ನವದೆಹಲಿ: ಪಕ್ಷ ವಿರೋಧಿ ಚಟುವಟಿಕೆ ಮಾಡಿದ ವಿಜಯೇಂದ್ರಗೆ ಯಾವಾಗ ನೋಟಿಸ್ ಕೊಡುತ್ತೀರಾ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarkiholi) ಪ್ರಶ್ನಿಸಿದ್ದಾರೆ.
ದೆಹಲಿಯಲ್ಲಿ (Delhi) ನಾಳೆ (ಡಿ.04) ವಕ್ಫ್ ವಿಚಾರವಾಗಿ ಜಗದಾಂಬಿಕ ಪಾಲ್ ಭೇಟಿ ಹಾಗೂ ಕೇಂದ್ರ ಶಿಸ್ತು ಸಮಿತಿ ಪಾಠಕ್ ಅವರ ಭೇಟಿಗಾಗಿ ಪೂರ್ವ ತಯಾರಿ ಸಭೆ ನಡೆಸಿದರು. ಸಭೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೊಳಿ, ಲಿಂಬಾವಳಿ, ಬಿ.ಪಿ ಹರೀಶ್, ಬಿ.ವಿ ನಾಯಕ್, ಎನ್.ಆರ್ ಸಂತೋಷ್ ಭಾಗಿಯಾಗಿ ಯತ್ನಾಳ್‌ಗೆ ನೀಡಿರುವ ಶೋಕಾಸ್ ನೊಟೀಸ್ (Show Cause Notice) ಬಗ್ಗೆ ಸಮಾಲೋಚನೆ ನಡೆಸಿದರು.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ (ಡಿ.04) 11:30ಕ್ಕೆ ಹೈಕಮಾಂಡ್‌ನ್ನು ಭೇಟಿ ಮಾಡುತ್ತಾರೆ. ಕೇಂದ್ರ ಶಿಸ್ತು ಸಮಿತಿ ಪಾಠಕ್ ಅವರನ್ನು ಭೇಟಿ ಮಾಡುತ್ತಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ ವಿಜಯೇಂದ್ರಗೆ ಯಾವಾಗ ನೋಟಿಸ್ ಕೊಡುತ್ತೀರಾ ಎಂದು ಪ್ರಶ್ನೆ ಮಾಡುತ್ತೇವೆ.ಇದನ್ನೂ ಓದಿ: ಚುನಾವಣಾ ಬಾಂಡ್ ಬಳಸಿ ಸುಲಿಗೆ – ಸೀತಾರಾಮನ್, ಬಿಜೆಪಿ ನಾಯಕರ ಮೇಲಿದ್ದ ಕೇಸ್ ರದ್ದು
2 ದಿನದ ಹಿಂದೆಯೇ ನಮಗೆ ನೋಟಿಸ್ ವಿಚಾರ ಗೊತ್ತಾಗಿದೆ. ನೋಟಿಸ್ ಬಂದಿದೆ. ಅದಕ್ಕೆ ಯತ್ನಾಳ್ ಉತ್ತರ ಕೊಡುತ್ತಾರೆ. ನಾವು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನಾವು ಎಲ್ಲದಕ್ಕೂ ಉತ್ತರ ಕೊಡುತ್ತೇವೆ. ವಿಜಯೇಂದ್ರ ಪರವಾಗಿ ಮಾತಾನಾಡುವವರೆಲ್ಲ ಕೆಜೆಪಿ ಪಕ್ಷದಿಂದ ಬಂದವರು, ಅಲ್ಲಿ 80% ಅವರೇ ಇದ್ದಾರೆ. ವಿಜಯೇಂದ್ರ ಪರವಾಗಿ ಮಾತನಾಡದೇ ಬೇರೆ ಯಾರ ಪರ ಮಾತನಾಡುತ್ತಾರೆ. ವಿಜಯೇಂದ್ರ ಅವರು ಅಧ್ಯಕ್ಷರಾಗಿ ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಅವರು ಮಾಡಿದ್ದಕ್ಕೆ ನಾವು ಮಾಡುವ ಪರಿಸ್ಥಿತಿ ಬಂತು. ಪಕ್ಷದ ಹಿತ ದೃಷ್ಟಿಯಿಂದ ವಕ್ಫ್ ಹೋರಾಟ ಮಾಡಿದ್ದೆವು. ಯತ್ನಾಳ್ ಅವರಿಗೆ ನೋಟಿಸ್ ಕೊಡುತ್ತಾರೆ ಎಂದು ಗೊತ್ತಿತ್ತು. ಯತ್ನಾಳ್ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಅವರು ಉತ್ತರ ಕೊಡುತ್ತಾರೆ ಎಂದರು.
