ನೆನಪಿದೆಯಾ.. ಅಂದು ಕೊಹ್ಲಿಗಾಗಿ ತನ್ನ ಪ್ರಶಸ್ತಿಯನ್ನೇ ಬಿಟ್ಟುಕೊಟ್ಟಿದ್ದರು ಗಂಭೀರ್‌

Public TV
2 Min Read
Virat Kohli 4

ಲಕ್ನೋ: ಆರ್‌ಸಿಬಿ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ (Virat Kohli) ಹಾಗೂ ಲಕ್ನೋ ಸೂಪರ್‌ ಜೈಂಟ್ಸ್‌ ತಂಡದ ಮೆಂಟರ್‌ ಗೌತಮ್‌ ಗಂಭೀರ್‌ (Gautam Gambhir) ಸದ್ಯ ಸುದ್ದಿಯಲ್ಲಿದ್ದಾರೆ. ಸೋಮವಾರ ಅಟಲ್‌ ಬಿಹಾರಿ ವಾಜಪೇಯಿ ಏಕನಾ ಕ್ರೀಡಾಂಗಣದಲ್ಲಿ ಇತ್ತಂಡಗಳ ನಡುವಿನ ಪಂದ್ಯದ ಬಳಿಕ ನಡೆದ ಜಗಳ ದೇಶಾದ್ಯಂತ ಭಾರೀ ಚರ್ಚೆಯಲ್ಲಿದೆ.

Virat Kohli 1

ಈ ನಡುವೆ ವಿರಾಟ್‌ ಕೊಹ್ಲಿ ಹಾಗೂ ಗೌತಮ್‌ ಗಂಭೀರ್‌ ನಡುವಿನ ಪಾಟ್ನರ್‌ಶಿಪ್‌ ಈ ಹಿಂದೆ ಹೇಗಿತ್ತು ಎನ್ನುವ ವೀಡಿಯೋ ತುಣುಕೊಂದು ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಕೆಲವರು ಗೌತಮ್‌ ಗಂಭೀರ್‌ ಪರ ಬ್ಯಾಟ್‌ ಬೀಸಿದರೆ, ಇನ್ನೂ ಕೆಲವರು ವಿರಾಟ್‌ ಕೊಹ್ಲಿಯನ್ನ ಬೆಂಬಲಿಸಿದ್ದಾರೆ. ಇದನ್ನೂ ಓದಿ: ನವೀನ್ ವಿರುದ್ಧ ಕಿತ್ತಾಡಿದ್ದಕ್ಕೆ ಕೊಹ್ಲಿಗೆ 1.07 ಕೋಟಿ ಲಾಸ್ – ಕೊಹ್ಲಿ, ಗಂಭೀರ್ ಕಿರಿಕ್‌ಗೆ ಕಾರಣ ಏನು?

Virat Kohli 3

ಗಂಭೀರ್‌ ಪ್ರಶಸ್ತಿ ಬಿಟ್ಟುಕೊಟ್ಟಿದ್ದರು: ಈ ಹಿಂದೆ 2009ರಲ್ಲಿ ಶ್ರೀಲಂಕಾ (SriLanka) ವಿರುದ್ಧ ನಡೆದ ಪಂದ್ಯದಲ್ಲಿ ಗೌತಮ್‌ ಗಂಭೀರ್‌ ತಮ್ಮ ಮ್ಯಾನ್‌ ಆಫ್‌ದಿ ಮ್ಯಾಚ್‌ (ಪಂದ್ಯಶ್ರೇಷ್ಠ) ಪ್ರಶಸ್ತಿಯನ್ನ ಕೊಹ್ಲಿಗೆ ಬಿಟ್ಟುಕೊಟ್ಟಿದ್ದರು.

