‘ವೀಲ್ ಚೇರ್ ರೋಮಿಯೋ’..ಹೀಗೊಂದು ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡ್ತಿರೋದು ಎಲ್ಲರ ಗಮನಕ್ಕೂ ಬಂದಿದೆ. ಡಿಫ್ರೆಂಟ್ ಟೈಟಲ್, ಅಷ್ಟೇ ಡಿಫ್ರೆಂಟ್ ಕಾನ್ಸೆಪ್ಟ್‌ನೊಂದಿಗೆ ಬರ್ತಿರೋ ಈ ರೋಮಿಯೋ ಈಗಾಗಲೇ ಹಾಡು ಮತ್ತು ಟ್ರೇಲರ್ ಮೂಲಕ ಒಂದಷ್ಟು ಸಿನಿಪ್ರಿಯರ ಮನದಲ್ಲೂ ಅಚ್ಚೊತ್ತಿದ್ದಾನೆ. ಒಂದಿಷ್ಟು ಕುತೂಹಲವನ್ನು ಕೆರಳಿಸಿದ್ದಾನೆ. ಅದ್ರಲ್ಲೂ ಟ್ರೇಲರ್ ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲಿನ ಹೋಪ್ಸ್ ಸಿನಿಪ್ರಿಯರಲ್ಲಿ ದುಪ್ಪಟ್ಟಾಗಿದೆ. ಮಾಮೂಲಿ ಕಥೆ ಅಲ್ಲ ಸಂಥಿಂಗ್ ಈಸ್ ದೇರ್ ಅನ್ನೋ ಟಾಕ್ ಜೋರಾಗಿದೆ. ಈ ಪಾಸಿಟಿವ್ ಟಾಕ್ ನೋಡಿದ್ರೇನೆ ಗೊತ್ತಾಗುತ್ತೆ ವೀಲ್ ಚೇರ್ ರೋಮಿಯೋ ಹೊಸ ಬಝ್ ಕ್ರಿಯೇಟ್ ಮಾಡೋದ್ರಲ್ಲಿ ಡೌಟೇ ಇಲ್ಲ ಎಂದು. ಸದ್ಯ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬರಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿರೋ ವೀಲ್ ಚೇರ್ ರೋಮಿಯೋಗೆ ಈಗ ಬಂಪರ್ ಆಫರ್ ಸಿಕ್ಕಿದೆ. ಅದುವೇ ಬೆಂಗಳೂರು ಫಿಲ್ಮಂ ಫೆಸ್ಟ್.
Advertisement
ಎಸ್,, ಈ ಬಾರಿಯ ಬೆಂಗಳೂರು ಫಿಲ್ಮಂ ಫೆಸ್ಟ್‌ಗೆ ಅದ್ಧೂರಿ ವೇದಿಕೆ ಸಜ್ಜಾಗುತ್ತಿದೆ. ಮಾರ್ಚ್‌ನಲ್ಲಿ ನಡೆಯಲಿರೋ ಬೆಂಗಳೂರು ಫಿಲ್ಮಂ ಫೆಸ್ಟ್‌ನಲ್ಲಿ ಬೇರೆ ಬೇರೆ ದೇಶದ ನೂರಾರು ಸಿನಿಮಾಗಳು ಆಯ್ಕೆಯಾಗಿ ತೆರೆ ಕಾಣಲಿವೆ. ಈ ಚಲನಚಿತ್ರೋತ್ಸವಕ್ಕೆ ‘ವೀಲ್ ಚೇರ್ ರೋಮಿಯೋ’ ಸಿನಿಮಾ ಆಯ್ಕೆಯಾಗಿದೆ. ಸಿನಿಮಾದಲ್ಲಿರೋ ಕಂಟೆಂಟ್, ಚಿತ್ರ ಮೂಡಿ ಬಂದ ರೀತಿ ಆಯ್ಕೆದಾರರ ಮನಸ್ಸಿಗೆ ಇಷ್ಟವಾಗಿದೆ. ಆದ್ದರಿಂದ ನಮ್ಮ ಸಿನಿಮಾ ಕೂಡ ಬೆಂಗಳೂರು ಫಿಲ್ಮಂ ಫೆಸ್ಟ್‌ಗೆ ಸೆಲೆಕ್ಟ್ ಆಗಿದೆ ಎಂದು ಚಿತ್ರದ ನಿರ್ದೇಶಕ ನಟರಾಜ್ ಸಂತಸ ಹಂಚಿಕೊಂಡಿದ್ದಾರೆ.