ವಕ್ಫ್ ಹೋರಾಟದ ನಂತರ ವರದಿ ಸಲ್ಲಿಸುವುದಾಗಿ ಹೇಳಿದ್ದೆವು. ಅದರಂತೆ ಈಗ ದೆಹಲಿಗೆ ಬಂದಿದ್ದೇವೆ, ಇದೀಗ ವರದಿ ನೀಡುತ್ತೇವೆ. ಸಹಜವಾಗಿ ಬೇರೆ ವಿಚಾರಗಳು ಮಾತನಾಡುತ್ತೇವೆ. ಸದ್ಯ ಯತ್ನಾಳ್ ಅವರಿಗೆ ಶಿಸ್ತು ಸಮಿತಿ ಅಧ್ಯಕ್ಷರು ನಾಳೆ ಬೆಳಗ್ಗೆ 11:30ಕ್ಕೆ ಭೇಟಿಗೆ ಸಮಯ ನೀಡಿದ್ದಾರೆ. ಮತ್ತೊಮ್ಮೆ ಬಂದು ಹೈಕಮಾಂಡ್‌ಗೆ ದೂರು ನೀಡುತ್ತೇವೆ. ಎಸ್ಸಿ ಎಸ್ಟಿ ಶಾಸಕರಿಗೆ ಬರಬೇಕು ಎಂದು ಒತ್ತಾಯ ಮಾಡಿದ್ದಾರೆ. ಲಿಂಗಾಯತ ಒಕ್ಕಲಿಗ ಶಾಸಕರಿಗೆ ಒತ್ತಡ ಹೇರಲು ಸಾಧ್ಯವಾಗಲ್ಲ. ಹೀಗಾಗಿ ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಸಭೆಯಲ್ಲಿ ಭಾಗಿಯಾದ ನಾಯಕರು ನನಗೂ ಆತ್ಮೀಯರು. ಕೆಜೆಪಿ ನಾಯಕರು ಮಾತ್ರ ವಿಜಯೇಂದ್ರ ಪರವಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ನಾಯಕರು ಯಾರು ಮಾತನಾಡುತ್ತಿಲ್ಲ. ಹೈಕಮಾಂಡ್ ಒಂದು ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕು. ನಾವು ಜೆಪಿಸಿ ಅಧ್ಯಕ್ಷರ ಭೇಟಿಗೆ ಬಂದಿದ್ದೇವೆ. ರಾಷ್ಟ್ರೀಯ ನಾಯಕರಿಗೆ ಸಮಯ ಕೇಳಿದ್ದೇವೆ. ಮೋದಿ ಬಿಟ್ಟು ಎಲ್ಲರ ಬಳಿ ಸಮಯ ಕೇಳಿದೆ. ಸಮಯ ಕೊಟ್ಟರೇ ಭೇಟಿ ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಫೆಂಗಲ್ ಚಂಡಮಾರುತಕ್ಕೆ ಉಡುಪಿಯಲ್ಲಿ ಭಾರಿ ಮಳೆ – ಹಲವೆಡೆ ವಿದ್ಯುತ್ ವ್ಯತ್ಯಯ