ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಮೇಲೆ ಗುರುತರ ಆರೋಪವೊಂದು ಕೇಳಿ ಬಂದಿದೆ. ನಟ ವೀರ್ ದಾಸ್ (Veer Saad) ಅವರ ತುಟಿ ಕಚ್ಚಿದ ಆರೋಪವನ್ನು ನಟಿ ಎದುರಿಸುತ್ತಿದ್ದಾರೆ. ಈ ಕುರಿತು ಸ್ವತಃ ಕಂಗನಾ ಅವರೇ ಸ್ಪಷ್ಟನೆ ನೀಡಿದ್ದಾರೆ. ಆ ಪ್ರತಿಕ್ರಿಯೆ ಇದೀಗ ವೈರಲ್ ಆಗುತ್ತಿದ್ದು, ಕಂಗನಾ ಬೋಲ್ಡ್ ಮಾತಿಗೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಅದು 2014ರ ವೇಳೆ ಕಂಗನಾ ರಣಾವತ್ ಮತ್ತು ವೀರ್ ದಾಸ್ ‘ರಿವಾಲ್ವರ್ ರಾಣಿ’ (Revolver Rani) ಸಿನಿಮಾದಲ್ಲಿ ಜೊತೆಯಾಗಿ ನಟಿಸಿದ್ದರು. ಸಾಯಿ ಕಬೀರ್ (Sai Kabir) ನಿರ್ದೇಶನದಲ್ಲಿ ಮೂಡಿ ಬಂದಿದ್ದ ಈ ಸಿನಿಮಾದಲ್ಲಿ ಕಂಗನಾ ಮತ್ತು ವೀರ್ ದಾಸ್ ಚುಂಬಿಸುವಂತಹ (Kiss) ದೃಶ್ಯಗಳು ಇದ್ದವು. ಈ ದೃಶ್ಯದಲ್ಲಿ ಕಂಗನಾ ಮೈಮರೆತಿದ್ದರು ಎಂದು ಹೇಳಲಾಗುತ್ತಿದೆ. ದೃಶ್ಯದ ಆಳಕ್ಕೆ ಇಳಿದಿದ್ದ ಕಂಗನಾ, ಮೈಮರೆತು ವೀರ್ ದಾಸ್ ಅವರ ತುಟಿ ಕಚ್ಚಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಸೌತ್‌ನ ಇಬ್ಬರು ಸ್ಟಾರ್ ನಟರ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ಹೀರೋಯಿನ್
ರಿವಾಲ್ವರ್ ರಾಣಿ ಸಿನಿಮಾ ರಿಲೀಸ್ ಆಗಿ ಒಂಬತ್ತು ವರ್ಷಗಳು ಕಳೆದರೂ, ಇದೀಗ ಆ ಸುದ್ದಿ ಮುನ್ನೆಲೆಗೆ ಬಂದಿದೆ. ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಇದನ್ನು ಕಂಗನಾ ಗಮನಕ್ಕೂ ತಂದಿದ್ದಾರೆ ಅಭಿಮಾನಿಗಳು. ಈ ಸುದ್ದಿಯನ್ನು ನೋಡಿದ ಕಂಗನಾ ಅಷ್ಟೇ ರಸವತ್ತಾಗಿ ಕಾಮೆಂಟ್ ಮಾಡಿದ್ದಾರೆ.
‘ಹೃತಿಕ್ ರೋಷನ್ ಬಳಿಕ ವೀರ್ ದಾಸ್ ಅವರ ಶೀಲ ಹಾಳು ಮಾಡಿದ್ದೇನೆ ಎನ್ನುತ್ತಿದ್ದಾರೆ. ಯಾವಾಗ ಅದು ಆಯಿತು ಹೇಳ್ರಪ್ಪ’ ಎಂದಿದ್ದಾರೆ ಕಂಗನಾ. ಈ ಮೂಲಕ ಹೃತಿಕ್ ಅವರ ಹೆಸರನ್ನು ಮತ್ತೆ ಬಳಸಿಕೊಂಡಿದ್ದಾರೆ.
Web Stories