Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹೊಸ ‘ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್’ ಪರಿಚಯಿಸಿದ ವಾಟ್ಸಾಪ್​ – ಅಪ್ಲಿಕೇಶನ್ ಬಳಕೆಗೆ ಹಣ ಪಾವತಿಸ್ಬೇಕಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಹೊಸ ‘ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್’ ಪರಿಚಯಿಸಿದ ವಾಟ್ಸಾಪ್​ – ಅಪ್ಲಿಕೇಶನ್ ಬಳಕೆಗೆ ಹಣ ಪಾವತಿಸ್ಬೇಕಾ?

Latest

ಹೊಸ ‘ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್’ ಪರಿಚಯಿಸಿದ ವಾಟ್ಸಾಪ್​ – ಅಪ್ಲಿಕೇಶನ್ ಬಳಕೆಗೆ ಹಣ ಪಾವತಿಸ್ಬೇಕಾ?

Public TV
Last updated: February 10, 2026 3:52 pm
Public TV
Share
5 Min Read
Whatsapp Strict Account Settings
SHARE

ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ಬಳಕೆದಾರರ ಫೋನ್‌ನಲ್ಲಿ ವಾಟ್ಸಾಪ್ ಇದ್ದೇ ಇರುತ್ತದೆ. ಸಾಮಾಜಿಕ ಜಾಲತಾಣಗಳ ಪೈಕಿ ವಾಟ್ಸಾಪ್‌ ಕೂಡ ಒಂದು. ಮೆಸೇಜ್‌, ವೀಡಿಯೋ ಕಾಲ್‌, ವಾಯ್ಸ್‌ ಕಾಲ್ ಮಾಡಲು ಇದೊಂದು ಸುಲಭ ಸಾಧನವಾಗಿದ್ದು, ಎಲ್ಲರೂ ಇದಕ್ಕೆ ಒಗ್ಗಿಕೊಂಡಿದ್ದಾರೆ. ಈಗಾಗಲೇ ಹಲವಾರು ವೈಶಿಷ್ಟ್ಯಗಳನ್ನು ಪರಿಚಯಿಸಿರುವ ವಾಟ್ಸಾಪ್‌ ಇದೀಗ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ದಾಳಿಗಳು, ಸ್ಪೈವೇರ್ ಭೀತಿ ಮತ್ತು ವಂಚನೆಯ ಕರೆಗಳನ್ನು ತಡೆಯಲು ಹೊಸದೊಂದು ಕವಚವನ್ನು ಬಿಡುಗಡೆ ಮಾಡಿದೆ. ಇದನ್ನು ಸ್ಟ್ರಿಕ್ಟ್ ಅಕೌಂಟ್ ಸೆಟ್ಟಿಂಗ್ಸ್ ಎಂದು ಹೆಸರಿಸಲಾಗಿದ್ದು, ಇದು ಬಳಕೆದಾರರ ಅಕೌಂಟ್‌ಗೆ ಅತೀವ ಭದ್ರತೆ ನೀಡುವ ಲಾಕ್‌ಡೌನ್ ಮೋಡ್​ನಂತೆ ಕಾರ್ಯನಿರ್ವಹಿಸಲಿದೆ.

 ಇದರ ಮಧ್ಯೆ ಇನ್ಮುಂದೆ ವಾಟ್ಸಾಪ್‌ ಬಳಕೆಗೆ ಹಣ ಪಾವತಿಸಿ ಚಂದಾದಾರರಾಗಬೇಕು ಎಂಬ ಸುದ್ದಿಯೂ ಸದ್ದು ಮಾಡಿದೆ. ಹಾಗಿದ್ರೆ ವಾಟ್ಸಾಪ್‌ ಪರಿಚಯಿಸಿರುವ ʼಸ್ಟ್ರಿಕ್ಟ್‌ ಅಕೌಂಟ್‌ ಸೆಟ್ಟಿಂಗ್ಸ್‌ʼ ಪ್ರಯೋಜನ ಏನು? ಇನ್ಮುಂದೆ ವಾಟ್ಸಾಪ್‌ ಬಳಕೆಗೆ ಹಣ ಪಾವತಿಸ್ಬೇಕಾ ಎಂಬ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. 