ಹೌದು. 2009ರ ಡಿಸೆಂಬರ್‌ 24 ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ (Team India) 7 ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತ್ತು. ಈ ಪಂದ್ಯದಲ್ಲಿ ಭಾರತ 316 ರನ್‌ಗಳ ಗುರಿ ಬೆನ್ನಟ್ಟಿತ್ತು. ಸಚಿನ್‌ ತೆಂಡೂಲ್ಕರ್‌, ವೀರೇಂದ್ರ ಸೆಹ್ವಾಗ್‌ ಬೇಗನೆ ನಿರ್ಗಮಿಸಿದರು. ನಂತರ ಸುರಂಗ ಲಕ್ಮಲ್ ಉತ್ತಮ ಆರಂಭ ನೀಡಿದ್ದರು. ಇದಾದ ಬಳಿಕ ಜೊತೆಗೂಡಿದ ವಿರಾಟ್‌ ಕೊಹ್ಲಿ ಭರ್ಜರಿ ಬ್ಯಾಟಿಂಗ್‌ ಮಾಡಿದ್ದರು.

Virat Kohli 2

3ನೇ ವಿಕೆಟ್‌ ಜೊತೆಯಾಟಕ್ಕೆ ಈ ಜೋಡಿ 35.4 ಓವರ್‌ಗಳಲ್ಲಿ 224 ರನ್‌ ಜೊತೆಯಾಟ ನೀಡಿತ್ತು. ಗಂಭೀರ್‌ 137 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 150 ರನ್‌ ಗಳಿಸಿ, ಅಜೇಯರಾಗುಳಿದಿದ್ದರು. ಆದ್ರೆ ವಿರಾಟ್‌ ಕೊಹ್ಲಿ 114 ಎಸೆತಗಳಲ್ಲಿ 11 ಬೌಂಡರಿ, 1 ಸಿಕ್ಸರ್‌ನೊಂದಿಗೆ 107 ರನ್‌ ಗಳಿಸಿ ಔಟಾಗಿದ್ದರು. ಅದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಅವರ ಚೊಚ್ಚಲ ಶತಕವಾಗಿತ್ತು. ಇದನ್ನೂ ಓದಿ: ಬೊಂಬಾಟ್‌ ಬೌಲಿಂಗ್‌, ಮ್ಯಾಜಿಕ್‌ ಫೀಲ್ಡಿಂಗ್‌ – RCBಗೆ 18 ರನ್‌ಗಳ ಭರ್ಜರಿ ಜಯ

ಆ ಸಮಯದಲ್ಲಿ ವಿರಾಟ್‌ ಕೊಹ್ಲಿ ಹೊಸಬರಾಗಿದ್ದರು, ಆದ್ರೆ ಗಂಭೀರ್‌, ವಿರಾಟ್‌‌ ಟೀಂ ಇಂಡಿಯಾಗೆ ಬರುವುದಕ್ಕೂ ಮುನ್ನವೇ 6 ವರ್ಷಗಳ ಕಾಲ ಆಡಿದ್ದರು. ಅಂದು ಗಂಭೀರ್ ಅವರು ಕೋಲ್ಕತ್ತಾದ ಐಕಾನಿಕ್ ಸ್ಥಳದಲ್ಲಿ ಆಡಿದ ನಂತರ ಪಂದ್ಯಶ್ರೇಷ್ಠರಾಗಿ ಆಯ್ಕೆಯಾದರು. ಆದರೆ, ಗಂಭೀರ್ ತಮ್ಮ ಪ್ರಶಸ್ತಿಯನ್ನ ಕೊಹ್ಲಿಗೆ ನೀಡಲು ನಿರ್ಧರಿಸಿದರು. ಟೀಂ ಇಂಡಿಯಾದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಈ ವಿಷಯ ಪ್ರಕಟಿಸಿದ್ದರು. ಈ ವಿಚಾರ ಇದೀಗ ಮುನ್ನೆಲೆಗೆ ಬಂದಿದ್ದು, ಕೆಲವರು ವಿರಾಟ್‌ ಕೊಹ್ಲಿಗೆ ಗಂಭೀರ್‌ ಪ್ರೋತ್ಸಾಹಿಸಿದ್ದನ್ನು ನೆನಪಿಟ್ಟುಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

Share This Article