ಬೆಂಗಳೂರು: ಮಳೆ ಬಂದಾಗ ಆ ನೀರನ್ನು ಮತ್ತೆ ಆಕಾಶಕ್ಕೆ ಕಳಿಸುವುದಕ್ಕೆ ಆಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G Parameshwar) ಟಾಂಗ್ ಕೊಟ್ಟಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆ ಹಾನಿ ವಿಚಾರವಾಗಿ ಬಿಜೆಪಿ (BJP) ಟೀಕೆಗೆ ಪ್ರತಿಕ್ರಿಯಿಸಿ, ಇದು ಅನಿರೀಕ್ಷಿತ ಮಳೆ. ಯಾವತ್ತಾದರೂ ಅಕ್ಟೋಬರ್ ತಿಂಗಳಲ್ಲಿ ಈ ರೀತಿ ಮಳೆ ಬಿದ್ದದ್ದು ನಾವು ನೋಡಿದ್ದೀವಾ? ಮಳೆ ಬರುತ್ತಿದೆ ಎದುರಿಸಬೇಕು. ಮಳೆ ಬಂದಾಗ ಆ ನೀರನ್ನು ಮತ್ತೆ ಆಕಾಶಕ್ಕೆ ಕಳಿಸುವುದಕ್ಕೆ ಆಗುವುದಿಲ್ಲ. ಬಿದ್ದ ಮಳೆ ನೀರು ಭೂಮಿ ಮೇಲೆಯೇ ಹರಿದು ಹೋಗಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ.ಇದನ್ನೂ ಓದಿ: ಜ್ಯೂಸ್ ಕುಡಿಸಿ ಪ್ರಯಾಣಿಕರಿಂದ ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳಿ ಅಂದರ್
Advertisement
Advertisement
ಸಂಡೂರು ಉಪಚುನಾವಣೆ:
ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿಯವರು ವಾಲ್ಮೀಕಿ ಪ್ರಕರಣ (Valmiki Scam) ಬಗ್ಗೆ ಪ್ರಚಾರ ಮಾಡಬಹುದು. ನಾವು ಕೂಡ ಅದರ ಬಗ್ಗೆ ಏನು ನಡೆದಿದೆ ಅದನ್ನು ಹೇಳುತ್ತೇವೆ. ಅದು ಅಧಿಕಾರಿಗಳ ಮಟ್ಟದಲ್ಲಿ ಆಯಿತಾ? ರಾಜಕಾರಣಿಗಳ ಮಟ್ಟದಲ್ಲಿ ಆಯಿತಾ? ಎಂದು ಹೇಳುತ್ತೇವೆ. ಇದು ಅಧಿಕಾರಿಗಳ ಮಟ್ಟದಲ್ಲಿ ನಡೆದ ಪ್ರಕರಣ. ಇದನ್ನು ನಾವು ಚುನಾವಣಾ ಪ್ರಚಾರ ವೇಳೆ ತಿಳಿಸುತ್ತೇವೆ. ದದ್ದಲ್ ಅವರನ್ನು ವಿಚಾರಣೆಗೆ ಕರೆದಿದ್ದರು. ಆದರೆ ಅವರ ಹೆಸರು ಪ್ರಕರಣದಲ್ಲಿ ಬರಲಿಲ್ಲ. ನಾಗೇಂದ್ರ ಅವರ ವಿಚಾರಣೆಯೂ ಆಗಿದೆ ಎಂದು ಹೇಳಿದರು.
Advertisement
ಇನ್ನೂ ಹರಿಯಾಣದಲ್ಲಿ (Hariyana) ಮೋದಿಯವರು ಮುಡಾ ಬಗ್ಗೆ ಪ್ರಚಾರ ಮಾಡಿರಬಹುದು. ಅಲ್ಲಿ ಎಷ್ಟು ಜನಕ್ಕೆ ಇದು ಗೊತ್ತಿದೆ? ಅವರು ರಾಜಕೀಯ ಕಾರಣಕ್ಕೆ ಪ್ರಚಾರ ಮಾಡಿರುತ್ತಾರೆ. ಮಹಾರಾಷ್ಟ್ರದಲ್ಲೂ ಪ್ರಚಾರ ಮಾಡಿದರೆ ನಾವು ಸತ್ಯ ಏನಿದೆ ಎಂದು ಹೇಳಿ, ಗೆದ್ದು ಬರುತ್ತೇವೆ. ವೇಣುಗೋಪಾಲ್ ರಾಜ್ಯಕ್ಕೆ ಭೇಟಿ ನೀಡುತ್ತಾರೆ. ಆಗ ಭೇಟಿಗೆ ಸಮಯ ಕೇಳುತ್ತೇನೆ ಎಂದರು.