ಏನಿದು ಸ್ಟ್ರಿಕ್ಟ್‌ ಅಕೌಂಟ್‌ ಸೆಟ್ಟಿಂಗ್ಸ್?
‘ಸ್ಟ್ರಿಕ್ಟ್‌ ಅಕೌಂಟ್‌ ಸೆಟ್ಟಿಂಗ್ಸ್’ ಎಂದು ಕರೆಯಲ್ಪಡುವ ಈ ಹೊಸ ವಾಟ್ಸಾಪ್ ವೈಶಿಷ್ಟ್ಯವು ಒಂದು ಕ್ಲಿಕ್ ಆಯ್ಕೆಯಾಗಿದ್ದು, ಅದನ್ನು ಆನ್ ಮಾಡಿದಾಗ ಖಾತೆಯಲ್ಲಿ ಹಲವಾರು ಹೆಚ್ಚುವರಿ ಭದ್ರತಾ ಲೇಯರ್​ಗಳನ್ನು ಸಕ್ರಿಯಗೊಳಿಸುತ್ತದೆ. ಈ ಮೋಡ್ ಅಡಿಯಲ್ಲಿ ಅಪರಿಚಿತ ಸಂಖ್ಯೆಗಳಿಂದ ಮಾಧ್ಯಮ ಫೈಲ್‌ಗಳು ಮತ್ತು ಲಗತ್ತುಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸಲಾಗುತ್ತದೆ. ಹೆಚ್ಚುವರಿಯಾಗಿ ಲಿಂಕ್ ಪೂರ್ವವೀಕ್ಷಣೆಗಳು ಚಾಟ್‌ಗಳಲ್ಲಿ ಸಹ ನಿಷ್ಕ್ರಿಯಗೊಳಿಸಲಾಗುತ್ತದೆ.

ಎಲ್ಲಾ ಬಳಕೆದಾರರ ಚಾಟ್‌ಗಳನ್ನು ಈಗಾಗಲೇ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನಿಂದ ರಕ್ಷಿಸಲಾಗಿದ್ದರೂ, ಪತ್ರಕರ್ತರು, ಕಾರ್ಯಕರ್ತರು ಅಥವಾ ಸಾರ್ವಜನಿಕ ಪ್ರೊಫೈಲ್‌ಗಳನ್ನು ಹೊಂದಿರುವ ಬಳಕೆದಾರರಂತಹ ಕೆಲವು ವ್ಯಕ್ತಿಗಳಿಗೆ ಹೆಚ್ಚಿನ ಮಟ್ಟದ ಭದ್ರತೆಯ ಅಗತ್ಯವಿರಬಹುದು. ಅಂತಹ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಈ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವಾಟ್ಸಾಪ್ ತನ್ನ ಬ್ಲಾಗ್ ಪೋಸ್ಟ್‌ನಲ್ಲಿ ಸ್ಪಷ್ಟಪಡಿಸಿದೆ.

2022 ರಲ್ಲಿ, ಆಪಲ್ ಐಫೋನ್ ಮತ್ತು ಮ್ಯಾಕೋಸ್‌ಗಾಗಿ ಲಾಕ್‌ಡೌನ್ ಮೋಡ್ ಅನ್ನು ಪ್ರಾರಂಭಿಸಿತ್ತು. ಇದು ಸಂದೇಶ ಲಗತ್ತುಗಳು, ಲಿಂಕ್ ಪೂರ್ವವೀಕ್ಷಣೆಗಳು, ಫೇಸ್‌ಟೈಮ್ ಕರೆಗಳು ಮತ್ತು ವೆಬ್ ಬ್ರೌಸಿಂಗ್‌ಗೆ ಪ್ರವೇಶವನ್ನು ಮಿತಿಗೊಳಿಸುತ್ತದೆ. ಕಳೆದ ವರ್ಷ ಗೂಗಲ್ ಆಂಡ್ರಾಯ್ಡ್‌ಗಾಗಿ ಸುಧಾರಿತ ಪ್ರೊಟೆಕ್ಷನ್ ಮೋಡ್ ಅನ್ನು ಪರಿಚಯಿಸಿತು, ಇದರಲ್ಲಿ ಪ್ಲೇ ಸ್ಟೋರ್‌ನ ಹೊರಗಿನಿಂದ ಅಪ್ಲಿಕೇಶನ್ ಡೌನ್‌ಲೋಡ್‌ಗಳನ್ನು ನಿರ್ಬಂಧಿಸುವಂತಹ ನಿರ್ಬಂಧಗಳು ಸೇರಿವೆ. ಮೆಟಾ ಈಗ ಹೆಚ್ಚಿನ ಅಪಾಯದ ಬಳಕೆದಾರರಿಗೆ ವಿಶೇಷ ಭದ್ರತಾ ವಿಧಾನಗಳನ್ನು ನೀಡುವ ಆಯ್ದ ಟೆಕ್ ಕಂಪನಿಗಳ ಗುಂಪಿಗೆ ಸೇರಿದೆ.

ಸ್ಟ್ರಿಕ್ಟ್‌ ಅಕೌಂಟ್‌ ಸೆಟ್ಟಿಂಗ್ಸ್‌ ಪ್ರಯೋಜನಗಳೇನು?
ಅಪರಿಚಿತರ ಮೀಡಿಯಾ ಫೈಲ್ ಬ್ಲಾಕ್:
ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಇಲ್ಲದ ಅಪರಿಚಿತ ಸಂಖ್ಯೆಗಳಿಂದ ಬರುವ ಫೋಟೋ, ವಿಡಿಯೋ ಅಥವಾ ಯಾವುದೇ ಅಟ್ಯಾಚ್‌ಮೆಂಟ್‌ಗಳನ್ನು ವಾಟ್ಸಾಪ್ ತಾನಾಗಿಯೇ ಬ್ಲಾಕ್ ಮಾಡುತ್ತದೆ. 

ಅಪರಿಚಿತ ಕರೆಗಳ ಮ್ಯೂಟ್:
ಹೊಸ ಸಂಖ್ಯೆಗಳಿಂದ ಬರುವ ಕರೆಗಳು ನಿಮಗೆ ಕಿರಿಕಿರಿ ಮಾಡುವುದಿಲ್ಲ, ಅವುಗಳು ಸೈಲೆನ್ಸ್ ಆಗಿರುತ್ತವೆ.

ಲಿಂಕ್ ಪ್ರಿವ್ಯೂ ಸ್ಥಗಿತ:
ಚಾಟ್‌ನಲ್ಲಿ ಬರುವ ಲಿಂಕ್‌ಗಳ ಪ್ರಿವ್ಯೂ ಆಫ್ ಆಗುತ್ತದೆ. ಇದರಿಂದ ಅಪಾಯಕಾರಿ ವೆಬ್‌ಸೈಟ್‌ಗಳ ಟ್ರ್ಯಾಕಿಂಗ್ ತಪ್ಪಿಸಬಹುದು.

ಹೈ ವಾಲ್ಯೂಮ್ ಮೆಸೇಜ್ ಕಂಟ್ರೋಲ್:
ಅಪರಿಚಿತ ಖಾತೆಗಳಿಂದ ಅತಿಯಾಗಿ ಬರುವ ಮೆಸೇಜ್‌ಗಳನ್ನು ವಾಟ್ಸಾಪ್ ತಡೆಗಟ್ಟುತ್ತದೆ.

ಹೆಚ್ಚುವರಿ ಗೌಪ್ಯತೆ:
ನಿಮ್ಮ ಪ್ರೊಫೈಲ್ ಫೋಟೋ, ಅಬೌಟ್ ಮತ್ತು ಲಾಸ್ಟ್ ಸೀನ್ ಮಾಹಿತಿ ಕೇವಲ ನಿಮ್ಮ ಕಾಂಟ್ಯಾಕ್ಟ್‌ಗಳಿಗೆ ಮಾತ್ರ ಕಾಣಿಸುತ್ತದೆ.

ಆಕ್ಟಿವೇಟ್ ಮಾಡುವುದು ಹೇಗೆ?
– ವಾಟ್ಸಾಪ್ Settingsಗೆ ಹೋಗಿ.
– Privacy ಮೇಲೆ ಕ್ಲಿಕ್ ಮಾಡಿ.
– ಅಲ್ಲಿರುವ Advanced ಆಯ್ಕೆಯನ್ನು ಆರಿಸಿ.
– Strict Account Settings ಬಟನ್ ಅನ್ನು ಆನ್‌ ಮಾಡಿ.

