ಕೋಲಾರ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗ್ರೂಪ್ ಮೂಲಕ ಹಾಯ್ ಮತ್ತು ಬಾಯ್ ಸಂದೇಶ ಕಳುಹಿಸಿದ್ದಕ್ಕೆ ಎನ್‍ಸಿಸಿ ಪ್ರಾಧ್ಯಾಪಕರೊಬ್ಬರು ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ಕೊಟ್ಟಿದ್ದಾರೆ.
ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಈ ರೀತಿಯ ಶಿಕ್ಷೆಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಎನ್‍ಸಿಸಿ ಪ್ರಾಧ್ಯಾಪಕ ಲಾರೆನ್ಸ್ ಅವರು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದ್ದಾರೆ. ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಎನ್‍ಸಿಸಿಗೆ ಸೇರಿದ ವಿದ್ಯಾರ್ಥಿಗಳಿಗಾಗಿಯೇ ಒಂದು ವಾಟ್ಸಪ್ ಗ್ರೂಪ್ ಮಾಡಲಾಗಿತ್ತು. ಈ ಗ್ರೂಪಿನಲ್ಲಿ ಪ್ರಾಧ್ಯಾಪಕರಾದ ಲಾರೆನ್ಸ್ ಅಡ್ಮಿನ್ ಆಗಿದ್ದರು. ಅವರು ವಿದ್ಯಾರ್ಥಿಗಳಿಗೆ ಈ ಗ್ರೂಪಿನಲ್ಲಿ ಅನವಶ್ಯಕವಾಗಿ ಹಾಯ್, ಬಾಯ್, ಗುಡ್ ನೈಟ್, ಗುಡ್ ಮಾರ್ನಿಂಗ್ ಮತ್ತು ಫೋಟೋಗಳನ್ನು ಮಾಡಬಾರದು ಎಂದು ಎಚ್ಚರಿಕೆ ಕೊಟ್ಟಿದ್ದರು.
Advertisement
ಪ್ರಾಧ್ಯಾಪಕರು ಎಚ್ಚರಿಕೆ ನೀಡಿದ್ದರೂ ವಿದ್ಯಾರ್ಥಿಗಳು ವಾಟ್ಸಪ್ ಗ್ರೂಪಿನಲ್ಲಿ ಅನವಶ್ಯಕವಾಗಿ ಹಾಯ್, ಬಾಯ್ ಮೆಸೇಜ್ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಪ್ರಾಧ್ಯಾಪಕರು ಇಂದು ಕಾಲೇಜಿಗೆ ಬಂದಾಗ ಯಾರು ಯಾರು ಅನವಶ್ಯಕ ಸಂದೇಶ ಮಾಡಿದ್ದರು ಅಂತಹವರನ್ನು ತರಗತಿ ಕೊಠಡಿಯಲ್ಲಿ ಹೊರ ಹಾಕಿ ಶಿಕ್ಷೆ ಕೊಟ್ಟಿದ್ದಾರೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv