ಕ್ಯಾಲಿಫೋರ್ನಿಯಾ: ಕಳೆದ ಕೆಲವು ತಿಂಗಳಿನಿಂದ ಪರೀಕ್ಷಾ ಹಂತದಲ್ಲಿದ್ದ ವಾಟ್ಸಪ್ ಟು ಸ್ಟೆಪ್ ವೆರಿಫಿಕೇಷನ್ ಸೆಕ್ಯೂರಿಟಿ ಫೀಚರ್ ಈಗ ಎಲ್ಲಾ ವಾಟ್ಸಪ್ ಬಳಕೆದಾರರಿಗೆ ಸಿಗಲಿದೆ. ಈ ಫೀಚರ್ ಮೂಲಕ ವಿಂಡೋಸ್, ಐಒಎಸ್, ಆ್ಯಂಡ್ರಾಯ್ಡ್ ಫೋನ್ ಹೊಂದಿರುವ ಬಳಕೆದಾರರು ಹೊಸದಾಗಿ ವಾಟ್ಸಪ್ ಅಪ್‍ಡೇಟ್ ಮಾಡಿಕೊಂಡರೆ ಹೆಚ್ಚಿನ ಭದ್ರತೆಯೊಂದಿಗೆ ಫೋನ್‍ನಂಬರ್ ವೆರಿಫಿಕೇಷನ್ ಮಾಡಿಕೊಳ್ಳಬಹುದಾಗಿದೆ. ವಾಟ್ಸಪ್‍ನಲ್ಲಿ ಮತ್ತೊಮ್ಮೆ ರೆಜಿಸ್ಟರ್ ಆಗಲು ಅಥವಾ ಫೋನ್ ನಂಬರ್ ವೆರಿಫಿಕೇಷನ್ ಮಾಡಲು ಬಯಸಿದಲ್ಲಿ ವಾಟ್ಸಪ್ ಬಳಕೆದಾದರರು 6 ಅಂಕಿಗಳ ಪಾಸ್‍ಕೋಡ್ ನೀಡಬೇಕು.
ಈ ಫೀಚರನ್ನು ನಿಮ್ಮ ಫೋನ್‍ನಲ್ಲಿ ಸಕ್ರಿಯಗೊಳಿಸಲು ಹೀಗೆ ಮಾಡಿ:
ವಾಟ್ಸಪ್ > ಸೆಟ್ಟಿಂಗ್ಸ್ > ಅಕೌಂಟ್ > ಟು ಸ್ಟೆಪ್ ವೆರಿಫಿಕೇಷನ್ > ಎನೇಬಲ್.
Advertisement
ಈ ಫೀಚರ್ ಸಕ್ರಿಯಗೊಳಿಸಿದ ನಂತರ ಬಳಕದಾರರು ತಾವು ಆಯ್ಕೆ ಮಾಡುವ 6 ಅಂಕಿಗಳ ಪಾಸ್‍ಕೋಡ್ ನೀಡಬೇಕು. ಹಾಗೆ ಇದರ ಜೊತೆಗೆ ಇ ಮೇಲ್ ಐಡಿ ನೀಡಬೇಕು. ಒಂದು ವೇಳೆ ಪಾಸ್‍ಕೋಡ್ ಮರೆತುಹೋದ್ರೆ ಅಕೌಂಟ್ ಮರಳಿ ಪಡೆಯಲು ಇ ಮೇಲ್ ವಿಳಾಸ ಸಹಾಯಕವಾಗುತ್ತದೆ. ವಾಟ್ಸಪ್‍ನಿಂದ ಇ ಮೇಲ್ ವಿಳಾಸಕ್ಕೆ ಒಂದು ಲಿಂಕ್ ಬರುತ್ತದೆ. ಇದರ ಮೂಲಕ ಟು ಸ್ಟೆಪ್ ವೆರಿಫಿಕೇಷನನ್ನು ನಿಷ್ಕ್ರಿಯಗೊಳಿಸಿ ಅಕೌಂಟನ್ನು ಮರಳಿ ಪಡೆಯಬಹುದು ಎಂದು ಈ ಹೊಸ ಫೀಚರ್‍ನ ಎಫ್‍ಎಕ್ಯೂ ಪೇಜ್‍ನಲ್ಲಿ ತಿಳಿಸಲಾಗಿದೆ. ಆದ್ರೆ ಬಳಕೆದಾರರು ನೀಡೋ ಇ ಮೇಲ್ ವಿಳಾಸ ಸರಿ ಇದೆಯೇ ಎಂದು ವಾಟ್ಸಪ್ ಪರೀಕ್ಷಿಸುವುದಿಲ್ಲ. ಆದ್ದರಿಂದ ಬಳಕೆದಾರರು ಸರಿಯಾದ ಇಮೇಲ್ ವಿಳಾಸ ನೀಡದಿದ್ದರೆ ಅಕೌಂಟ್ ಲಾಕ್ ಆಗಿ ಮರಳಿ ಪಡೆಯಲಾರದಂತೆ ಆಗುತ್ತದೆ.
Advertisement
ಒಂದು ವೇಳೆ ನೀವು ವಾಟ್ಸಪ್‍ನಲ್ಲಿ ಈ ಟು ಸ್ಟೆಪ್ ವೆರಿಫಿಕೇಷನ್ ಫೀಚರ್ ಸಕ್ರಿಯಗೊಳಿಸಿದ್ದರೆ ನೀವು ಪಾಸ್‍ಕೋಡ್ ಬಳಸದೆ ವಾಟ್ಸಪ್ ಬಳಸಿದ 7 ದಿನಗಳ ಒಳಗೆ ಮತ್ತೆ ಫೋನ್ ನಂಬರ್ ವೆರಿಫೈ ಮಾಡಲು ಅವಕಾಶವಿಲ್ಲ. ಅಂದ್ರೆ ಒಂದು ವೇಳೆ ನೀವು ಇಮೇಲ್ ವಿಳಾಸ ನೀಡದೇ ನಿಮ್ಮ ಪಾಸ್‍ಕೋಡ್ ಮರೆತು ಹೋದ್ರೆ ಮುಂದಿನ 7 ದಿನಗಳವರೆಗೆ ವಾಟ್ಸಪ್ ಬಳಸಲು ಸಾಧ್ಯವಾಗುವುದಿಲ್ಲ.
Advertisement
7 ದಿನಗಳ ನಂತರ ಪಾಸ್‍ಕೋಡ್ ಇಲ್ಲದೆ ರೀವೆರಿಫೈ ಮಾಡಲು ಅವಕಾಶವಿರುತ್ತದೆ. ಆದ್ರೆ ಪೆಂಡಿಂಗ್ ಮೆಸೇಜ್‍ಗಳೆಲ್ಲವೂ ಡಿಲೀಟ್ ಆಗಿರುತ್ತದೆ. ಅವನ್ನು ಮತ್ತೆ ಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ 30 ದಿನಗಳ ನಂತರ ನೀವು ಪಾಸ್‍ಕೋಡ್ ಇಲ್ಲದೆ ಫೋನ್ ನಂಬರ್ ರೀವೆರಿಫೈ ಮಾಡಿದ್ರೆ ನಿಮ್ಮ ಅಕೌಂಟ್ ಡಿಲೀಟ್ ಆಗಿ ಹೊಸ ಅಕೌಂಟ್ ಸೃಷ್ಟಿಯಾಗುತ್ತದೆ.