ಇನ್ಮುಂದೆ ವಾಟ್ಸಾಪ್‌ ಬಳಕೆಗೆ ಹಣ ಪಾವತಿಸ್ಬೇಕಾ?
ವಾಟ್ಸಾಪ್ ಈಗಾಗಲೇ ಹಲವು ಉಪಯುಕ್ತ ಫೀಚರ್ಸ್‌ಗಳ ಮೂಲಕ ಬಳಕೆದಾರರಿಗೆ ಆಪ್ತ ಎನಿಸಿದೆ. ಇದೀಗ ವಾಟ್ಸಾಪ್‌ ಅಪ್ಲಿಕೇಶನ್ ಅನ್ನು ಮತ್ತಷ್ಟು ಆಕರ್ಷಕವಾಗಿಸುವ ಉದ್ದೇಶದಿಂದ ಹೊಸ ಐಚ್ಛಿಕ ಪ್ರೀಮಿಯಂ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ಪ್ರೀಮಿಯಂ ಯೋಜನೆಯ ಮೂಲಕ ಬಳಕೆದಾರರಿಗೆ ಹೆಚ್ಚುವರಿ ಆಯ್ಕೆಗಳು ಲಭ್ಯವಾಗಲಿವೆ. 

ವಾಟ್ಸಾಪ್ ಪೇಯ್ಡ್‌ ಚಂದಾದಾರಿಕೆ ಯೋಜನೆ ಪರಿಚಯಿಸಲು ಸಜ್ಜಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಅಂದಹಾಗೆ ಈ ನೂತನ ಯೋಜನೆಯು ಇನ್ನೂ ಅಭಿವೃದ್ಧಿಯ ಹಂತದಲ್ಲಿದ್ದು, ಸಂಸ್ಥೆಯಿಂದ ಅಧಿಕೃತವಾಗಿ ಘೋಷಣೆ ಆಗಿಲ್ಲ. ವಾಟ್ಸಾಪ್‌ ಪೇಯ್ಡ್‌ ಚಂದಾದಾರಿಕೆ ಯೋಜನೆ ಬರುವುದರಿಂದ ಈಗಿರುವ ಉಚಿತ ವಾಟ್ಸಾಪ್ ಆವೃತ್ತಿಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎನ್ನಲಾಗಿದೆ ಹಾಗೂ ಬಳಕೆದಾರರ ಗೌಪ್ಯತೆ ಸಂಬಂಧಿತ ರಕ್ಷಣೆಯೂ ಯಥಾಸ್ಥಿತಿಯಲ್ಲೇ ಮುಂದುವರಿಯುತ್ತದೆ. ಇನ್ನು ಈ ಪೇಯ್ಡ್‌ ಚಂದಾದಾರಿಕೆ ಐಚ್ಛಿಕ ಆಗಿದ್ದು ಕಡ್ಡಾಯವಲ್ಲ ಎಂಬುದು ಗಮನಾರ್ಹವಾಗಿದೆ.

ಈ ಪ್ರೀಮಿಯಂ ಯೋಜನೆಯಲ್ಲಿ ಹೆಚ್ಚುವರಿ ಆಯ್ಕೆಗಳು ಜೊತೆಗೆ ಉತ್ತಮವಾದ ಹೊಸತನವನ್ನು ಬಯಸುವವರು ಮಾತ್ರ ಈ ಯೋಜನೆಯನ್ನು ಆಯ್ಕೆ ಮಾಡಬಹುದು. ಈಗಾಗಲೇ ಸ್ನಾಪ್‌ಚಾಟ್, ಟೆಲಿಗ್ರಾಮ್ ಸೇರಿದಂತೆ ಕೆಲವು ಆಪ್‌ಗಳು ಇಂತಹ ಪ್ರೀಮಿಯಂ ಯೋಜನೆಗಳನ್ನು ಒದಗಿಸುತ್ತವೆ. ಇದೀಗ ವಾಟ್ಸಾಪ್ ಕೂಡ ಅದೇ ಹಾದಿಯಲ್ಲಿ ಮುನ್ನಡೆಯುತ್ತಿದೆ. ವಾಟ್ಸಾಪ್‌ನಲ್ಲಿ ಚಾಟಿಂಗ್, ವೀಡಿಯೊ ಕಾಲ್‌, ವಾಯ್ಸ್‌ ಕರೆಗಳು ಸೇರಿದಂತೆ ಕೆಲವು ಪ್ರೈಮರಿ ಫೀಚರ್ಸ್‌ಗಳು ಯಾವಾಗಲೂ ಉಚಿತವಾಗಿ ಲಭ್ಯವಿರುತ್ತವೆ. ಹಾಗೆಯೇ ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ವಿಧಾನದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

