ಕನ್ನಡ ಚಿತ್ರರಂಗದ ಉದ್ಯಾನವನದಲ್ಲಿ ಬೆಳೆದು ನಿಂತಿರುವ ವೀಲ್ ಚೇರ್ ರೋಮಿಯೋ ಬೆಳ್ಳಿತೆರೆ ಬಾನಂಗಳ ಪ್ರವೇಶಿಸಲು ಸನ್ನದ್ಧನಾಗಿದ್ದಾನೆ. ಈ ತಿಂಗಳ 27ರಂದು ಚಿತ್ರ ಪ್ರೇಮಿಗಳನ್ನು ರಂಜಿಸಲು ಬರುತ್ತಿರುವ ವೀಲ್ ಚೇರ್ ರೋಮಿಯೋ ಅಂಗಳದಿಂದ ಮನ ತಣಿಸಿ ಕುಣಿಸುವ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಹೃದಯದಲ್ಲಿ ಅರಮನೆ ಕಟ್ಟಿದೆ.
Advertisement
ರಂಗು ರಾಟೆ ರಂಗು ರಾಟೆ ಎಂದು ಶುರುವಾಗುವ ಅದ್ಭುತ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಅಷ್ಟೇ ಸೊಗಸಾದ ಸಂಗೀತವನ್ನು ಭರತ್ ಜಿ.ಜೆ ನೀಡಿದ್ದು, ವಿಜಯ್ ಪ್ರಕಾಶ್ ಹಾಡಿಗೆ ಧ್ವನಿಯಾಗಿದ್ದಾರೆ. ನಾಯಕ ನಾಯಕಿಯನ್ನು ಪ್ರೀತಿಸುವ ಪರಿಯನ್ನು ವಿವರಿಸುವ ಬಗೆಯ ಹಾಡು ಇದಾಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ : ಕ್ರಿಕೆಟ್ ಪಂದ್ಯದ ಮಧ್ಯ ಗಮನ ಸೆಳೆದಿದ್ದ ಈ ಸುಂದರಿ, ಸಿನಿಮಾ ರಂಗಕ್ಕೆ ಎಂಟ್ರಿ
Advertisement
Advertisement
ಕಾಲಿಲ್ಲದ ಯುವಕ, ಕಣ್ಣುಕಾಣದ ವೇಶ್ಯೆಯ ಪ್ರೀತಿಯಲ್ಲಿ ಬಿದ್ದಾಗ ಏನಾಗುತ್ತದೆ ಎಂಬ ಒಂದೊಳ್ಳೆ ಕಂಟೆಂಟು ಜೊತೆಗೆ, ಅಪ್ಪ ಮಗನ ಬಾಂಧವ್ಯವನ್ನು ವಿವರಿಸುವ ವೀಲ್ ಚೇರ್ ರೋಮಿಯೋ ಸಿನಿಮಾಗೆ ಹಲವು ಸ್ಟಾರ್ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಜಿ. ನಟರಾಜ್, ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ರಾಮ್ ಚೇತನ್ ಅಭಿನಯಿಸಿದ್ದರೆ, ಮಯೂರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲನಾಣಿ ಗಿರೀಶ್ ಸೇರಿದಂತೆ ಒಂದಷ್ಟು ಹಿರಿಯ ಕಲಾಬಳಗ ಸಿನಿಮಾದಲ್ಲಿದೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು
Advertisement
ಜೆ. ಭರತ್ ಸಂಗೀತವಿರುವ ವೀಲ್ ಚೇರ್ ರೋಮಿಯೋ ಚಿತ್ರಕ್ಕೆ ಸಂತೋಷ್ ಛಾಯಾಗ್ರಹಣ, ಕಿರಣ್ ಸಂಕಲನವಿದ್ದು, ಗುರುಪ್ರಸಾದ್ ಸಂಭಾಷಣೆ ಇದ್ದು, ಟಿ.ವೆಂಕಟಾಚಲಯ್ಯ ಹಾಗೂ ಭಾರತಿ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಒಂದಷ್ಟು ಪಂಚಿಂಗ್ ಡೈಲಾಗ್, ವಿಭಿನ್ನತೆಯಿಂದ ಗಮನಸೆಳೆದಿರುವ ಟ್ರೇಲರ್ ಮೂಲಕ ಸಿನಿಮಾದ ಕಂಟೆಂಟು, ಕ್ವಾಲಿಟಿ ಮೇಲೆ ಬೆಳಕು ಚೆಲ್ಲಿರುವ ವೀಲ್ ಚೇರ್ ರೋಮಿಯೋ ಮೇ 27ಕ್ಕೆ ತೆರೆ ಮೇಲೆ ಬರಲಿದೆ.