ನವದೆಹಲಿ: ವಾಟ್ಸಪ್ ವಿಡಿಯೋ ಕಾಲಿಂಗ್‍ನಲ್ಲಿ ವಿಶ್ವದಲ್ಲೇ ಭಾರತಕ್ಕೆ ನಂಬರ್ ಒನ್ ಸ್ಥಾನ ಸಿಕ್ಕಿದೆ.
ಕಳೆದ ನವೆಂಬರ್ ನಲ್ಲಿ ಗ್ರಾಹಕರಿಗೆ ವಿಡಿಯೋ ಕಾಲಿಂಗ್ ವಿಶೇಷತೆಯನ್ನು ಸೇರಿಸಿದ್ದು, 6 ತಿಂಗಳಿನಲ್ಲಿ ಭಾರತದ ಬಳಕೆದಾರರು ಅತಿ ಹೆಚ್ಚು ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ತಿಳಿಸಿದೆ.
Advertisement
120 ಕೋಟಿ ಸಕ್ರಿಯ ಬಳಕೆದಾರರ ಪೈಕಿ 20 ಕೋಟಿ ಸಕ್ರಿಯ ಬಳಕೆದಾರರು ಭಾರತದಲ್ಲಿದ್ದಾರೆ. ವಿಡಿಯೋ ಕಾಲಿಂಗ್ ವಿಶೇಷತೆ ಯಶಸ್ವಿಯಾಗಿದ್ದು, ಪ್ರತಿ ದಿನ ಒಟ್ಟು 34 ಕೋಟಿ ವಿಡಿಯೋ ಕಾಲಿಂಗ್ ಆಗುತ್ತಿದೆ. ವಿಶ್ವದಲ್ಲಿ 34 ಕೋಟಿ ವಿಡಿಯೋ ಕಾಲ್‍ಗಳ ಪೈಕಿ ಭಾರತದಲ್ಲೇ ಪ್ರತಿ 5 ಕೋಟಿ ವಿಡಿಯೋ ಕಾಲ್‍ಗಳು ಆಗುತ್ತಿದೆ ಎಂದು ವಾಟ್ಸಪ್ ತಿಳಿಸಿದೆ.
Advertisement
ವಿಶ್ವದಲ್ಲಿರುವ ಹಲವಾರು ಪ್ರಖ್ಯಾತ ಮೆಸೇಜಿಂಗ್ ಅಪ್ಲಿಕೇಶನ್‍ಗಳು ಮೊದಲೇ ವಿಡಿಯೋ ಕಾಲಿಂಗ್ ವಿಶೇಷತೆಯನ್ನು ಸೇರಿಸಿತ್ತು. ಇವುಗಳಲ್ಲಿ ಈ ವಿಶೇಷತೆ ಬಂದ ಬಳಿಕ ವಾಟ್ಸಪ್ ತನ್ನ ಬಳಕೆದಾರರಿಗೆ ವಿಡಿಯೋ ಕಾಲಿಂಗ್ ವಿಶೇಷತೆಯನ್ನು ನವೆಂಬರ್‍ನಲ್ಲಿ ನೀಡಿತ್ತು.
Advertisement
ಕನ್ನಡ ಸೇರಿದಂತೆ ಭಾರತದ 10 ಭಾಷೆ ವಿಶ್ವದ ಒಟ್ಟು 50 ಭಾಷೆಗಳಲ್ಲಿ ವಾಟ್ಸಪ್ ಲಭ್ಯವಿದೆ. ವಾಟ್ಸಪ್ ಕರೆಗಳು ಯಶಸ್ವಿಯಾಗಬೇಕಾದರೆ ಸ್ಮಾರ್ಟ್ ಫೋನಲ್ಲಿ 4ಜಿ ವೇಗದ ಇಂಟರ್‍ನೆಟ್ ಬೇಕಾಗುತ್ತದೆ. ಇಂಟರ್ ನೆಟ್ ವೇಗ ಕಡಿಮೆ ಇದ್ದಲ್ಲಿ ತಡವಾಗಿ ಸಂವಹನ ಆಗುತ್ತದೆ.
Advertisement
ಇದನ್ನೂ ಓದಿ: ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್