ಪುಣೆ: ವಾಟ್ಸಪ್ ಗ್ರೂಪ್ ನಿಂದ ರಿಮೂ ಮಾಡಿದ್ದಕ್ಕೆ ಗ್ರೂಪ್ ಆಡ್ಮಿನ್ ಗೆ ಚಾಕುನಿಂದ ಇರಿದ ಘಟನೆ ಅಹ್ಮದ್ ನಗರದಲ್ಲಿ ನಡೆದಿದೆ.
ಇಲ್ಲಿನ ಕೃಷಿ ಕಾಲೇಜು ವಿದ್ಯಾರ್ಥಿಗಳ ನಡುವೆ ಈ ಘಟನೆ ನಡೆಸಿದ್ದು, ಕಾಲೇಜಿನ ವಾಟ್ಸಪ್ ಗ್ರೂಪ್ ಆಡ್ಮಿನ್ ಚೈತನ್ಯ ಶಿವಾಜಿ ಭೋರ್ ಹಲ್ಲೆಗೊಳಗಾದ ವಿದ್ಯಾರ್ಥಿ. ಸಚಿನ್ ಗಡಾಖ್ ಮತ್ತು ಮತ್ತೊಬ್ಬ ವಿದ್ಯಾರ್ಥಿ ಶಿವಾಜಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ.
Advertisement
ಏನಿದು ಘಟನೆ: ಕಾಲೇಜಿನ ವಿಷಯಗಳ ಕುರಿತ ಮಾಹಿತಿ ಪಡೆಯುವ ಉದ್ದೇಶದಿಂದ ವಾಟ್ಸಪ್ ಗ್ರೂಪ್ ರಚನೆ ಮಾಡಲಾಗಿತ್ತು. ಈ ವಾಟ್ಸಪ್ ಗ್ರೂಪ್ ನಿಂದ ಸಚಿನ್ ಹಾಗೂ ಮತ್ತೊಬ್ಬ ವಿದ್ಯಾರ್ಥಿಯನ್ನು ರಿಮೂ ಮಾಡಲಾಗಿತ್ತು. ಇದರಿಂದ ಅಸಮಾಧನಗೊಂಡ ಇಬ್ಬರು ಆಡ್ಮಿನ್ ಶಿವಾಜಿಗೆ ಬುದ್ಧಿ ಕಲಿಸಲು ತೀರ್ಮಾನಿಸಿದ್ದರು.
Advertisement
Advertisement
ರಿಮೂ ಮಾಡಿದ್ದು ಯಾಕೆ?
ಸಚಿನ್ ಹಾಗೂ ಮತ್ತೊಬ್ಬ ವಿದ್ಯಾರ್ಥಿ ಅದೇ ಕಾಲೇಜಿನ ಹಳೆ ವಿದ್ಯಾರ್ಥಿಗಳಾಗಿದ್ದು, ಹಳೆ ವಿದ್ಯಾರ್ಥಿಗಳನ್ನು ಡಿಲೀಟ್ ಮಾಡುವ ವೇಳೆ ಇಬ್ಬರ ನಂಬರ್ ಗಳನ್ನು ತೆಗೆಯಲಾಗಿತ್ತು.
Advertisement
ಗ್ರೂಪ್ ನಿಂದ ಡಿಲೀಟ್ ಮಾಡಿದಕ್ಕೆ ಅಸಮಾಧಾನಗೊಂಡಿದ್ದ ಸಚಿನ್ ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಮೇ 17 ರ ರಾತ್ರಿ ಶಿವಾಜಿ ಊಟಕ್ಕೆ ತೆರಳಿದ್ದ ವೇಳೆ ದಾಳಿ ನಡೆಸಿದ್ದರು. ಶಿವಾಜಿಯ ಹೊಟ್ಟೆ, ಬೆನ್ನು ಹಾಗೂ ಮುಖಕ್ಕೆ ಚಾಕುನಿಂದ ಇರಿದಿರುವ ಆರೋಪಿಗಳು, ಬಳಿಕ ಸ್ಥಳದಿಂದ ಪರಾರಿಯಾಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹಲ್ಲೆಗೊಳಗಾದ ಶಿವಾಜಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಕುರಿತು ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 307 ಅಡಿ ದೂರ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ವಾಟ್ಸಪ್ ಕೆಲ ದಿನಗಳ ಹಿಂದೆ ಗ್ರೂಪ್ ಅಡ್ಮಿನ್ ಗೆ ಪರಮಾಧಿಕಾರವನ್ನು ನೀಡಿತ್ತು. ಫೋಟೋ, ಹೆಸರುಗಳನ್ನು ಚೇಂಜ್ ಮಾಡುವ ಸದಸ್ಯರನ್ನು ನಿರ್ಬಂಧಿಸುವ ಅನುಮತಿಯನ್ನು ಕಲ್ಪಿಸಿತ್ತು.