ಇನ್ನು ವಾಟ್ಸಾಪ್‌ನ ಮುಂಬರುವ ಈ ಪ್ರೀಮಿಯಂ ಚಂದಾದಾರಿಕೆಯಲ್ಲಿ ಲಭ್ಯವಿರುವ ಮೊದಲ ಫೀಚರ್ಸ್‌ ವಿಶೇಷ ಸ್ಟಿಕ್ಕರ್‌ಗಳು, ಹೊಸ ಆಪ್‌ ಥೀಮ್‌ಗಳು ಮತ್ತು ಮೂರು ಚಾಟ್‌ಗಳಿಗಿಂತ ಹೆಚ್ಚು ಪಿನ್ ಮಾಡುವ ಸೌಲಭ್ಯವನ್ನು ಒಳಗೊಂಡಿರಬಹುದು ಎಂದು ತೋರುತ್ತದೆ. ಇದರೊಂದಿಗೆ ವಾಟ್ಸಾಪ್ ಚಾಟ್ ರಿಂಗ್‌ಟೋನ್‌ಗಳು ಮತ್ತು ಆಪ್‌ ಐಕಾನ್ ಅನ್ನು ಕಸ್ಟಮೈಸ್ ಮಾಡುವ ಆಯ್ಕೆಗಳು ಸೇರಲಿವೆ ಎಂದು ವರದಿಗಳು ತಿಳಿಸಿವೆ.

ಪ್ರೀಮಿಯಂ ಚಂದಾದಾರಿಕೆ ಪರೀಕ್ಷೆಯ ಜೊತೆಗೆ ವಾಟ್ಸಾಪ್‌ ಸಂಸ್ಥೆಯು ಇತರ ಕೆಲವು ಅಪ್‌ಡೇಟ್‌ಗಳನ್ನು ಸಹ ಪ್ರಯೋಗಿಸುತ್ತಿದೆ. ಇವುಗಳಲ್ಲಿ ಮೆಟಾ ಎಐ ಗಾಗಿ ಹೊಸ ಥಿಂಕಿಂಗ್‌ ಮೋಡ್ ಸೇರಿವೆ. ಬಹುತೇಕ ಬಳಕೆದಾರರಿಗೆ ವಾಟ್ಸಾಪ್‌ನ ಉಚಿತ ಆವೃತ್ತಿಯು ಸಾಕಷ್ಟು ಅನುಕೂಲಕರ ಎನಿಸುವ ಸಾಧ್ಯತೆ ಇದೆ. ಆದರೆ ಆಪ್‌ನಲ್ಲಿ ಹೆಚ್ಚು ಸಮಯ ವ್ಯಯಸುವ ಮತ್ತು ಹೆಚ್ಚುವರಿ ಫೀಚರ್ಸ್‌ಗಳನ್ನು ಬಯಸುವ ಬಳಕೆದಾರರಿಗೆ ನೂತನ ಪೇಯ್ಡ್ ಆವೃತ್ತಿಯ ಯೋಜನೆಯು ಸಮಂಜಸವಾದ ಆಯ್ಕೆ ಆಗಬಹುದು.

ಇನ್ನು ಮುಂದೆ ವಾಟ್ಸಾಪ್ ಅನ್ನು ಸಂಪೂರ್ಣವಾಗಿ ಉಚಿತವಾಗಿ ಬಳಸಲು ಸಾಧ್ಯವಿಲ್ಲ. ನೀವು ಇಲ್ಲಿಯವರೆಗೆ ವಾಟ್ಸಾಪ್ ಅನ್ನು ಬಳಸುತ್ತಿರುವಂತೆ, ನೀವು ಚಾಟ್ ಮಾಡುವುದು, ಸ್ಟೇಟಸ್‌ಗಳನ್ನು ಪೋಸ್ಟ್ ಮಾಡುವುದು ಮತ್ತು ವೀಡಿಯೊ ಕರೆಗಳನ್ನು ಉಚಿತವಾಗಿ ಮಾಡಬಹುದು. ಆದಾಗ್ಯೂ, ನೀವು ಜಾಹೀರಾತುಗಳಿಲ್ಲದೆ ಇತರ ಜನರ ಸ್ಟೇಟಸ್‌ಗಳನ್ನು ನೋಡಲು ಬಯಸಿದರೆ, ನೀವು ಚಂದಾದಾರಿಕೆ ತೆಗೆದುಕೊಳ್ಳಬೇಕಾಗುತ್ತದೆ.