Advertisement
ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ ವಾಪಸ್ ವಿಚಾರ:
ನಮಗೆ ಮುಂಬೈ ಮತ್ತು ಕೊಂಕಣ್ ಚುನಾವಣಾ ಉಸ್ತುವಾರಿಯಾಗಿ ನೇಮಿಸಲಾಗಿದೆ. ಎಂಬಿ ಪಾಟೀಲರಿಗೆ ಕೊಲ್ಹಾಪುರ, ಸೊಲ್ಹಾಪುರ ಭಾಗದಲ್ಲಿ ಉಸ್ತುವಾರಿ ನೀಡಲಾಗಿದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ, ಕೇಸ್‌ಗಳ ವಿಚಾರವಾಗಿ ಯಾವುದೇ ಪ್ರಸ್ತಾಪ ಬಂದಿಲ್ಲ. ಪ್ರಸ್ತಾಪ ಬಂದರೆ ಸುಳ್ಳು ಕೇಸ್ ಹಾಕಿದ್ದಾರಾ ಇಲ್ವಾ ಎಂದು ಪರಿಶೀಲನೆ ಮಾಡುತ್ತೇವೆ. ಹಿಂದೆ ಪ್ರಸ್ತಾಪ ಬಂದಿರುವ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈ ಕೇಸ್‌ಗಳನ್ನು ವಾಪಸ್ ಪಡೀತೀವಿ ಎಂದು ಎಲ್ಲಿಯೂ ಹೇಳಿಲ್ಲ. ಪ್ರಸ್ತಾಪ ಬಂದರೆ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.
ಹರಿಪ್ರಸಾದ್ ಯಾವುದೋ ಕಾರಣಕ್ಕೆ ಹೇಳಿರಬಹುದು. ಅವರು ಹೇಳಿದ್ದಾರೆ ಎಂದು ನಾವು ಕೇಸ್ ವಾಪಸ್ ಪಡೆಯಲು ಆಗಲ್ಲ. ಪ್ರಸ್ತಾಪ ಬಂದಾಗ ಪರಿಶೀಲನೆ ಮಾಡುತ್ತೇವೆ. ಯಾರೂ ಪತ್ರ ಬರೆದಿಲ್ಲ, ಪ್ರಸ್ತಾವನೆ ಬಂದಿಲ್ಲ. ಹಿಂದೆ ಬರೆದಿದ್ದ ಪತ್ರ ಅದು ಅಲ್ಲಿಗೇ ನಿಂತಿದೆ. ಈಗ ಮತ್ತೇ ಪ್ರಸ್ತಾಪ ಬಂದರೆ ಪರಿಶೀಲನೆ ಮಾಡುತ್ತೇವೆ. ಪ್ರಸ್ತಾಪ ಬಂದರೆ ಕ್ಯಾಬಿನೆಟ್ ಸಬ್ ಕಮಿಟಿಯ ಮುಂದಿಟ್ಟು, ನಂತರ ಸಂಪುಟದಲ್ಲಿ ಚರ್ಚೆ ಆಗುತ್ತದೆ. ಹುಬ್ಬಳ್ಳಿ ಕೇಸ್ ವಿಚಾರದಲ್ಲಿ ಕೋರ್ಟ್ ಏನು ಮಾಡುತ್ತದೆ ನೋಡಬೇಕು ಎಂದು ಹೇಳಿದರು.
ಸ್ನೇಹಮಯಿ ಕೃಷ್ಣ ದೂರು ವಿಚಾರ:
ಮುಡಾ ಪ್ರಕರಣದಲ್ಲಿ (MUDA Scam) ಎ1, 12 ಆರೋಪಿಗಳನ್ನು ವಿಚಾರಣೆ ಮಾಡುತ್ತಿಲ್ಲ ಎಂದು ಸ್ನೇಹಮಯಿ ಕೃಷ್ಣ ದೂರು ಕೊಟ್ಟ ವಿಚಾರವಾಗಿ ಮಾತನಾಡಿ, ಲೋಕಾಯುಕ್ತದವರ ಕಾರ್ಯವೈಖರಿ ಬಗ್ಗೆ ನಾನು ಏನೂ ಹೇಳುವುದಿಲ್ಲ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಲೋಕಾಯುಕ್ತ ಪೊಲೀಸರಿಗೆ ಯಾವಾಗ, ಯಾರನ್ನು ವಿಚಾರಣೆಗೆ ಕರೆಯಬೇಕು ಎಂಬುದು ಗೊತ್ತಿದೆ. ಅದರಂತೆ ಅವರು ವಿಚಾರಣೆಗೆ ಕರೆಯುತ್ತಾರೆ. ಅವರನ್ನು ಕರೆದಿಲ್ಲ, ಇವರನ್ನು ಕರೆದಿಲ್ಲ ಎಂದು ನಾವು ಹೇಳಲು ಸಾಧ್ಯವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಬಿಜೆಪಿ ಶಾಸಕ ಮುನಿರತ್ನ ಜೈಲಿನಿಂದ ಬಿಡುಗಡೆ