ವಾಷಿಂಗ್ಟನ್: ವಾಟ್ಸಪ್ ಜಾಗತಿಕ ಮಟ್ಟದಲ್ಲಿ ಅತೀ ಹೆಚ್ಚು ಜನರು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಬಳಕೆದಾರರ ಸುರಕ್ಷತೆಗಾಗಿ ಕಂಪನಿ ಆಗಾಗ ಗೌಪ್ಯತೆಯ ಕ್ರಮಗಳನ್ನು ಬಿಡುಗಡೆಗೊಳಿಸುತ್ತಲೇ ಇರುತ್ತದೆ.
ಹೀಗಿರುವಾಗಲೂ ಹ್ಯಾಕರ್‌ಗಳು ಜನರ ಖಾತೆಗಳನ್ನು ಹ್ಯಾಕ್ ಮಾಡಲು ಒಂದಲ್ಲಾ ಒಂದು ಮಾರ್ಗಗಳನ್ನು ಕಂಡುಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಸೈಬರ್ ಕ್ರಿಮಿನಲ್‍ಗಳು ಆಪ್‍ನಲ್ಲಿ ಲಭ್ಯವಿರುವ ವಾಟ್ಸಪ್ ಪೇ ಫೀಚರ್ ಮೂಲಕ ಜನರಿಂದ ಹಣ ಲೂಟಿ ಮಾಡುವ ಪ್ರಯತ್ನ ಮಾಡಿದ್ದಾರೆ. ಇದನ್ನೂ ಓದಿ: ರೋಹಿತ್ ಟೀಂ ಇಂಡಿಯಾದ ನಾಯಕರಾದ ಬಳಿಕ ಸಿಗುತ್ತಿರುವ ವೇತನ ಎಷ್ಟು ಗೊತ್ತಾ?
Advertisement
Advertisement
ಇತ್ತೀಚೆಗೆ ವಾಟ್ಸಪ್ ಹಣದ ವಹಿವಾಟಿಗಾಗಿ ಹೊಸ ಫೀಚರ್ `ವಾಟ್ಸಪ್ ಪೇ’ ಅನ್ನು ಪರಿಚಯಿಸಿತ್ತು. ಆ ಮೂಲಕ ಬಳಕೆದಾರರು ನೇರವಾಗಿ ಮತ್ತೊಬ್ಬ ಬಳಕೆದಾರರಿಗೆ ಹಣವನ್ನು ವರ್ಗಾಯಿಸುವಂತಹ ಅನುಕೂಲವನ್ನು ವಾಟ್ಸಪ್ ನೀಡಿತ್ತು.
Advertisement
ಇದೀಗ ಯುಕೆ ಮೂಲದ ಹ್ಯಾಕರ್‌ಗಳ ಗುಂಪೊಂದು ವಾಟ್ಸಪ್‍ನ ಫೀಚರ್ ಅನ್ನು ಬಳಸಿಕೊಂಡು ಜನರನ್ನು ವಂಚಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ.
Advertisement
ವಾಟ್ಸಪ್ ಬಳಕೆದಾರರಿಗೆ ಅವರ ಮಗ ಅಥವಾ ಮಗಳಂತೆ ಮೆಸೇಜ್ ಮಾಡಿ ಹಣ ಪಡೆದು ವಂಚಿಸುವ ಕೆಲಸವನ್ನು ಈ ಹ್ಯಾಕರ್‌ಗಳು ಮಾಡುತ್ತಿದ್ದಾರೆ. ಕೆಲವು ಸಂದರ್ಭದಲ್ಲಿ ಬಳಕೆದಾರರ ಮಕ್ಕಳ ಹೆಸರಿನಲ್ಲೇ ಮೆಸೇಜ್ ಮಾಡಿ, ಫೋನ್ ಕಳೆದುಕೊಂಡಿರುವಂತೆ ನಟಿಸಿ ತುರ್ತಾಗಿ ಹಣವನ್ನು ವರ್ಗಾಯಿಸುವಂತೆ ಕೇಳುತ್ತಾರೆ. ಹಲವು ಪೋಷಕರು ಹ್ಯಾಕರ್‌ಗಳ ಮೇಲೆ ಸಂದೇಹ ಪಡದೇ ಅವರನ್ನು ತಮ್ಮ ಮಕ್ಕಳೇ ಎಂದು ತಿಳಿದು ಹಣವನ್ನು ವರ್ಗಾಯಿಸಿ ಮೋಸ ಹೋಗುತ್ತಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಶುರುವಾಗಿದೆ ಹೈಟೆಕ್ ಡ್ರಗ್ಸ್ ಪೆಡ್ಲಿಂಗ್
ಇಂತಹ ವಂಚನೆ ಪ್ರಕರಣಗಳು ಯುಕೆಗೆ ಮಾತ್ರ ಸೀಮಿತವಾಗದೇ ಭಾರತದಲ್ಲೂ ನಡೆದಿರುವ ಬಗ್ಗೆ ವರದಿಯಾಗಿದೆ. ಇಂತಹ ಸ್ಯಾಮ್‍ಗಳನ್ನು ತಪ್ಪಿಸಲು ವಾಟ್ಸಪ್ ಬಳಕೆದಾರರು ಎಚ್ಚರವಾಗಿರುವುದು ಅಗತ್ಯವಾಗಿದೆ.