Advertisement
Advertisement
‘ವೀಲ್ ಚೇರ್ ರೋಮಿಯೋ’ ಹೆಸರಿಗೆ ತಕ್ಕಂತೆ ಚಿತ್ರದ ನಾಯಕ ವೀಲ್ ಚೇರ್ ಮೇಲೆ ಕುಳಿತು ಪ್ರೀತಿಯಲ್ಲಿ ಬೀಳುತ್ತಾನೆ. ಆತ ಪ್ರೀತಿಯಲ್ಲಿ ಬೀಳೋದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅಂಧ ಹುಡುಗಿ ಜೊತೆ. ಈ ವಿಚಾರ ನಾಯಕನ ಮನೆಯಲ್ಲಿ ಗೊತ್ತಾದಾಗ ಏನೆಲ್ಲ ಆಗಬಹುದು ಎನ್ನೋದು ಚಿತ್ರದ ಒನ್ ಲೈನ್ ಕಹಾನಿ. ಹಾಗಂತ ಇದು ಸೀರಿಯಸ್ ಸಬ್ಜೆಕ್ಟ್ ಸಿನಿಮಾ ಅಲ್ಲ ಬದಲಾಗಿ ಪಕ್ಕಾ ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾ. ಈ ಕಾಮಿಡಿಯೊಂದಿಗೆ ಕೊಂಚ ಸೆಂಟಿಮೆಂಟ್ ಕೂಡ ಆಡ್ ಆಗಿದ್ದು ಎಲ್ಲೂ ಬೋರ್ ಹೊಡಿಸದೇ ನೋಡುಗರನ್ನು ನಗಿಸಲಿದ್ದಾನೆ ರೋಮಿಯೋ. ಇದನ್ನೂ ಓದಿ : ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್
Advertisement
ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡಿತಿರೋ ನಟರಾಜ್ ಸಿನಿಮಾ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಕಥೆ, ಚಿತ್ರಕಥೆ ಬರೆದು ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನಟರಾಜ್ ರೋಮಿಯೋ, ಜೂಮ್, ಆರೆಂಜ್ ಸೇರಿದಂತೆ ಹಲವು ಸಿನಿಮಾಗಳಿಗೆ ಡೈಲಾಗ್ ರೈಟರ್ ಆಗಿ, ಸಹಾಯಕ ನಿರ್ದೇಶಕನಾಗಿ ಸಿನಿಮಾ ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ವೀಲ್ ಚೇರ್ ರೋಮಿಯೋ ಸಿನಿಮಾ ಕೂಡ ಅಷ್ಟೇ ಪ್ಯಾಶನ್ ನಿಂದ, ಶ್ರದ್ಧೆವಹಿಸಿ ತೆರೆ ಮೇಲೆ ತಂದಿದ್ದಾರೆ ಎನ್ನೋದಕ್ಕೆ ಚಿತ್ರದ ಸ್ಯಾಂಪಲ್ ಗಳೇ ಸಾಕ್ಷಿ. ಇದನ್ನೂ ಓದಿ: ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?
ಚಿತ್ರದಲ್ಲಿ ಸೀರಿಯಲ್‌ನಲ್ಲಿ ನಟಿಸಿ ಅನುಭವ ಹೊಂದಿರುವ ಹೊಸ ಪ್ರತಿಭೆ ರಾಮ್ ಚೇತನ್ ನಾಯಕನಾಗಿ ನಟಿಸಿದ್ದು, ಮಯೂರಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಬಿ.ಜೆ.ಭರತ್ ಸಂಗೀತ ನಿರ್ದೇಶನದಲ್ಲಿ ಹಾಡು ಹಾಗೂ ಹಿನ್ನೆಲೆ ಸಂಗೀತ ಮೂಡಿ ಬಂದಿದ್ದು, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರಪ್ರಸಾದ್, ತಬಲ ನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಹರಾಷ್ಟ್ರ, ಪುಣೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಮೇನಲ್ಲಿ ವೀಲ್ ಚೇರ್ ರೋಮಿಯೋ ಪ್ರೇಕ್ಷಕರ ಮನಸ್ಸಿಗೆ ಕಚಗುಳಿ ಇಡಲು ತೆರೆಗೆ ಬರಲಿದ್ದಾನೆ.