ವ್ಹೀಲಿಂಗ್ ಮಾಡ್ತಾ ಕ್ಯಾಂಟರ್‌ಗೆ ಡಿಕ್ಕಿ – ಇಬ್ಬರು ಯುವಕರ ದಾರುಣ ಸಾವು; ಬೈಕ್‌ ಅಪ್ಪಚ್ಚಿ!

Public TV
1 Min Read
Chikkaballapura Accident 3

ಚಿಕ್ಕಬಳ್ಳಾಪುರ: ವ್ಹೀಲಿಂಗ್ ಕ್ರೇಜ್‌ಗೆ (Wheeling Craze) ಇಬ್ಬರು ಯುವಕರು ಸಾವನ್ನಪ್ಪಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ವಿಜಯಪುರದಲ್ಲಿ ನಡೆದಿದೆ. ಇದನ್ನೂ ಓದಿ: ಬುರ್ಖಾಧಾರಿ ಅಕ್ಕ-ತಂಗಿಯರಿಂದ ಸರಗಳ್ಳತನ – ಮೂವರು ಕಿಲಾಡಿ ಕಳ್ಳಿಯರು ಅರೆಸ್ಟ್‌, ಒಬ್ಬಳು ಎಸ್ಕೇಪ್‌

Chikkaballapura Accident 2 1

ವಿಜಯಪುರ-ದೇವನಹಳ್ಳಿ ಬೈಪಾಸ್ ರಸ್ತೆಯಲ್ಲಿ ಡಿಯೋ ಗಾಡಿ ಮೂಲಕ ವ್ಹೀಲಿಂಗ್ ಮಾಡುವ ವೇಳೆ ಎದುರಗಡೆ ಬರ್ತಿದ್ದ ಕ್ಯಾಂಟರ್‌ಗೆ ಗಾಡಿ ಡಿಕ್ಕಿಯಾಗಿದೆ. ಅಪಘಾತದಲ್ಲಿ ಬೈಕ್‌ನಲ್ಲಿದ್ದ ಅರ್ಫಾಜ್ ಹಾಗೂ ಮನೋಜ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಅವಮಾನ – ಸಿಂಗ್‌ ಬೆಂಬಲಿಸಿ ಪಾಕ್‌ ಪ್ರಧಾನಿ ಷರೀಫ್‌ ವಿರುದ್ಧ ಗುಡುಗಿದ್ದ ಮೋದಿ 

Accident 3

ಇನ್ನೂ ಯುವಕರು ವ್ಹೀಲಿಂಗ್ ಮಾಡುತ್ತಿರೋ ದೃಶ್ಯ ರಸ್ತೆ ಬದಿಯ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಮೃತದೇಹಗಳನ್ನ ದೇವನಹಳ್ಳಿ ಖಾಸಗಿ ಆಸ್ಪತ್ರೆಯ ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಇದನ್ನೂ ಓದಿ: ಸಿಲಿಂಡರ್ ಸ್ಫೋಟ ಪ್ರಕರಣ – ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು; ಮೃತರ ಸಂಖ್ಯೆ 3ಕ್ಕೆ ಏರಿಕೆ

Share This Article