ಧೋನಿ ಸಿಕ್ಸ್ ಸಿಡಿತಕ್ಕೆ ಶಾಕ್ ಆದ ಕೊಹ್ಲಿ – ಹೆಲಿಕಾಪ್ಟರ್ ಶಾಟ್‍ಗಳ ವೀಡಿಯೋ ನೋಡಿ

Public TV
2 Min Read
dhoni six virat kohli

ನವದೆಹಲಿ: ಟೀಂ ಇಂಡಿಯಾ (Team India) ಮಾಜಿ ನಾಯಕ ಎಂಎಸ್ ಧೋನಿ (M.S Dhoni)ಹುಟ್ಟು ಹಬ್ಬಕ್ಕೆ ಬಿಸಿಸಿಐ (BCCI) ವಿನೂತನವಾಗಿ ಶುಭಾಶಯ ಕೋರಿದೆ.

ಧೋನಿಯ ಅದ್ಬುತ ಬ್ಯಾಟಿಂಗ್ ಪ್ರದರ್ಶನಗಳ ದೃಶ್ಯವನ್ನು ಬಿಸಿಸಿಐ ಟ್ವಿಟ್ಟರ್‌ನಲ್ಲಿ 70 ಸೆಕೆಂಡುಗಳ ವೀಡಿಯೋ ಹಂಚಿಕೊಂಡಿದೆ. ವೀಡಿಯೋದಲ್ಲಿ ಅವರ ಪ್ರಬಲ ಬ್ಯಾಟಿಂಗ್ ದಾಳಿ, ಭರ್ಜರಿ ಸಿಕ್ಸರ್‌ಗಳು ಮತ್ತು ಅವರ ವಿಶಿಷ್ಟ ಶೈಲಿಯ ಹೆಲಿಕಾಪ್ಟರ್ ಶಾಟ್‍ಗಳನ್ನು ಒಳಗೊಂಡಿದೆ. ಇದನ್ನೂ ಓದಿ: MSDಗೆ 42ನೇ ಹುಟ್ಟುಹಬ್ಬದ ಸಂಭ್ರಮ – ಅಭಿಮಾನಿಗಳಿಂದ KGF ರೇಂಜ್‌ನ ಟ್ರೈಲರ್‌ ರಿಲೀಸ್‌!

ಶುಕ್ರವಾರ 42ನೇ ವರ್ಷಕ್ಕೆ ಅವರು ಕಾಲಿಡುತ್ತಿದ್ದಂತೆ ಪ್ರಪಂಚದಾದ್ಯಂತ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅವರ ಕ್ರಿಕೆಟ್ ಕ್ಷೇತ್ರದಲ್ಲಿನ ಸಾಧನೆಯಿಂದ ಹಲವಾರು ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.

2019ರ ವಿಶ್ವಕಪ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸಿಡಿಸಿದ ಸಿಕ್ಸರ್‌ನ್ನು ವೀಡಿಯೋ ಒಳಗೊಂಡಿದೆ. ಅದರಲ್ಲಿ ಧೋನಿ ಮಿಚೆಲ್ ಸ್ಟಾರ್ಕ್ ಅವರ ಎಸೆತಕ್ಕೆ 87 ಮೀಟರ್ ಉದ್ದಕ್ಕೆ ಚೆಂಡನ್ನು ತಳ್ಳಿದ್ದರು. ಧೋನಿಯ ಈ ಅಮೋಘ ಆಟ ಕಂಡು ನಾನ್ ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ಬ್ಯಾಟರ್ ವಿರಾಟ್ ಕೊಹ್ಲಿ ಕೂಡ ಮೂಕವಿಸ್ಮಿತರಾಗಿದ್ದರು.

ಧೋನಿ ಆಗಸ್ಟ್ 2020 ರಲ್ಲಿ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ್ದರು. ಟೆಸ್ಟ್ ಕ್ರಿಕೆಟ್‍ನಲ್ಲಿ ಧೋನಿ 90 ಪಂದ್ಯಗಳನ್ನು ಆಡಿದ್ದಾರೆ. 38.09 ರ ಸರಾಸರಿಯಲ್ಲಿ 4,876 ರನ್ ಗಳಿಸಿದ್ದಾರೆ. ಆರು ಶತಕಗಳು ಮತ್ತು 33 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್‍ನಲ್ಲಿ ಅವರ ಅತ್ಯುತ್ತಮ ಸ್ಕೋರ್ 224 ಆಗಿದೆ.

350 ಏಕದಿನ ಪಂದ್ಯಗಳಲ್ಲಿ 10,773 ರನ್ ಹೊಡೆದಿರುವ ಧೋನಿ 10 ಶತಕಗಳು ಮತ್ತು 73 ಅರ್ಧಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ 183 ಅತ್ಯುತ್ತಮ ಸ್ಕೋರ್ ಆಗಿದೆ. ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ದಾಖಲಿಸಿದ ಐದನೇ ಬ್ಯಾಟ್ಸ್‍ಮನ್ ಆಗಿದ್ದಾರೆ. ಸಚಿನ್ ತೆಂಡೂಲ್ಕರ್ 18,426 ರನ್ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಯಾರ ಜೊತೆ, ಎಲ್ಲಿ ಬೇಕಾದ್ರೂ ಆಡೋಕೆ ನಾವ್‌ ರೆಡಿ – ಪಾಕ್‌ ತಂಡ ಭಾರತಕ್ಕೆ ಬರೋದು ಖಚಿತ; ಬಾಬರ್‌ ಆಜಂ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article