ನವದೆಹಲಿ: ಖಾತೆ ತೆರೆಯಲು ನಿಗದಿಯಾಗಿದ್ದ ಕನಿಷ್ಠ ವಯಸ್ಸಿನ ಮಿತಿಯನ್ನು ಯುರೋಪ್ ನಲ್ಲಿ 13 ರಿಂದ 16 ಕ್ಕೆ ಏರಿಸಲು ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿ ಮುಂದಾಗಿದೆ.
ಕಂಪನಿಯ ಹೊಸ ಡೇಟಾ ಸುರಕ್ಷತೆಯ ನಿಯಮಗಳಲ್ಲಿ ಹೊಸ ನೀತಿಯನ್ನು ಸೇರಿಸಲಾಗಿದೆ. ಇನ್ನು ಮುಂದೆ ಕಂಪನಿಯು ಯುರೋಪಿಯನ್ ಬಳಕೆದಾರರ ವಯಸ್ಸನ್ನು ಖಾತ್ರಿ ಪಡಿಸಿಕೊಳ್ಳುತ್ತದೆ ಎಂದು ವಾಟ್ಸಪ್ ತಿಳಿಸಿದೆ.
Advertisement
ಯುರೋಪಿಯನ್ ಜನರಲ್ ಡೇಟಾ ಪ್ರೊಟೆಕ್ಷನ್ ರೆಗ್ಯುಲೇಶನ್(ಜಿಡಿಪಿಆರ್) ಕಾಯ್ದೆ ಪ್ರಕಾರ ವಾಟ್ಸಪ್ ಈ ನಿಯಮವನ್ನು ಅಳವಡಿಸಲು ಮುಂದಾಗಿದೆ, ಮೇ 25ಕ್ಕೆ ಅಧಿಕೃತವಾಗಿ ಈ ನಿಯಮ ಜಾರಿಗೆ ಬರಲಿದೆ.
Advertisement
ಬಳಸುತ್ತಿರುವ ಗ್ರಾಹಕ 16 ವರ್ಷ ಮೇಲ್ಪಟ್ಟ ವ್ಯಕ್ತಿಯೇ ಎಂದು ಹೇಗೆ ತಿಳಿಯುತ್ತದೆ ಎನ್ನುವ ಪ್ರಶ್ನೆಗೆ ವಾಟ್ಸಪ್ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲ. ಯೂರೋಪ್ ಒಕ್ಕೂಟದಲ್ಲಿ ಮಾತ್ರ ಈ ನಿಯಮ ಜಾರಿಯಾಗಲಿದ್ದು, ಉಳಿದ ಕಡೆ ಈಗ ಇರುವಂತೆ ಕನಿಷ್ಟ ವಯಸ್ಸಿನ ಮಿತಿ 13 ಇರಲಿದೆ.
Advertisement
ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಕಂಪೆನಿ ಗ್ರಾಹಕರ ಅನುಮತಿ ಪಡೆಯದೇ ಅವರ ಡೇಟಾವನ್ನು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿದೆ ಎಂದು ಜಿಡಿಪಿಆರ್ ಆರೋಪಿಸಿತ್ತು. ಈ ಆರೋಪಕ್ಕೆ ತನ್ನ ಬ್ಲಾಗ್ ನಲ್ಲಿ ಪ್ರತಿಕ್ರಿಯಿಸಿರುವ ವಾಟ್ಸಪ್ ಗ್ರಾಹಕರ ಯಾವುದೇ ಮಾಹಿತಿಯನ್ನು ನಾವು ಫೇಸ್‍ಬುಕ್ ನಲ್ಲಿ ಬಳಕೆ ಮಾಡುತ್ತಿಲ್ಲ. ಅಷ್ಟೇ ಅಲ್ಲದೇ ಸ್ಪಾಮ್ ಮೆಸೇಜ್ ಕಳುಹಿಸುವುದಿಲ್ಲ ಎಂದು ತಿಳಿಸಿದೆ.
Advertisement