ಬೆಳಗಾವಿ: ರೈಲು ಬರುವ ಸಮಯದಲ್ಲಿ ಬೈಕ್ ಸವಾರನೊಬ್ಬ ಹಳಿ ದಾಟುವ ಸಾಹಸ ಮಾಡಿದ್ದಾನೆ. ರೈಲು ಬಂದ ತಕ್ಷಣವೇ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕು ಕೇಂದ್ರದ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮೀರಜ್ ಹುಬ್ಬಳ್ಳಿ ಪ್ಯಾಸೆಂಜರ್ ರೈಲಿಗೆ ಬೈಕ್ ನೊಂದಿಗೆ ಅಡ್ಡ ಬಂದ ವ್ಯಕ್ತಿ ಹಳಿ ದಾಟಲು ಮುಂದಾಗಿದ್ದು, ರೈಲು ಬರುತ್ತಿದ್ದಂತೆ ಹಳಿ ಮೇಲೆ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ರೈಲಿನ ಚಕ್ರಕ್ಕೆ ಸಿಲುಕಿದ ಬೈಕ್ ನ್ನು ರೈಲ್ವೇ ಇಂಜಿನ್ 300 ಮೀಟರ್ ದೂರದವರೆಗೆ ಎಳೆದುಕೊಂಡು ಹೋಗಿದೆ. ಇದರ ಪರಿಣಾಮ ರೈಲ್ವೇ ನಿಲ್ದಾಣದ ತಡೆಗೋಡೆಗೆ ಹಾನಿಯಾಗಿದೆ.
ಸದ್ಯ ಇಂಜಿನ್ ಗೆ ಸಿಲುಕಿದ ಬೈಕ್ ನ ಅವಶೇಷಗಳನ್ನು ರೈಲ್ವೇ ಸಿಬ್ಬಂದಿ ತೆಗೆದಿದ್ದಾರೆ. ಅನಾಮಿಕ ವ್ಯಕ್ತಿಯ ತಪ್ಪಿನಿಂದ ರೈಲು ಸುಮಾರು ಒಂದು ಗಂಟೆ ತಡವಾಗಿದ್ದರಿಂದ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv