ನವದೆಹಲಿ: ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಆದರೆ ಅವರ ಸುಮಧುರ ಕಂಠದ ಗಾಯನಗಳು ಚಿರಸ್ಥಾಯಿಯಾಗಿ ಉಳಿದಿವೆ. ಅವರ ಹಾಡುಗಳು ಪ್ರತಿಯೊಂದು ಭಾವನೆಗಳನ್ನು ಬಿಂಬಿಸುತ್ತವೆ. ಪ್ರೀತಿ, ಹಂಬಲ, ಸಂತೋಷ, ದುಃಖ, ಆತ್ಮಾವಲೋಕನ, ಅಧ್ಯಾತ್ಮದಂತಹ ಭಾವನೆಗಳು ಅವರ ಗಾಯನಗಳಲ್ಲಿ ಅಭಿವ್ಯಕ್ತವಾಗಿದೆ.
Advertisement
ಒಮ್ಮೆ ಲತಾ ಮಂಗೇಶ್ಕರ್ ಅವರ ಹಾಡನ್ನು ಕೇಳಿ ಭಾವುಕರಾಗಿ ದೇಶದ ಮೊದಲ ಪ್ರಧಾನಿಯಾಗಿದ್ದ ಜವಾಹರ್‌ಲಾಲ್ ನೆಹರೂ ಅವರು ಕಣ್ಣೀರು ಹಾಕಿದ್ದರು. ಇದನ್ನೂ ಓದಿ: ಲತಾ ಮಂಗೇಶ್ಕರ್‌ರ ಮೊದಲ ಹಾಡನ್ನು ಸಿನಿಮಾದಿಂದ ತೆಗೆಯಲಾಗಿತ್ತು – ನೀವು ತಿಳಿಯಲೇಬೇಕಾದ 10 ಸಂಗತಿಗಳು ಇಲ್ಲಿವೆ!
Advertisement
ಹೌದು, 1963ರ ಜ.27ರಂದು ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆ ವೇಳೆ ರಾಷ್ಟ್ರಪತಿ ಜವಾಹರ್‌ಲಾಲ್ ನೆಹರೂ, ರಾಷ್ಟ್ರಪತಿ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆಗ ಲತಾ ಮಂಗೇಶ್ಕರ್ ಅವರ ʼಏ ಮೇರೆ ವತನ್ ಕೆ ಲೋಗೋʼ ಹಾಡನ್ನು ಕೇಳಿ ನೆಹರೂ ಅವರು ಕಣ್ಣೀರು ಹಾಕಿದ್ದರು.
Advertisement
Advertisement
ಏ ಮೇರೆ ವತನ್ ಕೆ ಲೋಗೋ ಹಾಡನ್ನು ಭಾರತ-ಚೀನಾ ಯುದ್ಧದ ನಂತರ ಬರೆಯಲಾಗಿತ್ತು. ಅದು ಭಾರತೀಯ ರಾಷ್ಟ್ರೀಯತೆಯ ಸಂಕೇತ ಎಂದು ಬಿಂಬಿಸಲಾಗಿತ್ತು. ಇದನ್ನೂ ಓದಿ: ಲತಾ ಮಂಗೇಶ್ಕರ್ ನಿಧನ- ಬಾಲಿವುಡ್ ಸಂತಾಪ