ಜಾಹೀರಾತುಗಳ ಕಿರಿಕಿರಿ ಇಲ್ಲದೆ ವಾಟ್ಸಾಪ್ ಬಳಸಲು ಬಯಸುವವರು ಹಣ ನೀಡಿ ಸಬ್‌ಸ್ಕ್ರಿಪ್ಷನ್ ಪಡೆಯಬೇಕಾಗುತ್ತದೆ. ಸದ್ಯಕ್ಕೆ ಈ ಚಂದಾದಾರಾಗಲು ಬೆಲೆ ಎಷ್ಟು ಅಥವಾ ಈ ಫೀಚರ್‌ ಯಾವಾಗ ಜಾರಿಗೆ ಬರಲಿದೆ ಎಂಬ ಬಗ್ಗೆ ಮೆಟಾ ಕಂಪನಿಯಿಂದ ಸ್ಪಷ್ಟತೆ ಲಭ್ಯವಾಗಿಲ್ಲ. ಮುಂಬರುವ ದಿನಗಳಲ್ಲಿ ಜಾಹೀರಾತು ಸಹಿತ ಉಚಿತ ಆವೃತ್ತಿ ಮತ್ತು ಜಾಹೀರಾತು ರಹಿತ ಪಾವತಿ ಆವೃತ್ತಿ ಎಂಬ ಎರಡು ಆಯ್ಕೆಗಳು ಬಳಕೆದಾರರಿಗೆ ಲಭ್ಯವಾಗಲಿವೆ. 

TAGGED:securityStrict Account SettingswhatsappWhatsapp Subscription
Share This Article
Facebook Whatsapp Whatsapp Telegram

Cinema news

Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood
ranveer singh deepika padukone 2
ಬಿಷ್ಣೋಯ್ ಗ್ಯಾಂಗ್‌ ಹೆಸರಲ್ಲಿ ರಣವೀರ್ ಸಿಂಗ್‌ಗೆ ಬೆದರಿಕೆ – ವಾಯ್ಸ್‌ ಮೆಸೇಜ್‌ನಲ್ಲಿ ಕೋಟಿ ಕೋಟಿ ಡಿಮ್ಯಾಂಡ್‌
Bollywood Cinema Crime Latest Top Stories
Gilli
ಗಿಲ್ಲಿ ನಾಯಕನಾಗಿ ನಟಿಸಿರೋ `ಸೂಪರ್ ಹಿಟ್’ ಚಿತ್ರ ಫೆ.27 ರಂದು ತೆರೆಗೆ
Cinema Latest Sandalwood Top Stories

You Might Also Like

Vande Mataram
Latest

ಇನ್ಮುಂದೆ ʻಜನಗಣಮನʼಕ್ಕೂ ಮುನ್ನ ʻವಂದೇ ಮಾತರಂʼ ಕಡ್ಡಾಯ – ಕೇಂದ್ರದಿಂದ ಹೊಸ ಮಾರ್ಗಸೂಚಿ

Public TV
By Public TV
57 seconds ago
Abhishek Sharma
Cricket

ಪಾಕ್ ಪಂದ್ಯಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ – ಅಭಿಷೇಕ್ ಶರ್ಮಾ ಆಸ್ಪತ್ರೆಗೆ ದಾಖಲು

Public TV
By Public TV
6 minutes ago
OM BIRLA RAHUL GANDHI
Latest

ಲೋಕಸಭಾ ಸ್ಪೀಕರ್‌ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ – ಮಾ.9 ರಂದು ಚರ್ಚೆ ಸಾಧ್ಯತೆ

Public TV
By Public TV
1 hour ago
Canada Shooting 1
Latest

ಕೆನಡಾ ಶಾಲೆಯಲ್ಲಿ ಗುಂಡಿನ ದಾಳಿ – ಶಂಕಿತ ಗನ್‌ಮ್ಯಾನ್‌ ಸೇರಿ 10 ಮಂದಿ ಸಾವು

Public TV
By Public TV
1 hour ago
Bengaluru Basavanagudi Theft Arrest
Bengaluru City

ಕಾರಿನ EMI ಕಟ್ಟಲು ದೊಡ್ಡಮ್ಮ ಕೆಲಸ ಮಾಡ್ತಿದ್ದ ಮನೆಯಲ್ಲೇ ಕಳ್ಳತನ – ಆರೋಪಿ ಅರೆಸ್ಟ್

Public TV
By Public TV
2 hours ago
daily horoscope dina bhavishya
Astrology

ದಿನ ಭವಿಷ್ಯ: 11-02-2026

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?