ಬೆಂಗಳೂರು: ನೋ ಪಾರ್ಕಿಂಗ್ ನಲ್ಲಿ ಪಾರ್ಕ್ ಮಾಡಿ ಎಲ್ಲೆಂದರಲ್ಲಿ ಹೋದ್ರೆ ಎಚ್ಚರ. ಬೆಂಗಳೂರು ಸಂಚಾರಿ ಪೊಲೀಸರಿಂದ ಸಿದ್ಧವಾಗಿದ್ದೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಸೂತ್ರ.
Advertisement
ಹೌದು. ಬೆಂಗಳೂರಿನಲ್ಲಿ ಟೋಯಿಂಗ್ ನಿಂತ ಮೇಲೆ ನೋ ಪಾರ್ಕಿಂಗ್‍ನಲ್ಲಿ ಕಾರು, ಬೈಕ್‍ಗಳನ್ನ ನಿಲ್ಲಿಸಿ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ವಾಹನಗಳನ್ನ ನೋ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡೋದ್ರಿಂದ ನಗರದಲ್ಲಿ ಟ್ರಾಫಿಕ್ ಕಿರಿಕಿರಿ ಹೆಚ್ಚಾಗುತ್ತಿದೆ. ಹಾಗಾಗಿ ಸಂಚಾರಿ ಪೊಲೀಸರು ನೋ ಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡುವವರ ಹಾವಳಿಗೆ ಬ್ರೇಕ್ ಹಾಕಲು ಹಳೆ ಮಾದರಿಯ ಮೊರೆ ಹೋಗಿದ್ದಾರೆ.
Advertisement
Advertisement
ನೋ ಪಾರ್ಕಿಂಗ್‍ನಲ್ಲಿ ವಾಹನಗಳನ್ನ ಪಾರ್ಕ್ ಮಾಡಿ ಹೋಗುವ ವಾಹನ ಸವಾರರಿಗೆ ಶಾಕ್ ಕೊಡಲು ಬೆಂಗಳೂರು ಸಂಚಾರಿ ಪೊಲೀಸರಿಂದ ಸಿದ್ಧವಾಗಿದೆ. ಅಲ್ಲೇ ಡ್ರಾ ಅಲ್ಲೇ ಬಹುಮಾನ ಸೂತ್ರ. ನೋ ಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡಿ ಹೋಗಿರೋ ವಾಹನಗಳಿಗೆ ವ್ಹೀಲ್ ಕ್ಲಾಂಪ್ ಹಾಕಿ ಸ್ಥಳದಲ್ಲೇ ನೋ ಪಾರ್ಕ್ ವಾಹನಗಳ ದಂಡದ ಮೊತ್ತ ವಸೂಲಿ ಮಾಡುವಂತೆ ಹಿರಿಯ ಅಧಿಕಾರಿಗಳಿಂದ ಸೂಚನೆ ಕೊಡಲಾಗಿದೆ ಎನ್ನಲಾಗಿದೆ.
Advertisement
ಹಿರಿಯ ಅಧಿಕಾರಿಗಳ ಸೂಚನೆಯಂತೆ ಬೆಂಗಳೂರಿನಲ್ಲಿ ನೋ ಪಾರ್ಕಿಂಗ್‍ನಲ್ಲಿ ಪಾರ್ಕ್ ಮಾಡಿ ಹೋಗುವ ವಾಹನ ಸವಾರರಿಗೆ ದಡಂ ದಶಗುಣಂ ಪ್ರಯೋಗ ಮಾಡಲಾಗುತ್ತಿದೆ. ಇದನ್ನೂ ಓದಿ: ರಾಜ್ಯಾದ್ಯಂತ ವರುಣನ ಅಬ್ಬರಕ್ಕೆ 11 ಜೀವಗಳು ಬಲಿ – ಕರಾವಳಿ, ಮಲೆನಾಡಿನಲ್ಲಿ ರೆಡ್ ಅಲರ್ಟ್