ಕ್ಯಾಲಿಫೋರ್ನಿಯಾ: ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಪ್ ಗ್ರೂಪ್ ಅಡ್ಮಿನ್ ಗಳಿಗೆ ಪರಮಾಧಿಕಾರ ನೀಡುವ ಫೀಚರ್ ಬಿಡುಗಡೆ ಮಾಡಿದೆ.
ಈ ಹೊಸ ಫೀಚರ್ ನಲ್ಲಿ ಒಂದು ಗ್ರೂಪ್‍ನಲ್ಲಿರುವ ಸದಸ್ಯರಿಗೆ ಆ ನಿರ್ದಿಷ್ಟ ಗ್ರೂಪ್‍ಗೆ ಸಂದೇಶ ಕಳುಹಿಸುವ ಹಕ್ಕನ್ನು ನೀಡಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುವ ಅಧಿಕಾರಿವನ್ನು ಅಡ್ಮಿನ್ ಗಳಿಗೆ ಕೊಟ್ಟಿದೆ.
Advertisement
ಗ್ರೂಪ್ ಚಾಟಿಂಗ್‍ಗಳಲ್ಲಿ ಕಿರಿಕಿರಿ ಉಂಟು ಮಾಡುವ ಹಾಗೂ ಅನಗತ್ಯ ಸಂದೇಶಗಳನ್ನು ಹಾಕುವುದರಿಂದ ಗ್ರೂಪ್ ಅಡ್ಮಿನ್‍ಗಳು ಬೇಸತ್ತು ಹೋಗಿದ್ದಾರೆ. ಈ ಹೊಸ ಫೀಚರ್ ಇಂತಹ ಗ್ರೂಪ್ ಅಡ್ಮಿನ್‍ಗಳಿಗೆ ವರದಾನವಾಗಿದೆ. ಆದರೆ ಗ್ರೂಪ್‍ನಲ್ಲಿ ಒಬ್ಬ ಅಥವಾ ಇಬ್ಬರು ಸದಸ್ಯರನ್ನು ಮಾತ್ರವೇ ಬ್ಲಾಕ್ ಮಾಡಲು ಈ ಫೀಚರ್ ನಲ್ಲಿ ಸಾಧ್ಯವಿಲ್ಲ.
Advertisement
ಈ ಹೊಸ ಫೀಚರ್ ನಲ್ಲಿ ಗ್ರೂಪ್‍ನ ಎಡಿಟ್, ಐಕಾನ್ ಚೇಂಜ್ ಹಾಗೂ ವಿಷಯಗಳನ್ನು ಬದಲಾವಣೆಗೊಳಿಸುವ ಅಧಿಕಾರ ಕೇವಲ ಗ್ರೂಪ್ ಅಡ್ಮಿನ್‍ಗೆ ಮಾತ್ರವೇ ಸೀಮಿತವಾಗಿರುವ ಆಯ್ಕೆಯನ್ನು ಒಳಗೊಂಡಿದೆ. ವಾಟ್ಸಪ್‍ನ ಒಂದು ನಿರ್ದಿಷ್ಟ ಗ್ರೂಪ್ ಅಡ್ಮಿನ್ ಆಯ್ಕೆ ಮಾಡಿದ ಸದಸ್ಯರನ್ನು ಇತರೆ ಅಡ್ಮಿನ್‍ಗಳು ತೆಗೆದು ಹಾಕದಂತೆ ಆಯ್ಕೆಯನ್ನು ಸಹ ಕಲ್ಪಿಸಿದೆ.
Advertisement
Advertisement
ಎಲ್ಲಿ ಚೆಂಜ್ ಮಾಡಬಹುದು?
ವಾಟ್ಸಪ್‍ನ ಹೊಸ ಆವೃತ್ತಿಯನ್ನು ಅಪ್ ಡೇಟ್ ಮಾಡಿಕೊಂಡ ನಂತರ, ವಾಟ್ಸಪ್ ನ ಒಂದು ನಿರ್ದಿಷ್ಟ ಗ್ರೂಪ್ ಸೆಟ್ಟಿಂಗ್ಸ್‍ನಲ್ಲಿ `ಗ್ರೂಪ್ ಇನ್ಫೋ’ ಮೇಲೆ ಕ್ಲಿಕ್ ಮಾಡಿದಾಗ `ಗ್ರೂಪ್ ಸೆಟ್ಟಿಂಗ್ಸ್’ ಎಂಬ ಹೊಸ ಆಯ್ಕೆ ನೀಡಲಾಗಿದೆ. ಇದರಲ್ಲಿ `ಸೆಂಡ್ ಮೆಸೇಜ್’ ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡಾಗ `ಆಲ್ ಪಾರ್ಟಿಸಿಪಂಟ್ಸ್’ ಅಥವಾ `ಓನ್ಲಿ ಅಡ್ಮಿನ್ಸ್’ ಎಂಬ ಎರಡು ಆಯ್ಕೆಗಳಿರುತ್ತವೆ. `ಓನ್ಲಿ ಅಡ್ಮಿನ್ಸ್’ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೇ ಉಳಿದ ಸದಸ್ಯರಿಗೆ ಸಂದೇಶ ಕಳುಹಿಸುವ ಅಧಿಕಾರವೇ ಇರುವುದಿಲ್ಲ. ಅಡ್ಮಿನ್‍ಗಳು ಹಾಕಿದ್ದನ್ನಷ್ಟೇ ವೀಕ್ಷಿಸಬಹುದಾಗಿದೆ. ಇದನ್ನೂ ಓದಿ: ವಾಟ್ಸಪ್ ಬಳಕೆದಾರರಿಗೆ ಗುಡ್‍ನ್ಯೂಸ್: ಮೆಮೊರಿ ಉಳಿಸಲು ಹೊಸ ಫೀಚರ್
ಎಲ್ಲರನ್ನು ಅಡ್ಮಿನ್ ಮಾಡಬೇಕಾಗುತ್ತೆ!
ಒಂದು ವೇಳೆ ಈ ಆಯ್ಕೆಯನ್ನು ಬಳಸಿದರೆ ಎಲ್ಲ ಸದಸ್ಯರ ಹಕ್ಕನ್ನೂ ಕಸಿದು ಕೊಳ್ಳಬೇಕಾಗುತ್ತದೆ. ಹೀಗಾಗಿ ಕಿರಿಕ್ ಮಾಡುವ ಸದಸ್ಯರನ್ನು ಬಿಟ್ಟು ಉಳಿದ ಸದಸ್ಯರನ್ನು ಅಡ್ಮಿನ್ ಮಾಡಿದರೆ ಮಾತ್ರ ಈ ವಿಶೇಷತೆಯನ್ನು ಬಳಸಬಹುದಾಗಿದೆ.