ಕೂಡ ಹತ್ತು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರ ಜೊತೆಗೆ ತಮ್ಮ ಆಹಾರ ಕ್ರಮ ಮತ್ತು ತಮಗಿಷ್ಟವಾದ ಊಟದ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅಚ್ಚರಿಯ ಸಂಗತಿ ಅಂದರೆ, ಡಿಕೆಶಿ ಇದೀಗ ಅಪ್ಪಟ ಸಸ್ಯಹಾರಿಯಂತೆ. ಜೈಲಿನಿಂದ ಬಂದ ನಂತರ ನಾನ್ ವೆಜ್ ತ್ಯೆಜಿಸಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದೇ ಮಶ್ರೂಮ್ ಮತ್ತು ಕಡೆಲೆಕಾಯಿ ಅಂದರೆ ಡಿಕೆಶಿಗೆ ಪ್ರಾಣ ಎಂದು ಡಿಕೆಶಿ ಪತ್ನಿ ಉಷಾ ತಿಳಿಸಿದ್ದಾರೆ. ಇದನ್ನೂ ಓದಿ:‘ಭೀಮ’ನಾದ ಗೋಪಿಚಂದ್: ಎ.ಹರ್ಷ ನಿರ್ದೇಶನದ ತೆಲುಗು ಚಿತ್ರ
- Advertisement -
ಶಿಕ್ಷಣ ಮತ್ತು ರಾಜಕಾರಣದ ಬಗ್ಗೆಯೂ ಅವರು ಮಾತನಾಡಿದ್ದು, ನಾನು 7ನೇ ತರಗತಿಯಲ್ಲಿ ಇರುವಾಗಲೇ ರಾಜಕಾರಣಿ ಆಗಬೇಕು ಎಂದು ತೀರ್ಮಾನ ಮಾಡಿದ್ದೆ ಎಂದು ಡಿಕೆಶಿ ಅವರು ಹೇಳಿದ್ದಾರೆ. ಬಳಿಕ ಡಿಕೆಶಿ, ಒಬ್ಬ ಒಳ್ಳೆಯ ಆಡಳಿತಗಾರ ಎಂದು ಸಿಎಂ ಸಿದ್ಧರಾಮಯ್ಯ ಬಣ್ಣಿಸಿದ್ದಾರೆ. ಹೊರಗಡೆ ಅವರು ತುಂಬಾ ಟಫ್ ವ್ಯಕ್ತಿ, ಆದರೆ ಮನೆಯಲ್ಲಿ ಅವರು ತುಂಬಾ ಎಮೋಷನಲ್ ಎಂದು ಡಿಕೆಶಿ ಪತ್ನಿ ಮಾತನಾಡಿದ್ದಾರೆ. ಪುತ್ರಿ, ನನ್ನ ತಂದೆಯೇ ನನ್ನ ಹೀರೋ ಎಂದು ಹೆಮ್ಮೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ. ರಾಜೀವ್ ಗಾಂಧಿ ಅವರು ನನ್ನ ನೋಡಿದ್ದರು. ಯೂ ಆರ್ ಸೆಲೆಕ್ಟೆಟೆಡ್ ಫಾರ್ ವರ್ಲ್ಡ್ ಯೂತ್ ಸ್ಟುಡೆಂಟ್ ಫೆಸ್ಟಿವಲ್ ಅಂದ್ರು. ಬೈ ಬರ್ತ್ ನಾನೊಬ್ಬ ರೈತ, ಆದರೆ ನನ್ನ ಆಸಕ್ತಿ ಇರೋದು ರಾಜಕಾರಣದಲ್ಲಿ ಎಂದು ಡಿಕೆಶಿ ಅವರು ವೀಕೆಂಡ್ ವಿತ್ ರಮೇಶ್‌ನಲ್ಲಿ ಮಾತನಾಡಿದ್ದಾರೆ. ಈ ಕುರಿತ ಪ್ರೋಮೋ ನೆಟ್ಟಿಗರ ಗಮನ ಸೆಳೆಯುತ್ತಿದೆ.
ಈ ಶನಿವಾರ- ಭಾನುವಾರ ಎರಡು ದಿನ ಡಿಕೆಶಿ ಎಪಿಸೋಡ್ ಪ್ರಸಾರವಾಯಿತು. ಅಲ್ಲಿಗೆ ವೀಕೆಂಡ್ ವಿತ್ ರಮೇಶ್ (Weekend with Ramesh) ಮುಕ್ತಾಯವಾಯಿತು. ಈ ಬಾರಿ ಅತೀ ವೇಗದಲ್ಲಿ ಈ ಕಾರ್ಯಕ್ರಮವನ್ನು ಮುಗಿಸಿದೆ ಜೀ ಕನ್ನಡ ವಾಹಿನಿ. ಮೊದಲ ಸೀಸನ್ ನಿಂದ ಈ ಸೀಸನ್ ವರೆಗೂ ಒಟ್ಟು 100 ಸಾಧಕರು ವೀಕೆಂಡ್ ಕುರ್ಚಿ ಮೇಲೆ ಕೂತು ತಮ್ಮ ಸಾಧನೆಯನ್ನು ಮೆಲುಕು ಹಾಕಿಕೊಂಡಿದ್ದಾರೆ. ವೀಕೆಂಡ್ ಟೆಂಟ್ ನಲ್ಲಿ ಕೂತು ತಮ್ಮ ಬದುಕನ್ನು ರಿವೈಂಡ್ ಮಾಡಿ ನೋಡಿಕೊಂಡಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಪಿಸೋಡ್ ಮೂಲಕ ಈ ಸೀಸನ್ ಮುಗಿಸಿದೆ.