Connect with us

Districts

ಬೇಟೆಯಾಡುವಾಗ ಅರಣ್ಯಇಲಾಖೆ ಜೀಪು ಬಂತೆಂದು ಗನ್ ಮುಚ್ಚಿಡೋವಾಗ ಮಿಸ್ ಪೈರಿಂಗ್- ಓರ್ವ ಸಾವು

Published

on

ಶಿವಮೊಗ್ಗ: ಬೇಟೆಯಾಡುತ್ತಿದ್ದ ಸಂದರ್ಭದಲ್ಲಿ ಅರಣ್ಯ ಇಲಾಖೆಯ ವಾಹನ ಬಂತೆಂದು ಲೋಡೆಡ್ ಬಂದೂಕು ಬಚ್ಚಿಡಲು ಹೋದಾಗ ಮಿಸ್ ಫೈರಿಂಗ್ ಆಗಿ ಓರ್ವ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಾನುಮನೆ ಎಂಬಲ್ಲಿ ನಡೆದಿದೆ.

35 ವರ್ಷದ ಕಾನುಮನೆ ಸತೀಶ್ ಮೃತಪಟ್ಟ ವ್ಯಕ್ತಿ. ಕಾನುಮನೆ ಗ್ರಾಮದ ಐವರು ಪುನುಗು ಬೆಕ್ಕು ಬೇಟೆಗೆ ಕಾಡಿಗೆ ಹೋಗಿದ್ದರು. ಈ ವೇಳೆ ವಾಹನವೊಂದು ಬರುವ ಸದ್ದಿಗೆ ಹೆದರಿದ ಐವರು ಅರಣ್ಯ ಇಲಾಖೆ ಸಿಬ್ಬಂದಿ ಎಂದು ತಿಳಿದು ಬಂದೂಕನ್ನು ಬಚ್ಚಿಡಲು ಹೋಗಿದ್ದಾರೆ. ಈ ವೇಳೆ ಪೈರಿಂಗ್ ಆಗಿದ್ದು, ಸತೀಶ್ ಅವರ ತಲೆಗೆ ಗುಂಡು ತಗುಲಿದೆ.

ಕೂಡಲೇ ಸತೀಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಸಂಬಂಧ ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Click to comment

Leave a Reply

Your email address will not be published. Required fields are marked *